ಸುಮಾರು ಹತ್ತು ವರ್ಷಗಳ ಹಿಂದೆ ಹೋದರೆ ಸಾಕು ನಮ್ಮ ತಾಯಿ-ತಂದೆಯರು ನಮಗೆ ಆಗಾಗ ಪೊರಕೆ ಕಡ್ಡಿ ಹೊತ್ತಿಸಿ ನಿವಳಿಸುತ್ತಿದ್ದರು, ಮಕ್ಕಳಿಗೆ ಜ್ವರ ಬಂದರೆ, ಅಥವಾ ಏನನ್ನಾದರೂ ನೋಡಿ ಗಾಬರಿ ಯಾದರೆ, ಮಕ್ಕಳಿಗೆ ದೃಷ್ಟಿಯಾದರೆ ಈ ರೀತಿಯ ಆಚರಣೆಯನ್ನು ಹಿಂದಿನ ಪೋಷಕರು ಮಾಡುತ್ತಿದ್ದರು, ಇದನ್ನು ನಾವು ತಮಾಷೆಯಾಗಿ ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಕಾರಣ ಹೀಗೆ ಮಾಡುವುದರ ಹಿಂದೆ ಯು ವಿಜ್ಞಾನದ ವಿವರಣೆಯಿದೆ ಅದೇನು ಎಂಬುದನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಹಿಂದಿನ ಕಾಲದಲ್ಲಿ ಸಣ್ಣ ಮಕ್ಕಳು ಕರಡಿ, ಹುಲಿ, ಚಿರತೆ ಹಾಗೂ ಆನೆ ಗಳಂತಹ ಪ್ರಾಣಿಗಳನ್ನು ಪ್ರತ್ಯಕ್ಷವಾಗಿ ನೋಡಿದಾಗ ಅಥವಾ ಬೆಕ್ಕುಗಳ ಕಾದಾಟದ ಶಬ್ದ ಕೇಳಿದಾಗ, ಕೆಟ್ಟ ಕನಸುಗಳು ಕಂಡು ಬೆಚ್ಚಿ ಬಿದ್ದಾಗ ಚಿಟ್ಟನೆ ಚಿರುತ ಅಳುತ್ತದೆ, ಆ ಮಗುವಿನ ಮೇಲೆ ಇದರಿಂದ ತೀವ್ರ ಪರಿಣಾಮ ಉಂಟಾಗಿ ಜ್ವರ ಬರಬಹುದು, ಆದ್ದರಿಂದ ಪೋಷಕರು ಮಕ್ಕಳನ್ನು ಕಾಳಜಿವಹಿಸಿ ಜೋಪಾನ ಮಾಡಬೇಕು.
ಇಂತಹ ಸಂದರ್ಭಗಳು ಅನಿರೀಕ್ಷಿತವಾಗಿ ಪೋಷಕರಿಗೆ ಎದುರಾಗುತ್ತವೆ, ಅಂತಹ ಸಮಯದಲ್ಲಿ ತಾಯಿಯಂದಿರು ಸ್ವಲ್ಪ ಪೊರಕೆ ಕಡ್ಡಿಗಳನ್ನು ಒಟ್ಟಿಗೆ ಹತ್ತಿಸಿ ಮುಖದ ಹತ್ತಿರ ನೀವಳಿಸಿ, ಅದನ್ನು ಕೋಣೆಯ ಮೂಲೆಯಲ್ಲಿ ಇರಿಸುತ್ತಾರೆ, ಇದರಿಂದ ಹೇಗೆ ಮಕ್ಕಳ ಗಾಬರಿ ಅಥವಾ ಭಯ ಕಡಿಮೆಯಾಗುತ್ತದೆ ಎಂಬ ಪ್ರಶ್ನೆಯು ನಿಮ್ಮನ್ನು ಕಾಡಿರಬಹುದು.
ಇಂತಹ ಸೂತ್ರ ಅನುಸರಿಸುವುದರಿಂದ ಪ್ರಕಾಶಮಾನವಾದ ಬೆಳಕು ಹರಡುತ್ತದೆ, ಕೂಸು ಇದರ ಕಡೆ ತನ್ನ ಚಿತ್ತ ಬದಲಿಸುತ್ತದೆ, ಪೊರಕೆ ಕಡ್ಡಿ ಚಟಚಟ ಶಬ್ದ ಮಾಡುವುದರಿಂದ ಮಕ್ಕಳ ಹೇಕಾಗ್ರತೆ ಈ ಶಬ್ದವನ್ನು ಆಲಿಸುವ ಮೂಡುತ್ತದೆ, ಅಷ್ಟೊತ್ತಿಗಾಗಲೇ ಮಗುವು ಮೌನದಲ್ಲಿ ಮೈಮರೆತು ಮಲಗುತ್ತದೆ, ಹೆತ್ತ ಕಂದನ ಮನೋವಿಕಾಸಕ್ಕೆ ದಾರಿ ತೋರುವ ಈ ಆಚಾರ, ವಿಚಾರ ಪೂರ್ವಕವಾಗಿದೆ.
ಕರುಳಿನ ಕುಡಿಯ ಆರೈಕೆಗೆ ಮನೆಮದ್ದು ತಯಾರಿಸಿದ ಹಿರಿಯರು, ಅತಿ ರೋದಿಸುತ್ತಿರುವ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಅಗತ್ಯ ಚಿಕಿತ್ಸೆ ನೀಡುವುದು ಉತ್ತಮ, ಏಕೆಂದರೆ ಹೊಟ್ಟೆನೋವು, ತಲೆಶೂಲೆ ಗಳಿಂದಲೂ ಆ ಶಿಶುವು ಕಿರಿಕಿರಿ ಮಾಡುತ್ತಿರಬಹುದು ಅಲ್ಲವೇ, ಈ ಸೂತ್ರ ಕೆಲಸಕ್ಕೆ ಬರಲಿಲ್ಲ ಎಂದು ಸುಮ್ಮನೆ ಕೂರುವುದು ಕೆಲವು ಸಂದರ್ಭಗಳಲ್ಲಿ ಒಳ್ಳೆಯದಲ್ಲ.