ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಾವಿನಹಣ್ಣು ಮಿತವಾಗಿ ಬಳಸಿದರೆ ಔಷಧ ಹಾಗೂ ಮಿತಿಮೀರಿ ಬಳಸಿದರೆ ವಿ’ಷ . ಪೂರ್ತಿ ಮಾಹಿತಿಯನ್ನು ತಿಳಿಯಲು ಇದನ್ನು ಒಮ್ಮೆ ಓದಿರಿ.

0
3512

ಮಾವಿನಹಣ್ಣು ಕಾರಕ ಶುಕ್ರ. ಮಾವಿನ ಹಣ್ಣನ್ನು ಪೂರ್ವ ಭಾರತ ಅಂಡಮಾನ್-ನಿಕೋಬಾರ್ ಮತ್ತು ಬರ್ಮಾ ದೇಶಗಳಲ್ಲಿ ಹೆಚ್ಚು ಬೆಳೆಯುತ್ತಾರೆ. ಇದನ್ನು ಸಂಸ್ಕೃತದಲ್ಲಿ ಆಮ್ರಫಲ ಎನ್ನುತ್ತಾರೆ. ಈ ಮಾವಿನ ಮರಗಳ ಆಯುಷ್ಯ ನೂರು ವರ್ಷಗಳು. ಕೆಲವು ಮುನ್ನೂರು ವರ್ಷಗಳ ಮರಗಳು ಸಹ ಇದೆ. ಅದರಲ್ಲಿ ಅನೇಕ ಜಾತಿಯ ಹಣ್ಣುಗಳಿವೆ. ಅವು ಆಲ್ಪಾನ್ಸೋ, ರಸಪುರಿ, ತೋತಾಪುರಿ, ಮಲಗೋವಾ, ನೀಲಂ, ಮಲ್ಲಿಕಾ ಹೀಗೆ ಇನ್ನೂ ಹಲವಾರು.

ಒಂದು ಮಾವಿನ ಹಣ್ಣು ತಿಂದು ಒಂದು ಲೋಟ ಹಾಲು ಕುಡಿದರೆ ಅದು ಉತ್ತಮ ಮೇದ ರಸಾಯನ ವಾಗಿ ಕೆಲಸ ಮಾಡುತ್ತದೆ. ಆದರೆ ಮಿದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮಾವಿನ ಹಣ್ಣನ್ನು ಜೇನಿನ ಜೊತೆಗೆ ಸೇವಿಸಿದರೆ ಅದು ಹೃದಯಕ್ಕೆ ಹಿತಕಾರಿ.

ಎಳೆಯ ಮಾವಿನ ಕಾಯಿಯನ್ನು ಸೇವಿಸಿದರೆ ಅದು ಹಸಿವನ್ನು ಹೆಚ್ಚಿಸುತ್ತದೆ ಮತ್ತು ರ’ಕ್ತ ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಮಾವಿನ ಮರದ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಕುಡಿದರೆ ಜ್ವರ ಯುಕ್ತ ಬೇಧಿ ನಿಲ್ಲುತ್ತದೆ.

ಮಾವಿನ ಚಿಗುರು ಮತ್ತು ನೇರಳೆ ಚಿಗುರು ಸಮಪ್ರಮಾಣದಲ್ಲಿ ಅರೆದು ಅದರ ರಸವನ್ನು ಹಾಲು, ಸಕ್ಕರೆಯೊಂದಿಗೆ ಆರು ವಾರಗಳ ಕಾಲ ಸೇವಿಸಿದರೆ ಮೂಲವ್ಯಾಧಿಯ ಮೊಳಕೆ ಗುಣವಾಗುತ್ತದೆ. ಮಾವಿನ ಎಲೆಯಿಂದ ಹಲ್ಲು ತಿಕ್ಕಿದರೆ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆ.

