ಲಸಿಕೆಗಳು ಹಲವು ಕಾಯಿಲೆಗಳು ಬರದಂತೆ ಅಥವಾ ಬಂದರೂ ತೀವ್ರ ಸ್ವರೂಪದಲ್ಲಿ ಬರದಂತೆ ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈಗಿನ ಸಮಯದಲ್ಲಿ ಲಸಿಕೆಗಳು ಬಹಳ ಮಹತ್ವ ಪಾತ್ರ ವಹಿಸುತ್ತದೆ. ಆದರೆ ಈ ಲಸಿಕೆಗಳ ಬಗ್ಗೆ ತಪ್ಪು ಕಲ್ಪನೆಗಳು ಜನರನ್ನು ಲಸಿಕೆ ಪಡೆಯದಂತೆ ಮನಸ್ಸು ಬದಲಾಯಿಸುವಂತೆ ಮಾಡುತ್ತದೆ. ಹಾಗಾದರೆ ಲಸಿಕೆ ಕುರಿತು ಮಿಥ್ಯೆಗಳು ಯಾವುವು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2010 ಮತ್ತು 2015 ರ ಮಧ್ಯೆ ಲಸಿಕೆಗಳು ಜಗತ್ತಿನಾದ್ಯಂತ ಸುಮಾರು ಒಂದು ಕೋಟಿ ಜನರ ಸಾವನ್ನು ತಡೆದಿದೆ. ಈಗಿನ ಕೋವಿಡ್ ಸಂದರ್ಭದಲ್ಲಿಯೇ ವಿಜ್ಞಾನಿಗಳು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾದ ವ್ಯಾಕ್ಸಿನ್ ಗಳನ್ನು ಕಂಡುಹಿಡಿಯಲು ತುಂಬಾ ಶ್ರಮ ಪಡುತ್ತಿದ್ದಾರೆ.
ಹಾಗಾದರೆ ಬನ್ನಿ ಈ ತಪ್ಪುಕಲ್ಪನೆಗಳು ಯಾವುವು ಎಂದು ನೋಡೋಣ. ತಪ್ಪುಕಲ್ಪನೆ 1 : ಕೋವಿಡ್ ಲಸಿಕೆಗಳು ಸುರಕ್ಷಿತವಲ್ಲ. ಏಕೆಂದರೆ ಅವುಗಳನ್ನು ತರಾತುರಿಯಲ್ಲಿ ತಯಾರು ಮಾಡಲಾಗುತ್ತದೆ. ಇದುವರೆಗೆ ತಯಾರಾದ ಯಾವ ಲಸಿಕೆಗಳಿಗಿಂತಲೂ ಈ ಕೊವಿಡ್ ಲಸಿಕೆಗಳನ್ನು ವಿಜ್ಞಾನಿಗಳು ಬಹಳ ಬೇಗ ಅಭಿವೃದ್ಧಿಪಡಿಸಿ ಹೊರ ತಂದಿದ್ದಾರೆ ಎಂಬುದು ನಿಜ. ಅಂದರೆ ಒಂದೇ ವರ್ಷದೊಳಗೆ ಅದು ಲಭ್ಯವಾದದ್ದು ಒಂದು ದಾಖಲೆಯೇ ಸರಿ. ಈ ದಾಖಲೆ ಈ ಮೊದಲು ಮಂಪ್ಸ್ ಕಾಯಿಲೆಯ ಲಸಿಕೆಯಾಗಿತ್ತು. ಅದನ್ನು ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿಪಡಿಸಿ ಹೊರತಂದಿದ್ದರು. ಈ ಕೋವಿಲ್ ಲಸಿಕೆ ಇಷ್ಟು ಬೇಗ ಹೊರಬರಲು ಹಲವಾರು ಕಾರಣಗಳಿವೆ.
