ನವರಾತ್ರಿಯ ಆರನೆಯ ದಿನ ಕಾತ್ಯಾಯಿನಿ ದೇವಿಯ ಆರಾಧನೆ ಹೀಗೆ ಮಾಡಿ.

0
1669

ಷಷ್ಠೀ ತಿಥಿಯ ದುರ್ಗಾ ಮತ್ತು ಸರಸ್ವತೀ ಪೂಜೆ. ಇಂದು ಷಷ್ಠೀ ತಿಥಿ ಮೂಲಾ ನಕ್ಷತ್ರದಲ್ಲಿ ಆಚರಿಸುವಂತಹ ನವರಾತ್ರಿಯ ಆರನೆಯ ದಿನ ದುರ್ಗೇಯನ್ನು ಕಾತ್ಯಾಯಿನಿ ರೂಪದಲ್ಲಿ ಆರಾಧನೆ ಮಾಡುತ್ತಾರೆ. ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ. ಕಾತ್ಯಾಯನನ ಮಗಳು ಕಾತ್ಯಾಯನಿ ಎಂದು ಶಾಸ್ತ್ರದಲ್ಲಿದೆ. ಕಾತ್ಯಾಯನ ಋಷಿಯ ಮಗಳು ದೇವತೆಗಳಿಗೆ ಸಹಾಯ ಮಾಡಲು ಅವತರಿಸಿದಳು. ಈ ದಿನ ಚಂಡಮುಂಡಾಸುರರನ್ನು ಸಂಹಾರಮಾಡಿ ಚಾಮುಂಡಿ ಅನ್ನುವ ಹೆಸರನ್ನು ಪಡೆಯುತ್ತಾಳೆ. ಈಕೆ ವಿಜಯದ ಸಂಕೇತ, ಅಲ್ಲದೆ ಈಕೆ ಹಸಿರು ಬಣ್ಣವನ್ನು ಪ್ರತಿನಿಧಿಸುವದರಿಂದ, ಸಮೃದ್ಧಿಯ ಸಂಕೇತವೂ ಹೌದು.

ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹೌದು. ಆದರೆ ದು’ಷ್ಟರ ಪಾಲಿಗೆ ಮಾತ್ರ ಸಂ’ಹಾರಕಾರಿಣಿಯಾದ ದುರ್ಗೇ. ಈಕೆಯ ಇನ್ನೊಂದು ವಿಶೇಷತೆ ಅಂದರೆ ಗುರುಗ್ರಹವನ್ನು ಪ್ರತಿನಿಧಿಸಿ ಗುರುವಿನೊಂದಿಗೆ ಸಹಯೋಗವನ್ನು ಹೊಂದಿದ್ದಾಳೆ. ಬ್ರಹ್ಮಮಂಡಲದ ಆದಿಸೃಷ್ಟಿ ಎಂಬ ಹೆಸರೂ ದೇವಿಗಿದೆ. ಅಂದರೆ ಗುರುಬಲವಿಲ್ಲದೆ ಮದುವೆ, ಮುಂಜಿವೆ ಶುಭಕಾರ್ಯಗಳು ನಡೆಯುವದಿಲ್ಲ. ಹೀಗಾಗಿ ಎಲ್ಪ ಶುಭಕಾರ್ಯಗಳು ನೆರವೇರಲು ಈಕೆಯ ಅನುಗ್ರಹ ಬೇಕು, ಆದ್ದರಿಂದ ಈಕೆಯನ್ನು ಶ್ರದ್ಧೆಯಿಂದ ಪೂಜಿಸಿದರೆ ಗುರುಬಲ ಕೂಡಿಬಂದು ಮನೆಯಲ್ಲಿ ಮದುವೆ, ಮದುವೆ ಕಾರ್ಯಗಳು ನೆರವೇರುತ್ತವೆ.

ಯಾರಿಗೆ ಗುರುಬಲದ ಸಮಸ್ಯೆ ಇದೆ, ಅವರು ಒಂದು ದೊನ್ನೆ ಕಡಲೆಕಾಳನ್ನು ನಾಳೆಯ ದಿನ ತಾಂಬೂಲ ದಕ್ಷಿಣಾಸಹಿತ ದಾನ ಕೊಟ್ಟರೆ ಬಹಳ ಒಳ್ಳೆಯದು. ಇಂದು ಜೊತೆಗೆ ಮೂಲಾ ನಕ್ಷತ್ರದಲ್ಲಿ ಸರಸ್ವತಿ ಆಹ್ವಾನ ಪೂಜೆ ಇರುತ್ತದೆ. ಪುಸ್ತಕೇಷು ಸರಸ್ವತಿ ಆಹ್ವಾನ ನಂತರ ಪುಸ್ತಕದ ರೂಪದಲ್ಲಿರುವ ಸರಸ್ವತಿಗೆ ಶೋಡಶೋಪಚಾರ. ನಾನಾವಿದ ಪತ್ರಗಳನ್ನು ದೇವಿಗೆ ಪೂಜಿಸುವಾಗ ಅರ್ಪೀಸಬೇಕು. ಅಲ್ಲದೆ ಹಳದಿ ಮತ್ತು ಕೆಂಪು ಹೂಗಳಿಂದ ದುರ್ಗೆಯನ್ನು ಪೂಜಿಸಿ. ಸರಸ್ವತಿಗೆ ಬೆಳ್ಳಿ ಗೆಜ್ಜೆ ವಸ್ತ್ರ ಬಿಳಿ ಹೂವು ಏರಿಸಬೇಕು. ಈ ದಿನ ಇನ್ನೊಂದು ವಿಶೇಷತೆ ಏನೆಂದರೆ ಮಕ್ಕಳ ಕೈಯಿಂದ ಬಡ ಮಕ್ಕಳಿಗೆ ಪುಸ್ತಕ ,ಪೆನ್ನುಗಳನ್ನು ದಾನ ಕೊಡಿಸಬೇಕು.

ಈ ದಿನ ಅಡಿಗೆ ವಿಶೇಷತೆ ಏನು ಅಂದ್ರೆ ಸಕ್ಕರೆಯಿಂದ ಮಾಡಿದ ಪಾಯಸಗಳು ಸಕ್ಕರೆ ಹೋಳಿಗೆ. ದೇವೀ_ಕಾತ್ಯಾಯನೀ : ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ । ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿ ಕಾತ್ಯಾಯಿನಿ ಮಹಾಮಾಯೇ, ಮಹಾಯೋಗಿನ್ಯಧೀಶ್ವರಿ | ನಂದಗೋಪಸ್ತುತಂ ದೇವಿ, ಪತಿ ಮೇ ಕುರು ತೇ ನಮಃ | ಇದನ್ನು ಪೂಜೆ ನಂತರ 9 ಸಲ ಪಠಿಸಬೇಕು. ಯಾರಿಗೆ ಕಂಕಣಬಲ ಕೂಡಿ ಬಂದಿಲ್ಲ, ಮದುವೆಯಾಗಿಲ್ಲ ಅವರು ನವರಾತ್ರಿ ಮಾತ್ರವಲ್ಲ. ಪ್ರತಿದಿನ ಹನ್ನೊಂದುಸಲ ಈ ಮಂತ್ರವನ್ನು ಹೇಳುತ್ತಾ ಹೋದರೆ ಮದುವೆ ಯೋಗ ಬೇಗ ಕೂಡಿ ಬರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಎಲ್ಲರೊಂದಿಗೆ ಇದನ್ನು ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕಾರ್ಯವೇ ಹೌದು. ಹಾಗೆಯೇ ತಪ್ಪದೇ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here