ಹೌದು ನುಗ್ಗೆಕಾಯಿ ನೈಸರ್ಗಿಕವಾಗಿ ಸಿಗುವಂತದಾಗಿದ್ದು ಇದರಲ್ಲಿ ಆರೋಗ್ಯಕಾರಿ ಅಂಶಗಳು ತುಂಬಾನೇ ಇದೆ, ನೀವು ನುಗ್ಗೆಕಾಯಿ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುತ್ತೀರಾ ಆದರೆ ನುಗ್ಗೆಕಾಯಿ ಮಹತ್ವ ಎಷ್ಟೊಂದು ಇದೆ ಗೋತ್ತಾ ಈ ಮುಂದೆ ನೋಡಿ.
ನುಗ್ಗೇಕಾಯಿಯಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಇದು ಸಾಮಾನ್ಯ ಫ್ಲೂ ಜ್ವರ, ಗಂಟಲ ಬೇನೆ, ಕೆರೆತ, ಶೀತ ಮೊದಲಾದ ವೈರಸ್ ಆಧಾರಿತ ಕಾಯಿಲೆಗಳನ್ನು ಹತ್ತಿಕ್ಕಲು ನೆರವಾಗುತ್ತದೆ. ಇದಕ್ಕಾಗಿ ನುಗ್ಗೇಕಾಯಿಯ ಸೂಪ್ ಅಥವಾ ರಸಂ ಮಾಡಿ ಬಿಸಿಬಿಸಿಯಾಗಿ ಸೇವಿಸುವುದು ಒಳ್ಳೆಯದು.
ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ ನುಗ್ಗೆಯ ಎಲೆಗಳನ್ನು ಅರೆದು ಕೊಂಚ ಜೇನಿನಲ್ಲಿ ಮಿಶ್ರಣ ಮಾಡಿ ಇದನ್ನು ಎಳನೀರಿನೊಂದಿಗೆ ಸೇವಿಸುವ ಮೂಲಕ ಹೊಟ್ಟೆಯಲ್ಲಿ ಉರಿ ಕಡಿಮೆಯಾಗುತ್ತದೆ. ಅಲ್ಲದೇ ಅತಿಸಾರ, ಕಾಲರಾ, ಜಾಂಡೀಸ್ ಮೊದಲಾದ ಕಾಯಿಲೆಗಳೂ ಶೀಘ್ರವಾಗಿ ಗುಣವಾಗುತ್ತವೆ.
ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ನುಗಳ ಕಾರಣ ದೇಹದ ಮೂಳೆಗಳು ಇನ್ನೂ ಹೆಚ್ಚಾಗಿ ದೃಢಗೊಳ್ಳಲು ಸಾಧ್ಯವಾಗುತ್ತದೆ, ನಿಯಮಿತವಾಗಿ ಸೇವಿಸುತ್ತಾ ಬಂದರೆ ಕ್ರಮೇಣ ಮೂಳೆಗಳ ದೃಢತೆ ಹೆಚ್ಚುತ್ತಾ ಹೋಗುತ್ತದೆ.
ಒಂದು ವೇಳೆ ಗಂಟಲಲ್ಲಿ ಕೆರೆತ, ಶೀತ ಅಥವಾ ಕಫ ಕಟ್ಟಿಕೊಂಡಿದ್ದರೆ ಇದಕ್ಕೆ ನುಗ್ಗೇಕಾಯಿಯ ಸೂಪ್ ಉತ್ತಮ ಪರಿಹಾರವಾಗಿದೆ. ಇದರ ಉರಿಯೂತ ನಿವಾರಕ ಗುಣಗಳು ವಿಶೇಷವಾಗಿ ಶ್ವಾಸ ಸಂಬಂಧಿ ಸೋಂಕುಗಳಿಂದ ರಕ್ಷಿಸಲು ನೆರವಾಗುತ್ತದೆ. ಅಲ್ಲದೇ ಶ್ವಾಸ ಸಂಬಂಧಿ ತೊಂದರೆಗಳಾದ ಅಸ್ತಮಾ, ಮತ್ತು ಕ್ಷಯದಂತಹ ರೋಗಗಳ ವಿರುದ್ದ ಹೋರಾಡುವ ಒಂದು ನೈಸರ್ಗಿಕ ವಿಧಾನವೂ ಆಗಿದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಈ ರಸವನ್ನು ತೆಳ್ಳಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಚರ್ಮದ ಕಾಂತಿಯೂ ಹೆಚ್ಚುತ್ತದೆ, ನುಗ್ಗೇಕಾಯಿ ಮಧುಮೇಹವನ್ನು ನಿಯಂತ್ರಿಸುತ್ತದೆ ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಉತ್ತಮವಾಗಿದೆ.
ವಯಸ್ಸಾದಂತೆ ಕಣ್ಣಿನ ದೃಷ್ಟಿ ಕುಂದಲು ಕಣ್ಣಿನ ಅಕ್ಷಿಪಟಲದ ಸೋಂಕು ಸಹಾ ಒಂದು ಕಾರಣ. ನುಗ್ಗೇಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸೋಂಕು ತಗಲುವ ಸಂಭವ ಕಡಿಮೆಯಾಗಿ ಅಕ್ಷಿಪಟಲದ ಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಬಹಳ ವರ್ಷಗಳವರೆಗೆ ಕನ್ನಡಕ ಉಪಯೋಗಿಸುವ ಸಾಧ್ಯತೆಯನ್ನು ಮುಂದೆ ಹಾಕಬಹುದು.
ನುಗ್ಗೇಕಾಯಿ ಒಂದು ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದ್ದು ವಿವಿಧ ಬಗೆಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಗಂಟಲ ಮೇಲ್ಭಾಗ, ಎದೆ ಮತ್ತು ಚರ್ಮದ ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಇದರ ಎಲೆ ಮತ್ತು ಹೂವುಗಳ ಸೂಪ್ ಮಾಡಿಕೊಂಡು ಕುಡಿಯುವ ಮೂಲಕ ಈ ಸೋಂಕುಗಳನ್ನು ಕಡಿಮೆ ಮಾಡಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.