ಕಪ್ಪು ಉಪ್ಪು: ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣ ಸಮಸ್ಯೆಗೆ ಪರ್ಫೆಕ್ಟ್ ಮನೆಮದ್ದು. ಆಹಾರ ಪದ್ಧತಿಯ ಅಜಾಗರೂಕತೆ ಮತ್ತು ಅನಾನುಕೂಲದಿಂದ ಉಂಟಾಗುವ ಅಜೀರ್ಣತೆಗೆ ಕಪ್ಪು ಉಪ್ಪು ಒಳ್ಳೆಯ ಪರಿಹಾರ. ರುಚಿಗೆ ತಕ್ಕಷ್ಟು ಉಪ್ಪು ಹಾಕದೆ ಇದ್ದರೆ ನಾವು ತಯಾರು ಮಾಡುವ ಅಡುಗೆ ಬಾಯಲ್ಲಿ ಇಡಲು ಕೂಡ ಸಾಧ್ಯವಿರುವುದಿಲ್ಲ. ಏಕೆಂದರೆ ಅಪಾರ ಪ್ರಮಾಣದ ಅಡುಗೆಯ ಸ್ವಾದ ಕೇವಲ 1 ಟೇಬಲ್ ಚಮಚ ಉಪ್ಪಿನಲ್ಲಿ ನಿರ್ಧಾರವಾಗುತ್ತದೆ.
ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉಪ್ಪಿನಿಂದ ಕೂಡ ನಮಗೆ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಿದೆ. ಇದಕ್ಕೆ ಉದಾಹರಣೆಯೆನ್ನುವಂತೆ ಕಪ್ಪು ಉಪ್ಪು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ವಿಶೇಷವಾಗಿ ಗ್ಯಾಸ್ಟ್ರಿಕ್ ಮತ್ತು ಆಮ್ಲೀಯತೆ ಜೊತೆಗೆ ಎದೆಯುರಿ ಸಮಸ್ಯೆಯನ್ನು ದೂರ ಮಾಡುವ ಗುಣವನ್ನು ಸಹ ಇದು ಪಡೆದುಕೊಂಡಿದೆ.
ಕಪ್ಪು ಉಪ್ಪು ಹೇಗೆ ಸಹಾಯಕ? ಜೀರ್ಣಶಕ್ತಿ ಹೆಚ್ಚಿಸುತ್ತದೆ. ನೈಸರ್ಗಿಕವಾಗಿ ಉತ್ತೇಜನ ಶಕ್ತಿಯನ್ನು ಪಡೆದಿರುವ ಕಪ್ಪು ಯಕೃತ್ ಭಾಗವನ್ನು ಉತ್ತೇಜಿಸಿ ದೇಹದ ಜೀರ್ಣ ಪ್ರಕ್ರಿಯೆಗೆ ಅನುಕೂಲವಾಗುವಂತೆ ಅಗತ್ಯವಾಗಿ ಬೇಕಾಗಿರುವ ಜೀರ್ಣ ರಸಗಳನ್ನು ಉತ್ಪತ್ತಿಯಾಗುವಂತೆ ಮಾಡಿ ಹಸಿವಿನ ನಿಯಂತ್ರಣ ಮಾಡುತ್ತದೆ.
ಕೆಲವೊಂದು ಆಮ್ಲೀಯ ಅಂಶಗಳನ್ನು ಒಳಗೊಂಡಿರುವ ಜೀರ್ಣರಸಗಳು ನೀವು ಸೇವಿಸುವ ಆಹಾರದಲ್ಲಿ ಕಂಡುಬರುವ ಕೊಬ್ಬಿನ ಅಂಶವನ್ನು ಮತ್ತು ಕರಗುವ ವಿಟಮಿನ್ ಅಂಶಗಳನ್ನು ಸಣ್ಣ ಕರುಳಿನ ಭಾಗಕ್ಕೆ ಪೂರೈಕೆ ಮಾಡುತ್ತದೆ.
ಎದೆಯುರಿ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಕಪ್ಪು ಉಪ್ಪು ವಿಶೇಷವಾದ ಸ್ಥಾನಮಾನವನ್ನು ಪಡೆದುಕೊಂಡಿದೆ. ಹೊಟ್ಟೆಯ ಭಾಗದಲ್ಲಿ ಕಂಡುಬರುವ ಅತಿಯಾದ ಆಮ್ಲೀಯತೆಯನ್ನು ಸಮತೋಲನ ಮಾಡಿ ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಯನ್ನು ದೂರ ಮಾಡುವಲ್ಲಿ ಇದು ಹೆಚ್ಚಿನ ಪಾತ್ರ ವಹಿಸುತ್ತದೆ.
