ನಾವು ಹೇಳೋ ಸಮಯಕ್ಕೆ ನೀರು ಕುಡಿದು ದೇಹದ ತೂಕ ಕಡಿಮೆ ಮಾಡಿಕೊಳ್ಳಿ

0
1365

ತೂಕ ಇಳಿಸಲು ಆನ್ಲೈನ್ ಮುಕಾಂತರ ದೊರೆಯುವ ಫ್ಯಾಟ್ ಬರ್ನರ್ ಅನ್ನು ಉಪಯೋಗಿಸಿ ನಿಮ್ಮ ದೇಹದಲ್ಲಿ ಸೈಡ್ ಎಫೆಕ್ಟ್ ಗಳಿಗೆ ಆಮಂತ್ರಣ ಕೊಡುವ ಬದಲು ನಾವು ನಿಮಗೆ ತಿಳಿಸುವ ಸುಲಭ ಉಪಾಯದ ಮುಕಾಂತರ ನಿಮ್ಮ ತೂಕವನ್ನ ಹತ್ತೇ ದಿನದಲ್ಲಿ ಕಡಿಮೆ ಮಾಡಿಕೊಳ್ಳಿ.

ಸಾಮಾನ್ಯವಾಗಿ ಊಟದ ಸಮಯವಲ್ಲದಿದ್ದರು ನಿಮಗೆ ಕೆಲವೊಮ್ಮೆ ಹಸಿವಾಗುವುದುಂಟು ಹಾಗ ನೀವು ಕುರುಕುಲು ತಿಂಡಿಗಳನ್ನು ತಿನ್ನುತ್ತೀರಿ, ಅದರ ಬದಲಿಗೆ ನೀವು ನೀರನ್ನು ಕುಡಿಯ ಬೇಕು, ಅಂತ ಸಮಯದಲ್ಲಲಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ಕ್ಯಾಲರಿಗಳು ಕರಗುವ ಸಾಧ್ಯತೆ ಹೆಚ್ಚಿರುತ್ತದೆ.

ನಿಮ್ಮ ದೇಹದ ತೂಕ ಇಳಿಸಲು ನಾವು ನೀಡುವ ಸುಲಭ ಉಪಾಯವೆಂದರೆ ಅದು ಕುಡಿಯುವ ನೀರು ಹೌದು ಭೂಮಿಯಲ್ಲಿ ಸಿಗುವ ಅತಿ ದೊಡ್ಡ ಸಂಪನ್ಮೂಲ ಅದು ನೀರು, ನಿಮ್ಮ ದೇಹದ್ಲಲಿ ಅತಿ ಹೆಚ್ಚು ನೀರೇ ಇರುವುದು, ಇನ್ನು ಈ ಕುಡಿಯುವ ನೀರನ್ನು ನಾವು ಹೇಳುವ ಸಮಯದಲ್ಲಿ ಹೇಳಿದಷ್ಟು ಕುಡಿದರೆ ಸಾಕು ನಿಮ್ಮ ದೇಹದ ತೂಕ ಇಳಿಕೆಯ ವೆತ್ಯಾಸ ನಿಮಗೆ ತಿಳಿಯುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಲೀಟರ್ ನೀರನ್ನು ಕುಡಿಯಿರಿ ನಂತರ ಊಟಕ್ಕೂ ಒಂದು ಘಂಟೆ ಮುಂಚೆ ಕುಡಿಯಿರಿ, ಪ್ರತಿ ಸಲ ನೀವು ಕಾಫೀ ಅಥವಾ ಟಿ ಕುಡಿದಾಗ ಚೆನ್ನಾಗಿ ನೀರು ಕುಡಿಯ ಬೇಕು ಹಾಗೆ ಪ್ರತಿ ಬಾರಿ ಆಹಾರ ಸೇವನೆಯ ಒಂದು ಗಂಟೆಯ ಮೊದಲು ನೀರನ್ನು ಸೇವಿಸಿ ಕೊನೆಯಲ್ಲಿ ರಾತ್ರಿ ಮಲಗುವ ಎರಡು ಗಂಟೆಯ ಮುನ್ನ ನೀರನ್ನು ಚೆನ್ನಾಗಿ ಕುಡಿದರೆ, ನಿಮ್ಮ ದೇಹದ ಬೇಡವಾದ ಕೆಟ್ಟ ಬೊಜ್ಜು ತಾನಾಗೇ ಕರಗುತ್ತದೆ.

ಶುರುವಿನಲ್ಲಿ ನಿಮಗೆ ಮೂತ್ರವಿಸರ್ಜನೆಯ ತೊಂದರೆ ಉಂಟಾದರೂ ಕಾಲಕ್ರಮೇಣ ನಿಮ್ಮ ದೇಹ ಹೊಂದಿಕೊಳ್ಳುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕ್ಕೊಳ್ಳಿ.

LEAVE A REPLY

Please enter your comment!
Please enter your name here