ಭಾರತ ದೇಶ ಗುರುತಿಸಿಕೊಳ್ಳುವುದು ಅಥವಾ ನೆಲೆನಿಂತಿರುವುದು ತನ್ನ ಆಚಾರ ವಿಚಾರಗಳ ಮೇಲೆ, ನಮ್ಮ ಧರ್ಮದಿಂದ ಹೊರದೇಶಗಳಿಗೆ ಹಲವು ಕೊಡುಗೆಗಳನ್ನು ನೀಡಿದ್ದೇವೆ, ಹಾಗೂ ನಮ್ಮಲ್ಲಿ ಇರುವ ಪ್ರತಿಯೊಂದು ಆಚರಣೆಗಳಿಗೂ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ ಎಂಬುದು ಇಂದಿಗೂ ಕೆಲವರ ವಾದ, ವೈಜ್ಞಾನಿಕ ಬದುಕಿಗೆ ಅವಶ್ಯಕ ಆದರೆ ಆ ವೈಜ್ಞಾನಿಕತೆಯ ಭಾವನೆ ಅತಿಯಾಗಿ ನಮ್ಮ ಧರ್ಮವನ್ನು ಸುಳ್ಳು ಎಂದು ವಾದ ಮಾಡುವ ಮನೋಭಾವ ಬೆಳೆದಿದೆ, ಇದರಿಂದ ನಮ್ಮ ಜ್ಯೋತಿಷ್ಯ ವಿದ್ಯೆ, ವಾಸ್ತು ಶಾಸ್ತ್ರ ಗಳು ತಮ್ಮ ಬೆಲೆಯನ್ನು ಕಳೆದುಕೊಳ್ಳುತ್ತಿದೆ.
ಹಿಂದೆ ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಕೂಡಲೇ ಬೈಯುತ್ತಿದ್ದರು, ಆ ರೀತಿ ಮತ್ತೊಮ್ಮೆ ಮಲಗಬೇಡ ಎಂಬ ಉಪದೇಶ ನೀಡುತ್ತಿದ್ದರು, ಕಾರಣ ಏಕೆ ಎಂಬುದು ನಮ್ಮ ಮನಸ್ಸಲ್ಲಿ ಕೂಡುತ್ತಿದ್ದು, ಉತ್ತರಕ್ಕಾಗಿ ತುಂಬಾ ಕೆಣಕಿ ಕೇಳಿದರೆ ಆಗ ಉತ್ತರ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದರೆ ಭೂತ ಪಿಶಾಚಿ ಅಂತಹ ಶಕ್ತಿಗಳು ನಮ್ಮ ಮೈಯಿಗೆ ಸೇರಿಕೊಳ್ಳುತ್ತವೆ ಅಂತ ಹೇಳಿ ಸುಮ್ಮನಾಗಿಬಿಡುತ್ತಿದ್ದರು.
ಇದು ಎಷ್ಟು ಸರಿ ಇದರ ಬಗ್ಗೆ ನಾವಂತೂ ಏನು ಮಾತಾಡುವುದಿಲ್ಲ ಆದರೆ ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ಯಾವ ರೀತಿಯ ಸಮಸ್ಯೆಗಳು ಸಂಭವಿಸಬಹುದು ಎಂಬುದರ ಬಗ್ಗೆ ವಿಜ್ಞಾನ ಹೇಳುವ ಕೆಲವು ವಿಚಾರಗಳನ್ನು ಇಂದು ನಿಮ್ಮೊಂದಿಗೆ ಪ್ರಸ್ತಾಪಿಸಲು ಬಯಸುತ್ತೇವೆ.
ನಿಮಗೆ ತಿಳಿದಿರಬಹುದು ಮನುಷ್ಯನ ದೇಹ ಮ್ಯಾಗ್ನೆಟಿಕ್ ಫೀಲ್ಡ್ ಅಂತ ಅಂಶಗಳಿಂದ ಕೂಡಿರುತ್ತದೆ ಅದೇ ರೀತಿಯಲ್ಲಿ ಭೂಮಿಯು ಮಗ್ನೇಟಿಕ್ ಫೀಲ್ಡ್ ಶಕ್ತಿಯನ್ನು ಹೊಂದಿರುತ್ತದೆ, ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿ ಕೊಂಡಾಗ ದೇಹದ ಮ್ಯಾಗ್ನೆಟಿಕ್ ಫೀಲ್ಡ್ ಹಾಗೂ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಎರಡು ವಿರುದ್ಧ ದಿಕ್ಕಿನಲ್ಲಿ ಜೋಡಿಸಿದಂತೆ ಆಗುತ್ತದೆ, ಆಗ ದೇಹದ ರಕ್ತದ ಒತ್ತಡ ಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಿ ಎದೆಯ ಬಡಿತ ಹೆಚ್ಚಾಗುತ್ತದೆ.
ಮ್ಯಾಗ್ನೆಟಿಕ್ ಅಂಶದ ಜೊತೆಯಲ್ಲಿ ದೇಹದಲ್ಲಿ ಕಬ್ಬಿಣದ ಅಂಶವು ಸಾಕಷ್ಟು ಇರುತ್ತದೆ, ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದರೆ ಅವುಗಳ ಸಾಂದ್ರತೆ ತಲೆಯ ಭಾಗಕ್ಕೆ ಬಂದು ಹೆಚ್ಚುತ್ತದೆ, ಹಾಗೂ ಆ ಕಾಂತ ಕ್ಷೇತ್ರದಿಂದ ಆಕರ್ಷಣೆ ಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರವಾಗುತ್ತದೆ, ಈ ರೀತಿಯಾದರೆ ತಲೆನೋವು, ಆಲ್ಝೈಮರ್ ರೋಗ, ಮೆದುಳಿನ ರೋಗ, ಬುದ್ಧಿ ಮಾನ್ಯತೆ ಹೀಗೆ ಮುಂತಾದ ರೋಗಗಳು ಬರುವ ಸಾಧ್ಯತೆ ಹೆಚ್ಚು.
ವಿಜ್ಞಾನದ ಕೆಲವು ಅಧ್ಯಯನದ ಪ್ರಕಾರ ಮಾನವನ ದೇಹ ತನ್ನದೆಯಾದ ಕಾಂತ ಕ್ಷೇತ್ರವನ್ನು ಹೊಂದಿದೆ, ಯಾವಾಗ ಉತ್ತರ ದಿಕ್ಕಿನ ಕಡೆ ತಲೆ ಮಾಡಿ ಮಲಗಿದರೆ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದುಕೊಳ್ಳುತ್ತದೆ ಎಂದು ಹಾಗೂ ಇದರಿಂದ ಮುಂದೆ ರಕ್ತದ ಒತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಣುತ್ತದೆ ಎಂದು ಪರಿಗಣಿಸಲಾಗಿದೆ.