ಹೊಟ್ಟೆ ಉಬ್ಬರ ಸಮಸ್ಯೆಗೆ ಪರಿಹಾರ : ಕಪ್ಪು ಉಪ್ಪಿನಲ್ಲಿ ಕಂಡುಬರುವ ನೈಸರ್ಗಿಕವಾದ ರಾಸಾಯನಿಕ ಅಂಶಗಳು ಹೊಟ್ಟೆ ಉಬ್ಬರದ ತೀವ್ರತೆಯನ್ನು ಕಡಿಮೆ ಮಾಡುತ್ತವೆ ಎಂದು ಹೇಳುತ್ತಾರೆ.
ವಿಜ್ಞಾನಿಗಳ ಪ್ರಕಾರ ಕಪ್ಪು ಉಪ್ಪಿನಲ್ಲಿ ಸೋಡಿಯಂ ಕ್ಲೋರೈಡ್, ಸಲ್ಫೇಟ್, ಕಬ್ಬಿಣ, ಮ್ಯಾಂಗನೀಸ್, ಫೆರಿಕ್ ಆಕ್ಸೈಡ್ ಇತ್ಯಾದಿಗಳ ಪ್ರಮಾಣ ಸಾಕಷ್ಟಿದೆ. ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವ ಕಪ್ಪು ಉಪ್ಪು ದೀರ್ಘಾವಧಿಯಲ್ಲಿ ಕಾಡುವ ಹೊಟ್ಟೆ ಉಬ್ಬರದ ಸಮಸ್ಯೆಗೆ ಮುಕ್ತಿ ಹಾಡುತ್ತದೆ.
ನೀವು ಎಂದಾದರೂ ಹೆಚ್ಚು ಆಹಾರ ಸೇವನೆ ಮಾಡಿದ ಸಂದರ್ಭದಲ್ಲಿ ಸ್ವಲ್ಪ ಕಪ್ಪು ಉಪ್ಪು ಸೇವನೆ ಮಾಡಿ ನಿಮಗೆ ಎದುರಾಗುವ ಹೊಟ್ಟೆ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.
ಕೆಂಪುರ’ಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ : ಉಪ್ಪಿನಲ್ಲಿ ಕಂಡು ಬರುವ ಕಬ್ಬಿಣದ ಅಂಶ ಅನಿಮಿಯ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಬಹುದು. ಕೆಂಪುರಕ್ತಕಣಗಳ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಕಪ್ಪು ಉಪ್ಪು ಸೇವನೆ ಹೇಗೆ? ಆಯುರ್ವೇದ ಶಾಸ್ತ್ರದ ಪ್ರಕಾರ, ಕಪ್ಪು ಉಪ್ಪು ಮತ್ತು ಓಂ ಕಾಳುಗಳನ್ನು ಸ್ವಲ್ಪ ನಿಂಬೆ ರಸದೊಂದಿಗೆ ಬೆರೆಸಿ ಸೇವನೆ ಮಾಡಿದರೆ ನೀವು ಸದಾ ಕಿರಿಕಿರಿ ಅನುಭವಿಸುವ ಸಮಸ್ಯೆಗಳಾದ ಆಮ್ಲಿಯತೆ, ಎದೆಯುರಿ, ಇತ್ಯಾದಿಗಳನ್ನು ಹೋಗಲಾಡಿಸುತ್ತದೆ. ಇದಕ್ಕಾಗಿ ನೀವು ಈ ಮಿಶ್ರಣವನ್ನು ಊಟ ಮಾಡಿದ ನಂತರ ಅಥವಾ ರಾತ್ರಿ ಮಲಗುವ ಮುಂಚೆ ಸೇವನೆ ಮಾಡಿ.
ಮೊಸರು, ರೈತಾ ಅಥವಾ ಸಲಾಡ್ ಅಥವಾ ಇನ್ನಿತರ ನಿಮ್ಮ ತರಕಾರಿ ಅಡುಗೆಗಳ ಜೊತೆ ಕೂಡ ಕಪ್ಪು ಉಪ್ಪು ಮಿಶ್ರಣ ಮಾಡಿ ಸವಿಯಬಹುದು. ಅಡುಗೆ ಮಾಡುವ ಸಂದರ್ಭದಲ್ಲಿ ಅಡುಗೆಯ ಸ್ವಾದವನ್ನು ಹೆಚ್ಚುಮಾಡಲು ನೀವು ಬಳಸುವ ಸಾಧಾರಣ ಪುಡಿ ಉಪ್ಪಿನ ಜೊತೆಗೆ ಕಪ್ಪು ಉಪ್ಪು ಕೂಡ ಬಳಕೆ ಮಾಡಬಹುದು.
ಊಟ ಆದ ನಂತರ ಚಿಟಿಕೆ ಪ್ರಮಾಣದಲ್ಲಿ ಕಪ್ಪು ಉಪ್ಪು ಬಾಯಲ್ಲಿ ಹಾಕಿಕೊಂಡು ಎದೆಯುರಿ ಸಮಸ್ಯೆಯನ್ನು ನಿಯಂತ್ರಣ ಮಾಡಿಕೊಳ್ಳಬಹುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.