ಹಾಗಾಗಿ ಇದು ಸುರಕ್ಷಿತವಲ್ಲ ಅಂತ ಹೇಳುವುದು ಸರಿಯಲ್ಲ. ಕೋವಿ ಕಾಯಿಲೆಗೆ ಕಾರಣವಾಗುವ ಸರ್ಸ್ ಸಿ ಒ ವಿ 2 ವೈರಸ್ ಹೊಸತಾದರೂ ಕರೋನವೈರಸ್ ಗಳ ಬಗ್ಗೆ ವಿಜ್ಞಾನಿಗಳು ದಶಕಗಳಿಂದ ಅಧ್ಯಯನ ನಡೆಸುತ್ತಿದ್ದಾರೆ. ಹಾಗಾಗಿ ಈ ಲಸಿಕೆ ತಯಾರಿಯಲ್ಲಿ ಇವರು ಹೊಸದಾಗಿ ಆರಂಭವಾಗುವ ಪ್ರಮೇಯವಿಲ್ಲ. ಕೋವಿಡ್ 19 ಕಾಯಿಲೆ ಜಗತ್ತಿನ ಎಲ್ಲಾ ಖಂಡಗಳಲ್ಲಿ ಹಾಗೂ ಹೆಚ್ಚಿನ ಎಲ್ಲ ದೇಶಗಳಲ್ಲಿಯೂ ಒಮ್ಮೆಲೆ ಕಾಣಿಸಿಕೊಂಡಿದ್ದರಿಂದ ಲಸಿಕೆಯ ಬಗ್ಗೆ ಜಗತ್ತಿನಾದ್ಯಂತ ಅನಿರೀಕ್ಷಿತ ಸಹಕಾರ ದೊರಕಿತು.
ತಪ್ಪು ಕಲ್ಪನೆ 2 : ಈ ಲಸಿಕೆ ಡಿಎನ್ಎ ಯನ್ನು ಬದಲಾಯಿಸುತ್ತದೆ ಎಂಬುದು. ಫೈಜರ್ ಬಯೋನ್ ಟೆಕ್ ಮತ್ತು ಮಾಡೆರ್ನಾ ಲಸಿಕೆಗಳು ಆರ್ ಎನ್ ಎ ತಾಂತ್ರಿಕತೆಯಿಂದ ರಚಿಸಲ್ಪಟ್ಟವು. ಮೊದಲಿನ ಸಾಂಪ್ರದಾಯಿಕ ಲಸಿಕೆ ಗಳಿಗಿಂತ ಇವು ಭಿನ್ನವಾಗಿ ಕೆಲಸ ಮಾಡುತ್ತವೆ. ಸಾಂಪ್ರದಾಯಿಕ ಲಸಿಕೆ ಯಲ್ಲಿ ಸಕ್ರಿಯ ವಲ್ಲದ ಅಥವಾ ವೈರಾಣುವಿನ ಅಂಶವನ್ನು ದೇಹಕ್ಕೆ ಕೊಡಲಾಗುತ್ತದೆ. ಉದ್ದೇಶ ಎಂದರೆ ದೇಹದಲ್ಲಿ ಪ್ರತಿರೋಧ ಪ್ರಕ್ರಿಯೆಯನ್ನು ಉತ್ಪಾದಿಸುವುದು ಹೇಗೆ ಎಂದು ದೇಹಕ್ಕೆ ಕಲಿಸಲು. ಆದರೆ ಎಂ ಆರ್ ಎನ್ ಎ ಲಸಿಕೆಯು ನಮ್ಮ ದೇಹದ ಜೀವಕೋಶಗಳಿಗೆ ವೈರಾಣುವಿನ ಪ್ರೊಟೀನನ್ನು ಉತ್ಪಾದಿಸಲು ಅಗತ್ಯ ಮಾಹಿತಿ ಕೊಡುತ್ತದೆ.