ಮಾವಿನ ತೊಗಟೆಯ ಕಷಾಯ ವನ್ನು ಆಮವಾತ ಔಷಧಿಗಳಿಗಾಗಿ ಉಪಯೋಗಿಸುತ್ತಾರೆ. ಅರ್ಧಲೋಟ ಮಾವಿನ ಚಕ್ಕೆಯ ಕಷಾಯ ಕೆ ಶೋಧಿಸಿದ ಸುಣ್ಣದ ತಿಳಿ ನೀರು 2 ಚಮಚ ಸೇರಿಸಿ ಕುಡಿದರೆ ಹೊಟ್ಟೆ ನೋವು ಶಮನವಾಗುತ್ತದೆ. ಮಾವಿನ ಎಲೆಯ ಕಷಾಯ ಮಾಡಿ ಅದಕ್ಕೆ ಜೇನು ಸೇರಿಸಿ ಕುಡಿದರೆ ಕೆಮ್ಮು ಕಡಿಮೆ ಆಗುತ್ತದೆ ಸ್ವರವೂ ಉತ್ತಮವಾಗುತ್ತದೆ.

ಮಾವಿನ ಬೀಜವನ್ನು ಹಸಿಯಾಗಿ ಅರೆದು ರಸವನ್ನು ಮೂಗಿನಲ್ಲಿ ಹಿಂಡಿದರೆ ಮೂಗಿನ ರಕ್ತಸ್ರಾವ ನಿಲ್ಲುತ್ತದೆ. ಐದು ಚಮಚದಷ್ಟು ಒಣಗಿದ ಮಾವಿನ ಎಲೆಯ ಚೂರ್ಣವನ್ನು ಕಷಾಯ ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿದರೆ ಮಧುಮೇಹ ಕಡಿಮೆಯಾಗುತ್ತದೆ. ಮಾವಿನ ಮೇಣವನ್ನು ಗೋಮೂತ್ರದಲ್ಲಿ ಅರೆದು ಲೇಪಿಸಿದರೆ ವೃಷಣಗಳ ಊತ ಕಡಿಮೆಯಾಗುತ್ತದೆ.

ಆಗತಾನೆ ಪೆಟ್ಟಿನಿಂದ ರಕ್ತ ಸುರಿಯುತ್ತಿದ್ದರೂ ಮಾವಿನ ಮೇಣವನ್ನು ಬೇವಿನ ತೊಗಟೆಯ ರಸದಲ್ಲಿ ಅರೆದು ಲೇಪಿಸಿದರೆ ರಕ್ತಸ್ರಾವ ತಕ್ಷಣ ನಿಂತು ಹೋಗುತ್ತದೆ. ಮಾವಿನ ಚಿಗುರು ಎಲೆಗಳನ್ನು ಅರೆದು ಎಳ್ಳೆಣ್ಣೆಯಲ್ಲಿ ಕುದಿಸಬೇಕು. ಎರಡು ಅಥವಾ ನಾಲ್ಕು ದಿನಗಳಿಗೆ ಎರಡು ಬಾರಿಯಂತೆ ಕಿವಿಗೆ ಹಾಕಿದರೆ ಕಿವಿನೋವು ಮತ್ತು ಕಿವಿ ಸೋರುವುದು ಕಡಿಮೆ ಆಗುತ್ತದೆ.

ಎಳೆ ಮಾವಿನ ಸೀಟುಗಳನ್ನು ಅರೆದು ಕಣ್ಣಿನ ಮೇಲೆ ಇಟ್ಟು ಕೊಂಡರೆ ಕಣ್ಣಿಗೆ ಹಿತಕರ, ಕಣ್ಣಿನ ಉರಿ ತಗ್ಗುತ್ತದೆ. ಮಾವಿನ ಎಲೆ ತೊಗಟೆ ಕಾಯಿಯು ಜೀವನಿರೋಧಕ. ಮಾವಿನ ಚಿಗುರಿನ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಹಲ್ಲು ಮತ್ತು ವಸಡುಗಳ ಬಾವು ಕಡಿಮೆಯಾಗುತ್ತದೆ. ಮಾವಿನ ಹಣ್ಣಿನ ರಸಕ್ಕೆ ಹಾಲು ಮತ್ತು ಜೇನು ಬೆರೆಸಿ ಸೇವಿಸಿದರೆ ಜ್ಞಾಪಕಶಕ್ತಿ ಹೆಚ್ಚುತ್ತದೆ.

