ಬಿಸಿ ನೀರಿಗಾಗಿ ಗ್ಯಾಸ್ ಗೀಸರ್ ಬಳಕೆ ಮಾಡುವವರಿಗೆ ಕಟ್ಟೆಚ್ಚರ..! ತಪ್ಪದೆ ಈ ಮಾಹಿತಿ ಓದಿ.

0
100661

ಹೊಸ ಹೊಸ ಅವಿಷ್ಕಾರಗಳು, ವಿವಿಧ ತಂತ್ರಜ್ಞಾನಗಳು ಮನುಷ್ಯನ ಜೀವನಕ್ಕೆ ಸೇರಿಕೊಳ್ಳುತ್ತಲೇ ಇವೆ, ಆದರೆ ಅದರಿಂದ ಎಷ್ಟು ಉಪಯೋಗವೂ ಅಷ್ಟೇ ಕೆಡುಕು ಅಥವ ಅಪಾಯ ಕೂಡ ಇರುತ್ತದೆ. ಈಗ ಇಂತಹದ್ದೇ ಒಂದು ತಂತ್ರಜ್ಞಾನದಿಂದ ಬೆಂಗಳೂರಿನ ಕುಟುಂಬವೊಂದು ಬಲಿಯಾಗಿದೆ.

ಹೌದು ಮನೆಯಲ್ಲಿ ಗ್ಯಾಸ್ ಗೀಸರ್ ಬಳಕೆ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಇಲ್ಲ ಅಂದರೆ ಅಪಾಯ ಕಟ್ಟಿ ಇತ್ತ ಬುತ್ತಿ, ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆ.ಜಿ.ನಗರದ ಲಕ್ಷ್ಮೀಪುರದಲ್ಲಿ ನಿವಾಸಿಗಳಾದ ೨೩ ವರ್ಷದ ಅರ್ಪಿತಾ ಮತ್ತು ತನ್ನ 3 ವರ್ಷದ ಮಗು ಸ್ನಾನದ ಕೋಣೆಯಲ್ಲಿ ಹಾಕಿದ್ದ ಗ್ಯಾಸ್ ಗೀಸರ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ಯಾಸ್ ಗೀಸರ್ ನಿಂದ ಹೊರಗೆ ಬಂದ ಕಾರ್ಬನ್ ಮಾನಾಕ್ಸೈಡ ನಿಂದ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ.

ಆ ದಿನ ಅರ್ಪಿತ ತಮ್ಮ ಮಗುವನ್ನು ಹೊರಗಡೆ ಆಟವಾಡಲು ಬಿಟ್ಟು ಸ್ನಾನ ಮಾಡಲೆಂದು ಸ್ನಾನದ ಕೋಣೆಗೆ ಹೋಗಿದ್ದಾರೆ, ಸುಮಾರು ಸಮಯ ಕಳೆದರು ತಾಯಿ ಅರ್ಪಿತ ಹೊರಗೆ ಬರದ್ದುದ್ದನ್ನು ಗಮನಿಸಿದ ಮಗು ಸ್ನಾನದ ಕೋಣೆಗೆ ಹೋಗಿದೆ, ಅರ್ಧಗಂಟೆ ಆದರೂ ಧ್ವನಿ ಕೇಳದಿದ್ದಾಗ ಅಜ್ಜ ಅಜ್ಜಿ ಇಬ್ಬರೂ ಕೂಗುತ್ತಾ ಮಗುವಿಗಾಗಿ ಹುಡುಕಾಡಿದ್ದಾರೆ. ಮಗು ಎಲ್ಲೂ ಕಾಣದಿದ್ದಾಗ, ಕೂಗಿಗೂ ಪ್ರತಿಕ್ರಿಯೆ ಬಾರದಿದ್ದಾಗ ಸ್ನಾನದ ಮನೆಯ ಬಾಗಿಲು ಬಡಿದರೆ ಬಾಗಿಲನ್ನು ಒಳಗಿನಿಂದ ಬಂದ್ ಮಾಡಿಕೊಳ್ಳಲಾಗಿತ್ತು. ಎಷ್ಟು ಕರೆದರೂ ತಾಯಿ ಮಗು ಇಬ್ಬರೂ ಮಾತನಾಡದಿದ್ದಾಗ ಮನೆಯವರೆಲ್ಲಾ ಸೇರಿ ಗಾಬರಿಯಿಂದ ಸ್ನಾನದ ಮನೆಯ ಬಾಗಿಲನ್ನು ಒಡೆದಾಗ ಒಳಗೆ ಕಂಡಿದ್ದು ಭೀಕರ ದೃಶ್ಯ. ತಾಯಿ ಮತ್ತು ಮಗು ಅದೇ ಸ್ಥಿತಿಯಲ್ಲೇ ನೆಲಕ್ಕೆ ಒರಗಿ ಬಿದ್ದಿದ್ದರು. ಇದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ಪ್ರಜ್ಞೆ ತಪ್ಪಿ ಮಲಗಿರಬೇಕು ಎಂದು ಆಸ್ಪತ್ರೆಗೆ ಸಾಗಿಸಲಾಗುತ್ತದೆ.