ಒಂದು ಬಾರಿ ಪ್ರೋಟೀನ್ ಉತ್ಪನ್ನವಾದ ನಂತರ ದೇಹದ ಪ್ರತಿರೋಧ ವ್ಯವಸ್ಥೆ ಅದಕ್ಕೆ ಪ್ರತಿಕ್ರಿಯಿಸಿ ಭವಿಷ್ಯದಲ್ಲಿ ಅದೇ ದೇಹವನ್ನು ಆಕ್ರಮಿಸಿದ್ದರೆ ಅದರ ವಿರುದ್ಧ ಹೋರಾಡಲು ಸನ್ನಧ ಗೊಳಿಸುತ್ತದೆ. ಈ ಎಂ ಆರ್ ಎನ್ ಎ ಜೀವಕೋಶದ ಒಳಗೆ ಪ್ರವೇಶಿಸುವುದಿಲ್ಲ. ನಮ್ಮ ಡಿಎನ್ಎಯ ಜೀವಕೋಶದ ಒಳಗಿನ ನ್ಯೂಕ್ಲಿಯಸ್ ನಲ್ಲಿ ಇರುತ್ತದೆ. ಹಾಗಾಗಿ ವ್ಯಾಕ್ಸಿಂಗ್ ನಲ್ಲಿರುವ ಆರ್ಎಂಎಸ್ ದೇಹದ ಡಿಎನ್ಎ ಸಂಪರ್ಕಕ್ಕೆ ಬರುವುದೇ ಇಲ್ಲ. ಅದು ದೇಹದಲ್ಲಿ ಪ್ರೋಟೀನ್ ಉತ್ಪಾದಿಸಲು ಮಾಹಿತಿ ಕೊಟ್ಟನಂತರ ನಾಶವಾಗಿ ಅದೃಶ್ಯವಾಗುತ್ತದೆ.
ತಪ್ಪು ಕಲ್ಪನೆ 3 : ಕೋವಿಡ್ ಕಾಯಿಲೆ ಬಂದವರಿಗೆ ಲಸಿಕೆಯ ಅಗತ್ಯವಿಲ್ಲ. ಇದು ಸರಿಯಲ್ಲ ಕೋವಿಡ್ ಕಾಯಿಲೆಗೆ ಒಳಗಾದವರು ಸಹ ಲಸಿಕೆ ತೆಗೆದುಕೊಳ್ಳಲೇಬೇಕು. ಕೋಳಿ ಕಾಯಿಲೆ ಬಂದವರಲ್ಲಿ ಸಹಿತ ಮತ್ತೊಮ್ಮೆ ಕಾಯಿಲೆ ಬರುವ ಸಂಭವವಿರುವುದರಿಂದ ಅವರು ಲಸಿಕೆ ತೆಗೆದುಕೊಳ್ಳುವುದು ಸುರಕ್ಷಿತ. ಇನ್ನೊಂದು ಕಾರಣ ಎಂದರೆ ಮೊದಲು ಕೋವಿಡ್ ಕಾಯಿಲೆ ಬಂದಿದೆ ಎಂದು ತಿಳಿಸಿದ ಪರೀಕ್ಷೆಯೇ ಫಾಲ್ಸ್ ಪಾಸಿಟಿವ್ ಇರುವ ಸಾಧ್ಯತೆ ಇದೆ. ಆದರೆ ಅದರ ಅರ್ಥ ಟೆಸ್ಟ್ ಪಾಸಿಟಿವ್ ಬಂದರು ವೈರಸ್ನ ಸೋಂಕು ವ್ಯಕ್ತಿಗೆ ಆಗಿರುವುದೇ ಇಲ್ಲ.
ತಪ್ಪು ಕಲ್ಪನೆ 4 : ಲಸಿಕೆ ತೆಗೆದುಕೊಂಡ ವ್ಯಕ್ತಿ ವೈರಸ್ ಹರಡುವುದಿಲ್ಲ. ಈ ಲಸಿಕೆಯು ಕೊರೊನಾ ಸೋಂಕು ಸಂಭವಿಸಿದರೆ ವ್ಯಕ್ತಿ ತೀವ್ರವಾದ ತೊಡಕುಗಳಿಗೆ ಗೊತ್ತಾಗದಿರಲಿ ಎಂಬುದು ಮುಖ್ಯ ಉದ್ದೇಶ. ಲಸಿಕೆ ತೆಗೆದುಕೊಂಡ ವ್ಯಕ್ತಿಯಲ್ಲಿ ನಂತರದ ಸಮಯದಲ್ಲೂ ಅವನಲ್ಲಿ ವೈರಸ್ ಇರಲು ಸಾಧ್ಯವೂ ಇದೆ. ಹಾಗಾಗಿ ಆತನಿಂದ ವೈರಸ್ ಹರಡಲೂ ಬಹುದು.
