ಈ ಒಂದು ಮಂತ್ರ ಸಾಕು ನಿಮ್ಮನ್ನು ಸಿರಿ ಸಂಪತ್ತಿನಲ್ಲಿ ಮುಳುಗಿಸಲು.

0
3149

ಶ್ರೀ ಮಹಾಲಕ್ಷ್ಮೀ ಅಷ್ಟಕಮ್ ಹಾಗೂ ಅದರ ಭಾವರ್ಥವನ್ನು ತಿಳಿದು ಸಿರಿವಂತರಾಗಿ. ಈ ಸ್ತೋತ್ರವನ್ನು ಪ್ರತಿದಿನ ಬಿಡದೆ ಹೇಳಿಕೊಂಡರೆ ನೀವು ಹಾಗೂ ನಿಮ್ಮ ಕುಟುಂಬದವರು ಸುಖ ಶಾಂತಿ ನೆಮ್ಮದಿ ಇಂದ ಜೀವನ ಸಾಗಿಸುತ್ತೀರ. ತಾಯಿ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಲು ಇದು ಮೊದಲ ಮೆಟ್ಟಿಲು ಎಂದರೆ ತಪ್ಪಾಗಲಾರದು. ಈ ಮಂತ್ರವನ್ನು ಪಠಿಸುವುದರಿಂದ ತಾಯಿ ಸಂತುಷ್ಟಳಾಗುತ್ತಾಳೆ.

ನಮಸ್ತೇಸ್ಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ: ಹೇ ಮಹಾಮಯಾರೂಪಿಣಿಯೇ. ಸೌಭಾಗ್ಯದ ಗದ್ದುಗೆಯ ಮೇಲೆ ವಿರಾಜಿಸುವವಳೇ, ದೇವಾನುದೇವತೆಗಳಿಂದ ಪೂಜಿಸಿಕೊಂಬವಳೇ; ನಿನಗೆ ನಮಸ್ಕರಿಸುವೆ. ಹೇ! ಶಂಖ, ಚಕ್ರ, ಗಧೆಗಳನ್ನು ಧರಿಸಿರುವಾಕೆಯೇ, ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು. ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ ಸರ್ವಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ : ಹೇ ದೇವಿ ಗರುಢ ವಾಹನೆಯೇ! ಕೋಲನೆಂಬ ರಕ್ಕಸನನ್ನು ನಾಶಗೊಳಿಸಿದವಳೇ, ನಿನಗಿದೋ ನಮಸ್ಕಾರಗಳು. ಎಲ್ಲಾ ಪಾಪಗಳನ್ನು ನಾಶ ಮಾಡುವ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಸರ್ವಜ್ಞೇ ಸರ್ವವರದೇ ಸರ್ವದುಷ್ಟ ಭಯಂಕರಿ ಸರ್ವ ದು:ಖಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ : ಹೇ ದೇವಿ; ಸಮಸ್ತವನ್ನೂ ಬಲ್ಲಾಕೆಯೇ, ಎಲ್ಲವನ್ನೂ ಅನುಗ್ರಹಿಸುವಾಕೆಯೇ, ದುಷ್ಟರಿಗೆ ಭಯಂಕರ ರೂಪಿಣಿಯೂದವಳೇ, ಸಮಸ್ತ ದು:ಖವನ್ನು ಪರಿಹರಿಸುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು. ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ಮಂತ್ರಮೂರ್ತೇ ಸದಾ ದೇವೀ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ : ಹೇ ದೇವಿ; ಸಿದ್ಧಿ ಹಾಗೂ ಬುದ್ಧಿಗಳನ್ನು ಕರುಣಿಸುವವಳೇ, ಭೋಗ ಮತ್ತು ಮುಕ್ತಿಯನ್ನು ದಯಪಾಲಿಸುವಾಕೆಯೇ, ಮಂತ್ರಗಳಲ್ಲಿ ಅನುದಿನವೂ ನೆಲೆಸಿರುವವಳೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಆದ್ಯಂತರಹಿತೇ ದೇವಿ ಆದ್ಯಾಶಕ್ತಿ ಮಹೇಶ್ವರಿ ಯೋಗಜೇ ಯೋಗ ಸಂಭೂತೇ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ: ಆದಿಯೂ ಅಂತ್ಯವೂ ಇಲ್ಲದಿರುವ ದೇವಿಯೇ, ಆದಿಶಕ್ತಿಯೇ, ಮಹೇಶ್ವರಿಯೇ, ಯೋಗವನ್ನು ಕರುಣಿಸುವಾಕೆಯೇ, ಯೋಗಮಾಯೆಯಿಂದ ಜನಿಸಿದಾಕೆಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು. ಸ್ಥೂಲ ಸೂಕ್ಷ್ಮ ಮಹಾರೌದ್ರೇ ಮಹಾಶಕ್ತಿ ಮಹೋದರೇ ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ:- ಅಸಾಮಾನ್ಯಳೂ, ಸಾಮಾನ್ಯಳೂ, ಮಹಾರುದ್ರ ಸ್ವರೂಪಳೂ, ಮಹಾಶಕ್ತಿರೂಪಿಣಿಯೂ ಆಗಿರುವ ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಪದ್ಮಾಸನಸ್ಥಿತೇ ದೇವಿ ಪರಬ್ರಹ್ಮ ಸ್ವರೂಪಿಣಿ ಪರಮೇಶಿ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ:- ಹೇ ದೇವಿ; ಕಮಲದ ಮೇಲೆ ಆರೂಢಳಾಗಿರುವಾಕೆಯೇ, ಪರಬ್ರಹ್ಮ ರೂಪಿಣಿಯೇ, ಪರಮೇಶ್ವರಿಯೇ, ಜಗತ್ತಿನ ತಾಯಿಯೇ, ದೇವಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು. ಶ್ವೇತಾಂಬರಧರೇ ದೇವಿ ನಾನಾಲಂಕಾರಭೂಷಿತೇ ಜಗತ್ ಸ್ಥಿತೇ ಜಗನ್ಮಾತರ್ಮಹಾಲಕ್ಷ್ಮೀ ನಮೋಸ್ಸ್ತುತೇ. ಭಾವಾರ್ಥ : ಶುಭ್ರವಾಗಿರುವ ಬಿಳಿಯ ವಸ್ತ್ರವನ್ನು ಧರಿಸಿರುವಾಕೆಯೇ, ವಿವಿಧಾಲಂಕಾರಗಳಿಂದ ಶೋಭಿಸುತ್ತಿರುವಾಕೆಯೇ, ಜಗತ್ತಿಗೆ ಆಧಾರಶಕ್ತಿಯಾಗಿರುವಾಕೆಯೇ, ಜಗತ್ತಿನ ತಾಯಿ ಮಹಾಲಕ್ಷ್ಮೀಯೇ ನಿನಗೆ ನನ್ನ ನಮಸ್ಕಾರಗಳು.

ಶ್ರೀ ಮಹಾಲಕ್ಷ್ಮೀ ನಮೋಸ್ತುತೆ. ಶುಭವಂದನೆಗಳು, ಶುಭದಿನ, ಸರ್ವೇ ಜನಾಃ ಸುಖೀನೋ ಭವಂತು.

LEAVE A REPLY

Please enter your comment!
Please enter your name here