ಸಾಮಾನ್ಯವಾಗಿ ಎಲ್ಲರೂ ಹೊರಗಡೆ ತುಂಬಾ ಮುಖ್ಯವಾದ ಕೆಲಸಕ್ಕೆ ಹೋಗುವಾಗ ದೇವರಿಗೆ ಅಥವ ತನ್ನ ತಂದೆ ತಾಯಿಗೆ ಕೈ ಮುಗಿದು ಹೋಗುತ್ತಾರೆ, ಮನಸಲ್ಲಿ ಎಲ್ಲೋ ಒಂದು ಕಡೆ ಅಳುಕ್ಕಿದ್ದೆ ಇರುತ್ತೆ ಕೆಲಸ ಆಗುತ್ತೋ ಇಲ್ಲವೋ ಅಂತ, ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮನೆಯಿಂದ ಹೊರಗಡೆ ಹೋಗುವಾಗ ಕಾಲಿ ಕೊಡ ಅಥವ ಬಿಂದಿಗೆ ನೋಡಿದರೆ ಅಥವಾ ಯಾರಾದರು ನಮ್ಮನ್ನು ಕೂಗಿದರೆ ಆ ಕೆಲಸ ಆಗುವುದಿಲ್ಲ ಎಂಬ ನಂಬಿಕೆ ನಮ್ಮ ಮನಸ್ಸಲ್ಲಿ ಉಳಿದುಕೊಂಡು ಬಿಟ್ಟಿದೆ, ಇನ್ನು ಹೀಗೆ ನಡೆದಾಗ ಮನೆಯಲ್ಲಿ ಸ್ವಲ್ಪಹೊತ್ತು ಕೂತು ಕೊಂಡು ಹೋಗುವವರಿದ್ದಾರೆ, ಒತ್ತಡದ ಜೀವನದಲ್ಲಿ ಇದನ್ನೆಲ್ಲಾ ನೋಡೋದು ಕಷ್ಟ ಆದರೆ ನಾವು ನಂಬಿ ಬಂದಿರುವ ಜ್ಯೋತಿಷ್ಯ ಶಾಸ್ತ್ರ ಯಾವುದು ಶುಭ ಶಕುನ ಹಾಗು ಯಾವುದು ಅಪಶಕುನ ಎಂಬುದನ್ನು ವಿವರಿಸಿದೆ ನೋಡಿ.
ತುಂಬಾ ಮುಖ್ಯವಾದ ಕೆಲಸಕ್ಕೆ ಹೊರಟು ನಿಂತಾಗ ಹಿಂದಿನಿಂದ ಯಾರಾದ್ರೂ ಕೂಗಿ ಎಲ್ಲಿಗೆ ಹೊರಟಿದ್ದಿರ ಎಂದು ಕೇಳಿದ್ರೆ ನಿಮ್ಮ ಕೆಲಸ ಕೆಟ್ಟಂತೆ, ಮನೆಯಿಂದ ವ್ಯಕ್ತಿ ಹೊರಬಂದ ತಕ್ಷಣ ಆ ಮನೆಯ ಸದಸ್ಯ ಕೈನಲ್ಲಿ ಪೊರಕೆ ಹಿಡಿದ್ರೆ, ಹೋದ ಕೆಲಸವಾಗೋದು ಅನುಮಾನ.
ನೀವು ಮನೆಯಿಂದ ಹೊರಬರುವ ವೇಳೆ ನಿಮ್ಮ ಕಣ್ಣಿಗೆ ನಾಯಿ ಕಂಡರೆ, ಅದು ನಿಮ್ಮನ್ನು ನೋಡಿ ಬೊಗಳಿದರೆ ಅದು ಅಪಶಕುನ, ಅಪರಿಚಿತ ನಾಯಿಯೊಂದು ನಿಮ್ಮ ವಾಹನವನ್ನು ಪದೇ ಪದೇ ಮೂಸುತ್ತಿದ್ದರೆ ಏನೋ ಕೆಟ್ಟದ್ದಾಗುತ್ತದೆ ಎಂದರ್ಥ.
ಮನೆಯಿಂದ ಹೊರ ಬರುವ ವೇಳೆ ನಿದ್ದೆ ಮಾಡುವ ಬೆಕ್ಕು ನಿಮ್ಮ ಕಣ್ಣಿಗೆ ಬಿದ್ದರೆ ಅಥವ ಎರಡು ಬೆಕ್ಕುಗಳು ಕಿತ್ತಾಡಿಕೊಳ್ಳುತ್ತಿದ್ದರೆ ಅದು ಕೂಡ ಒಳ್ಳೆಯ ಶಕುನವಲ್ಲ, ಮನೆಯಿಂದ ಹೊರ ಹೋಗುವಾಗ ಮನೆಯಲ್ಲಿದ ವ್ಯಕ್ತಿ ಸೀನಿದ್ರೆ ಅಪಶಕುನವಂತೆ.
ಕನಸಿನಲ್ಲಿ ಹಾಲು ಕಂಡರೆ ಅಪಶಕುನ, ಇನ್ನು ನೀವು ಹೊರಹೋಗುವಾಗ ಈ ಘಟನೆಗಳು ಸಂಭವಿಸುತ್ತಿದ್ದರೆ ನಿಮಗೆ ಶುಭವಾಗುವುದು ನಿಶ್ಚಿತ.
ಸಂಜೆ ವೇಳೆ ಪ್ರಾಯಾಣಿಸುವಾಗ ನಿಮ್ಮ ಕಣ್ಣಿಗೆ ಮಂಗ ಕಂಡರೆ ಅದು ಶುಭ ಸಂಕೇತ, ಕೆಲಸಕ್ಕೆ ಹೋಗುವ ವೇಳೆ ಮುಂಗುಸಿ ಕಂಡರೆ ಬಹಳ ಒಳ್ಳೆಯ ಶಕುನವಂತೆ.
ಧನ ಕರುವಿಗೆ ಹಾಲುಣಿಸುತ್ತಿರುವುದು ಕಂಡರೆ ಅದನ್ನು ತುಂಬಾ ಒಳ್ಳೆಯ ಶಕುನ ಎನ್ನುತ್ತಾರೆ, ಮನೆಯಿಂದ ಹೊರ ಬರುವ ವೇಳೆ ಸನ್ಯಾಸಿ ಕಣ್ಣಿಗೆ ಬಿದ್ದರೆ ಶುಭ, ಹೀಗೆ ಜ್ಯೋತಿಶ್ಯಾಸ್ತ್ರದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಅರ್ಥವಿದೆ, ನೀವು ಪಾಲಿಸಿ ಹಾಗು ಶೇರ್ ಮಾಡುವ ಮೂಲಕ ಇತರರಿಗೂ ತಿಳಿಸಿ, ಶುಭವಾಗಲಿ.