ಮಾವಿನ ಕಾಯಿ ತುರಿ, ತೆಂಗಿನಕಾಯಿಯ ಜೊತೆ ಚಟ್ನಿ ಮಾಡಿ ಉಪಯೋಗಿಸಿದರೆ ಹಸಿವು, ಜೀರ್ಣಶಕ್ತಿ ಹೆಚ್ಚುತ್ತದೆ. ಮಾವಿನ ಹಣ್ಣಿನ ಕಾಲದಲ್ಲಿ ಇದನ್ನು ಹಿತ ಮಿತವಾಗಿ ಸೇವಿಸುವುದರಿಂದ ವೀ’ರ್ಯ ವೃದ್ಧಿಯಾಗಿ ದೇಹದ ಆರೋಗ್ಯ ಹೆಚ್ಚುತ್ತದೆ. ಇದು ಹೆಚ್ಚು ತಿಂದು ಅಜೀರ್ಣವಾದರೆ ಬೆಚ್ಚನೆ ಹಾಲಿಗೆ ಸ್ವಲ್ಪ ಶುಂಠಿ ಪುಡಿ ಅಥವಾ ಏಲಕ್ಕಿ ಪುಡಿ ಮತ್ತು ಸಕ್ಕರೆ ಬೆರೆಸಿ ಸೇವಿಸಿದರೆ ಅಜೀರ್ಣ ದೂರವಾಗುತ್ತದೆ.

ತಾಜಾ ಹಣ್ಣಿನ ರಸಕ್ಕೆ ಹಾಲು ಸಕ್ಕರೆ ಮತ್ತು ಏಲಕ್ಕಿ ಪುಡಿ ಸೇರಿಸಿ ಪ್ರತಿದಿನ ಸೇವಿಸುತ್ತಿದ್ದರೆ ಮೈಕಾಂತಿ ವೃದ್ಧಿಸುತ್ತದೆ. ಇದನ್ನು ಸೇವಿಸುವುದರಿಂದ ವೀ’ರ್ಯವರ್ಧಕವಾಗಿ ಕಾ’ಮ ಶಕ್ತಿಯು ಹೆಚ್ಚುತ್ತದೆ. ಹೃದಯಕ್ಕೆ ಪುಷ್ಟಿ ನೀಡುತ್ತದೆ. ಎಳೆಯ ಮಾವಿನ ಕಾಯಿ ಒಗರು ಮತ್ತು ಆಮ್ಲರಸ ಗಳಿಂದ ಕೂಡಿದೆ. ಇದನ್ನು ಸೇವಿಸಿದರೆ ಪಿತ್ತ ಮತ್ತು ವಾತ ಹೆಚ್ಚಿಸುತ್ತದೆ.

ಆದರೆ ಇದರ ಉಪ್ಪಿನಕಾಯಿ, ಚಟ್ನಿ, ಗೊಜ್ಜು ಸೇವನೆಯಿಂದ ಜೀರ್ಣ ಶಕ್ತಿಯ ವೃದ್ಧಿ ಮಾಡುತ್ತದೆ. ಆದರೂ ಸಹ ಹೆಚ್ಚು ಸೇವಿಸಿದರೆ ಉದರಶೂಲೆ, ಆಮ್ಲಪಿತ್ತ, ಅತಿಸಾರ, ಬೇಧಿ ಅಲ್ಲದೆ ರ’ಕ್ತದೊತ್ತಡ ಹೆಚ್ಚಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here