ತಪ್ಪು ಕಲ್ಪನೆ 5 : ಲಸಿಕೆ ತೆಗೆದುಕೊಂಡ ನಂತರ ನನಗೆ ಜೀವಮಾನವಿಡಿ ಕೋವಿಡ್ ಬರುವುದಿಲ್ಲ. ಈ ಲಸಿಕೆಯನ್ನು ಕಳೆದ ಒಂದು ವರ್ಷ ಮಾತ್ರ ವಿಜ್ಞಾನಿಗಳು ಅಧ್ಯಯನ ಮಾಡುತ್ತಿರುವುದರಿಂದ ಇದರಿಂದ ಉಂಟಾಗುವ ಪ್ರತಿರೋಧ ಶಕ್ತಿ ಎಷ್ಟು ದಿನಗಳವರೆಗೆ ಇರಬಹುದು ಎಂಬುದು ಮಾಹಿತಿ ಯಾರಿಗೂ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ ಈ ಲಸಿಕೆಯ ಪೋಸ್ಟರ್ಡರ್ ತೆಗೆದುಕೊಳ್ಳುವುದು ಒಳ್ಳೆಯದು.
ತಪ್ಪು ಕಲ್ಪನೆ 6 : ದೇಹದಲ್ಲಿ ಬೇರೆ ಕಾಯಿಲೆ ಇರುವವರು ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದು. ಇದು ಪೂರ್ಣ ಸತ್ಯವಲ್ಲ. ದೇಹದಲ್ಲಿ ಈಗಾಗಲೇ ಹೃದಯದ ಕಾಯಿಲೆ ಡಯಾಬಿಟಿಸ್ ಮತ್ತು ಶ್ವಾಸಕೋಶದ ಕಾಯಿಲೆ ಇರುವವರು ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು. ದೇಹದಲ್ಲಿ ಸ್ಥೂಲಕಾಯ ಹೃದಯ ಕಾಯಿಲೆಗಳು ಇರುವ ವ್ಯಕ್ತಿಗಳಲ್ಲಿ ಕಾಯಿಲೆ ಕಾಣಿಸಿಕೊಂಡರೆ ತೀವ್ರ ರೀತಿಯಲ್ಲಿ ಬರುವ ಸಾಧ್ಯತೆ ಇರುವುದರಿಂದ ಇಂತಹವರು ಲಸಿಕೆ ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಮತ್ತು ಸುರಕ್ಷಿತ.
ತಪ್ಪು ಕಲ್ಪನೆ 7 : ಕೋವಿಡ್ ಲಸಿಕೆಯು ನಿಮಗೆ ಕೋವಿಡ್ ಕಾಯಿಲೆಯನ್ನು ತರುತ್ತದೆ. ಯಾವ ರೀತಿಯ ಲಸಿಕೆಯಲ್ಲಿಯು ಜೀವಂತವಿರುವ ವೈರಸ್ ಇರುವುದಿಲ್ಲ. ಹಾಗಾಗಿ ಅವ್ಯಾವುವೂ ಕೋವಿಡ್ ಕಾಯಿಲೆ ಉಂಟು ಮಾಡುವುದಿಲ್ಲ. ಲಸಿಕೆಗೆ ಉಂಟಾಗುವ ಪ್ರತಿರೋಧಕ ಪ್ರತಿಕ್ರಿಯೆಯಿಂದ ತಲೆನೋವು ನಡುಕ ವಾಂತಿ ಇವೆಲ್ಲಾ ಬರುತ್ತದೆ. ಇದು ಸಕ್ರಿಯವಾದ ವೈರಸ್ ಸೋಂಕಲ್ಲ.