ತಾಯಿ ಮತ್ತು ಮಗುವನ್ನು ಪರೀಕ್ಷಿಸಿದ ವೈದ್ಯರು ಇಬ್ಬರೂ ಉಸಿರುಗಟ್ಟಿ ಸತ್ತಿರುವುದಾಗಿ ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವಿಗೆ ಕಾರ್ಬನ್ ಮಾನಾಕ್ಸೈಡ್ ಕಾರಣ ಎಂದು ತಿಳಿದುಬಂದಿದೆ. ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಗೀಜರ್ನಿಂದ ಉತ್ಪತ್ತಿಯಾದ ಕಾರ್ಬನ್ಮಾ ನಾಕ್ಸೈಡ್ನಿಂದ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ ಎನ್ನುವುದು ನಂತರದ ತನಿಖೆಯಿಂದ ದೃಢಪಟ್ಟಿದೆ.

ಈ ರೀತಿ ದುರ್ದೈವಕರ ಘಟನೆಗಳಿಂದ ದೂರವಿರಲು ಮತ್ತು ಗ್ಯಾಸ್ ಗೀಸರ್ ಹೇಗೆ ಅಳವಡಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ.

ಆಮ್ಲಜನಕ ಚೆನ್ನಾಗಿ ಹರಿದಾಡುವ ರೂಮಿನಲ್ಲಿ ಮಾತ್ರ ಗ್ಯಾಸ್ ಗೀಜರ್ ಅಳವಡಿಸಬೇಕು.

ಸ್ನಾನದ ಮನೆಯಲ್ಲಿ ಕಿಟಕಿಗಳು ಇರುವಂತೆ, ಹಾಗೂ ಆ ಕಿಟಕಿಯಲ್ಲಿ ಒಳಗಿನ ಗಾಳಿ ಹೊರಗೆ ಮತ್ತು ಹೊರಗಿನ ಗಾಳಿ ಒಳಗೆ ಬರುವಂತೆ ಎರಡೂ ದಿಕ್ಕುಗಳಲ್ಲೂ ಕಿಟಕಿ ಅಥವಾ ವೆಂಟಿಲೇಟರ್ ಇರುವಂತೆ ನೋಡಿಕೊಳ್ಳಿ.

ಕಿಟಕಿಗಳು ಇಲ್ಲದಿದ್ದರೆ ಗ್ಯಾಸ್ ಗೀಜರ್ನಿಂದ ಬಿಸಿ ನೀರನ್ನು ಮೊದಲೇತುಂಬಿಸಿ ಇಟ್ಟುಕೊಂಡು ಗ್ಯಾಸ್ ಆಫ್ ಮಾಡಿದನಂತರವಷ್ಟೆ ಸ್ನಾನಕ್ಕೆ ಹೋಗುವುದು ಉತ್ತಮ. ಗ್ಯಾಸ್ ಗೀಜರ್ನಿಂದ ನೀರು ತುಂಬಿಸುವಾಗಲೂ ಸ್ನಾನ ಗೃಹದ ಬಾಗಿಲು ತೆರೆದಿರಲಿ.

ಗ್ಯಾಸ್ ಆಫ್ ಮಾಡಿದ ಕೆಲವುನಿಮಿಷಗಳ ನಂತರ ಸ್ನಾನಕ್ಕೆ ಹೋಗುವುದು ಒಳ್ಳೆಯದು. ಮಕ್ಕಳನ್ನು ಸ್ನಾನ ಮಾಡಿಸುವಾಗ ಸ್ನಾನ ಗೃಹದ ಬಾಗಿಲು ಅರ್ಧ ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಿ.

ಗ್ಯಾಸ್ ನಲ್ಲಿ ಆಮ್ಲಜನಕ ಸರಬರಾಜು ಕಡಿಮೆ ಆದಾಗ ಅದು ಅರ್ಧದಷ್ಟು ಮಾತ್ರ ಉರಿಯುತ್ತಿರುತ್ತದೆ. ಅದು ಮುನ್ನೆಚ್ಚರಿಕೆ, ಎಚ್ಚರಿಕೆ ತೆಗೆದುಕೊಳ್ಳುವ ಮೊದಲೇ ಅನಾಹುತ ಸಂಭವಿಸಿಬಿಡುವುದರಿಂದ ಎಷ್ಟು ಬೇಗ ಸ್ನಾನ ಗೃಹದಿಂದ ಹೊರಗೆ ಬರುತ್ತೀರೋ ಅಷ್ಟು ಉತ್ತಮ.

ಗ್ಯಾಸ್ ಗೀಜರ್ನಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮೊದಲು ನೆಲ ಮಟ್ಟದಿಂದ ಸ್ನಾನದ ಮನೆಯಲ್ಲಿ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ, ಇದರಿಂದ ಕುಳಿತು ಸ್ನಾನ ಮಾಡುವವರ ಮೂಗಿಗೆ ತಕ್ಷಣ ಸೋಕಿ ಬೇಗ ಸಾವು ಸಂಭವಿಸುತ್ತದೆ.
ನಿಂತು ಸ್ನಾನ ಮಾಡುವಾಗ 3 ರಿಂದ 4 ನಿಮಿಷದೊಳಗೆ ಸಾವು ಸಂಭವಿಸುತ್ತದೆ, ಅಷ್ಟರಲ್ಲಿ ಸ್ನಾನ ಮುಗಿದು ಬಾಗಿಲು ತೆರೆದರೆ ಅವರು ಅದೃಷ್ಟವಂತರು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here