ಹಣ ಕೊಟ್ಟು ಹೆಣ ಕೊಂಡೊಯ್ಯಿರಿ. ಎಂಥಹ ಕ್ರೂರ ವರ್ತನೆ.

0
1215

ಖಾಸಗಿ ಆಸ್ಪತ್ರೆಗಳು ಕೊರೋನಾ ರೋಗವನ್ನು ಒಂದು ರೀತಿಯ ದಂ’ಧೆಯನ್ನಾಗಿ ಮಾಡಿಕೊಂಡಿವೆ ಎಂದರೆ ತಪ್ಪಾಗಲಾರದು. ಬಡಜನರ ನೋವು ಸಂಕಟಗಳು ಈ ಕೊರೊನ ಸಮಯದಲ್ಲಿ ಹೆಚ್ಚಾಗುತ್ತಿದ್ದು ಜೀವ ಉಳಿಸಿಕೊಳ್ಳುವುದು ಅಸಾಧ್ಯವೆಂಬಂತೆ ತೋರುತ್ತಿದೆ. ವಿಜಯಪುರದಲ್ಲಿ ನಡೆದ ಒಂದು ಘಟನೆ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸುವಂತಹದ್ದು. ಕೋ’ರೋನ ಮಹಾಮಾರಿ ವಿಜಯಪುರ ಜಿಲ್ಲೆಯಲ್ಲಿ ರುದ್ರ ತಾಂಡವವಾಡುತ್ತಿದೆ. ಈ ವಿಷಯವನ್ನು ಲಾಭವಾಗಿ ಪಡೆಯಲು ಮುಂದಾಗಿರುವ ಕೆಲ ಕಾಸಗಿ ಆಸ್ಪತ್ರೆಗಳು ಬರುವ ರೋಗಿಗಳಲ್ಲಿ ಆದಷ್ಟು ಹಣವನ್ನು ಪೀಕಲು ಮುಂದಾಗಿದೆ.

ಇಲ್ಲಿ ಚಿಕಿತ್ಸೆಗೆಂದು ಬರುವವರ ಪೈಕಿ ಕಡು ಬಡವರೇ ಹೆಚ್ಚು. ರಾಜು ಬುವಿ ಎಂಬುವವರು ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದರು. 18 ದಿನಗಳ ಹಿಂದೆ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಅವರು ಇಲ್ಲಿಯವರೆಗೂ ಎಷ್ಟು ಬಿಲ್ ಪಾವತಿಸಿರಬಹುದು ಎಂದು ಕೇಳಿದರೆ ನಮಗೆಲ್ಲ ಶಾಕ್ ಆಗುತ್ತದೆ. ಬರೋಬ್ಬರಿ 4.80 ಲಕ್ಷ ರೂಪಾಯಿಗಳನ್ನು ಕುಟುಂಬಸ್ಥರು ಇಲ್ಲಿಯವರೆಗೂ ಆಸ್ಪತ್ರೆಗೆ ಪಾವತಿಸಿದ್ದಾರೆ. ಆದರೆ ಕಥೆಯು ಇಲ್ಲಿಗೆ ಮುಗಿಯಲಿಲ್ಲ.

ಆಸ್ಪತ್ರೆಯವರು ಹಣ ದೋಚಲು ಎಂತಹ ಮಟ್ಟಕ್ಕೆ ತಿಳಿಯುವುದಕ್ಕೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ. 2.70 ಲಕ್ಷ ರೂಪಾಯಿಗಳು ಮತ್ತೆ ಕಟ್ಟಿ ಶವವನ್ನು ಕೊಯ್ಯುವಂತೆ ಆಸ್ಪತ್ರೆ ವೈದ್ಯರು ಸೂಚಿಸಿದ್ದಾರಂತೆ. ಹಣವನ್ನು ಕಟ್ಟಿದರೆ ಮಾತ್ರ ಶವವನ್ನು ಕೊಡುವುದು. ಹಣ ಕಟ್ಟದಿದ್ದರೆ ಮೃತನ ದೇಹವನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹಣ ಕಟ್ಟುವವರೆಗೂ ಮೃತನ ಪತ್ನಿಗೆ ಶವ ನೋಡಲು ಬಿಡದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ನೊಂದ ಕುಟುಂಬಸ್ಥರು ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ ಮಾಡಿ ಸ್ಥಳದಲ್ಲೇ ಭಿಕ್ಷೆಬೇಡಿ ಹಣ ಜಮಾಯಿಸಿ ಶವ ಪಡೆಯಲು ಮುಂದಾಗಿದ್ದಾರೆ.

ಇದಾದ ನಂತರ ಆಸ್ಪತ್ರೆಯ ಸಿಬ್ಬಂದಿಗಳೇ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಬಲ್ಲ ಮೂಲಗಳ ಪ್ರಕಾರ ತಿಳಿದುಬಂದಿದೆ. ಸದ್ಯ ಆಸ್ಪತ್ರೆಯ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಆದರ್ಶ ನಗರ ಪೊಲೀಸ್ ಸಿಬ್ಬಂದಿಗಳು ದೌಡಾಯಿಸಿದ್ದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಪಡುತ್ತಿದ್ದಾರೆ. ಗಂಡನನ್ನು ಕಳೆದುಕೊಂಡ ಆ ಹೆಣ್ಣು ಮಗುವಿನ ಪರಿಸ್ಥಿತಿ ನೆನಸಿಕೊಂಡರೆ ನಮ್ಮ ಕಣ್ಣುಗಳು ತುಂಬಿ ಬರುತ್ತದೆ.

ಇದಾವುದನ್ನು ಲೆಕ್ಕಿಸದೆ ಬರೀ ಹಣ ದೋಚಲು ಮುಂದಾಗಿರುವ ಕೆಲ ಖಾಸಗಿ ಆಸ್ಪತ್ರೆಗಳು ಇಂತಹ ಹಲವಾರು ಕೃತ್ಯಗಳನ್ನು ಎಸಗುತ್ತಿವೆ. ಸಾಮಾನ್ಯ ಜನರ ಜೀವ ಉಳಿಸುವ ವೈದ್ಯರೇ ಇಂತಹ ಅಮಾನವೀಯ ವರ್ತನೆಯನ್ನು ತೋರಿದರೆ ಬಡ ಜನರ ಜೀವನ ಏನಾಗುವುದು ಎಂಬ ದೊಡ್ಡ ಪ್ರಶ್ನೆ ನಮ್ಮೆಲ್ಲರಿಗೂ ಮೂಡುತ್ತದೆ.

LEAVE A REPLY

Please enter your comment!
Please enter your name here