ತಪ್ಪು ಕಲ್ಪನೆ 8 : ಕೋವಿಡ್ ಲಸಿಕೆಗಳು ನಿಮಗೆ ಮಕ್ಕಳಾಗದಂತೆ ಮಾಡುತ್ತದೆ. ಕೋವಿಲ್ ಲಸಿಕೆ ಗಳಿಗೂ ಮಕ್ಕಳಾಗದಿರುವ ಸಮಸ್ಯೆಗೂ ಸಂಬಂಧವೇ ಇಲ್ಲ. ಹಾಗಾಗಿ ಭವಿಷ್ಯದ ಗರ್ಭಕ್ಕೆ ಇದು ಮಾರಕ ಎಂಬ ನಂಬಿಕೆಯೂ ಸತ್ಯವಲ್ಲ. ಈ ತಪ್ಪುಕಲ್ಪನೆ ಹುಟ್ಟು ಹುಟ್ಟಲು ಕಾರಣ ಎಂದರೆ ಎಮ್ಮಾರ್ ಎಣ್ಣೆ ವ್ಯಾಕ್ಸಿನ್ ಗಳಲ್ಲಿರುವ ಸ್ಟ್ರೈಕ್ ಪ್ರೋಟೀನ್ ಗಳಿಗೆ ಮತ್ತು ಸಿನ್ಸಿಟಿನ್ 1 ಎಂಬ ಪ್ರೋಟೀನ್ ಗಳಿಗೂ ಸ್ವಲ್ಪ ಸಂಬಂಧವಿದೆ.
ಈ ಸಿನ್ಸಿಟಿನ್ 1 ಪ್ರೋಟೀನ್ ಗರ್ಭಿಣಿ ಮಹಿಳೆಯರಲ್ಲಿ ಗರ್ಭಕೋಶಕ್ಕೆ ಮಾಸು ಅಥವಾ ಪ್ಲಾಸೆಂಟ ಅಂಟಿಕೊಂಡಿರುವ ತುಂಬಾ ಮುಖ್ಯ.
ತಪ್ಪು ಕಲ್ಪನೆ 9 : ಕೋವಿಡ್ ಲಸಿಕೆಯು ಭ್ರೂಣದ ಅಂಶಗಳನ್ನು ಹೊಂದಿದೆ. ಬಹಳ ವರ್ಷಗಳಿಂದ ಲಸಿಕೆ ವಿರೋಧದ ಒಂದು ದೊಡ್ಡ ಗುಂಪು ಜಗತ್ತಿನಾದ್ಯಂತ ಈ ಸುಳ್ಳು ಸುದ್ದಿ ಹಬ್ಬಿಸಲು ಪ್ರಯತ್ನಿಸುತ್ತಿದೆ. ಕೋವಿಡ್ ಲಸಿಕೆ ಮಾತ್ರವಲ್ಲ ಯಾವ ಲಸಿಕೆ ಯಲ್ಲಿಯೂ ಭ್ರೂಣದ ಅಂಶಗಳು ಇರಲು ಸಾಧ್ಯವೇ ಇಲ್ಲ.
ತಪ್ಪು ಕಲ್ಪನೆ 10 : ದೇಹದ ಪ್ರತಿರೋಧ ಶಕ್ತಿ ಕುಂದಿದ್ದರೆ ಲಸಿಕೆ ತೆಗೆದುಕೊಳ್ಳಬಾರದು. ಲಸಿಕೆ ಯಲ್ಲಿ ಜೀವವಿರುವ ಜೀವಿ ಇರುವುದಿಲ್ಲವಾದ್ದರಿಂದ ಇದು ಸೋಂಕನ್ನು ತರುವುದಿಲ್ಲ. ಹಾಗಾಗಿ ಪ್ರತಿರೋಧ ಶಕ್ತಿ ಹೊಂದಿರುವ ವ್ಯಕ್ತಿಗಳು ಇದನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ಅವರಿಗೆ ಇತರ ಸಾಮಾನ್ಯ ವ್ಯಕ್ತಿಗಳಲ್ಲಿ ಕಂಡುಬರುವಷ್ಟು ಪ್ರತಿರೋಧ ಶಕ್ತಿ ಇಂತಹ ವ್ಯಕ್ತಿಗಳಲ್ಲಿ ಹುಟ್ಟದಿರಬಹುದು. ಉದಾಹರಣೆಗೆ ಹಲವು ಕೋವಿಡ್ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ನಲ್ಲಿ ಪ್ರತಿರೋಧ ಶಕ್ತಿ ಕುಂದಿರುವ ವ್ಯಕ್ತಿಗಳೂ ಒಳಗೊಂಡಿದ್ದರು. ಅವರಲ್ಲಿ ಏನು ಕೆಟ್ಟ ಪರಿಣಾಮಗಳು ಕಂಡುಬಂದ ಉದಾಹರಣೆಗಳು ಇಲ್ಲ.