ಈ 6 ವಸ್ತುಗಳನ್ನು ಎರವಲು ( ಧಾನ ) ಕೊಡಲೂಬೇಡಿ ಹಾಗು ಪಡೆಯಲೂಬೇಡಿ!

0
1719

ಕೆಲವು ವಸ್ತುಗಳನ್ನು ಸಾಲವಾಗಿ ಕೊಡಲೂ ಬಾರದು, ಪಡೆಯಲೂ ಬಾರದು ಮುಖ್ಯವಾಗಿ ಪುಸ್ತಕಗಳನ್ನು ಓದಲು ಎರವಲು ಪಡೆದವರು ಅದನ್ನು ಕೊಡಲು ಮರೆತೆ ಬಿಡ್ತಾರೆ ನಮಗೆ ಇಷ್ಟವಾದ ಪುಸ್ತಕವನ್ನ ಇನ್ನೊಬ್ಬರು ಓದಲಿ ಪಾಪ ಅಂಥ ನಾವು ನಿಸ್ವಾರ್ಥ ಭಾವದಿಂದ ಕೊಡ್ತೇವೆ ಆದರೆ ತೆಗೆದುಕೊಂಡವರು ಅದನ್ನು ಕೊಡುವುದೇ ಇಲ್ಲ, ಮರೆತು ಹೋಗಿಯೋ ಅಥವಾ ಮರೆತಂತೆ ನಟಿಸಿಯೋ ನಮಗೆ ಯಾಮಾರಿಸುತ್ತಾರೆ.

ಎಷ್ಟೋ ಸಲ ನಿಮ್ಮಿಂದ ಬೇರೆಯವರು ಪೆನ್ನು, ವಾಚು, ದಿನಪತ್ರಿಕೆ, ಪುಸ್ತಕ ಹೀಗೆ ಕೆಲವು ವಸ್ತುಗಳನ್ನು ಇಸ್ಕೊಳ್ತಾರೆ ನೀವು ಅವರಿಗೆ ಯಾವುದೇ ಭಾವನೆ ಇಲ್ಲದೆ ಕೊಡ್ತೀರ ಆದರೆ ನಿಮ್ಮ ತರಹನೇ ಅವರೂ ಇರಬೇಕೆಂದೇನೂ ಇಲ್ಲವಲ್ಲ ಅವರು ನಿಮಗೆ ವಾಪಾಸು ಕೊಡುವುದನ್ನೇ ಮರೆತ್ ಹೋಗ್ತಾರೆ ನೀವು ವಾಪಾಸು ಕೇಳಲಾಗದೇ ಸುಮ್ನೆ ಇರ್ತೀರ!

ನಿಮಗೆ ಗೊತ್ತಿದೆಯಾ ? ಕೆಲವು ಪುಸ್ತಕ ಪ್ರೇಮಿಗಳು ತಾವು ಇಷ್ಟಪಟ್ಟ ಪುಸ್ತಕಗಳನ್ನು ಇನ್ನೊಬ್ಬರಿಗೆ ಕೊಡಲು ಹಿಂದೆಟು ಹಾಕುತ್ತಾರೆ ಕಾರಣ ನಮ್ಮಲ್ಲಿನ ಜ್ಞಾನ ಹೊರಟು ಹೋಗುತ್ತೆ ಅನ್ನೋ ಕಾರಣದಿಂದ ಇನ್ನೂ ಕೆಲವರು ನೃತ್ಯ ಪಟುಗಳು ತಮ್ಮ ಗೆಜ್ಜೆಗಳನ್ನು ಕೊಡುವುದಿಲ್ಲ ಅದಕ್ಕೆ ತಮ್ಮ ಪ್ರತಿಭೆ ಹೊರಟು ಹೋಗುತ್ತೆ ಅಂತ.

ಅಷ್ಟೇ ಅಲ್ಲದೆ ಕೆಲವು ವಸ್ತುಗಳನ್ನು ನಾವು ಪಡೆಯ ಬಾರದು ಪಡೆದರೆ ನಮಗೆ ತಲೆನೋವು, ಅನಾರೋಗ್ಯದಂತಹ ಸಣ್ಣ ಪುಟ್ಟ ಕಾಯಿಲೆ ಬರಬಹುದು ನಮ್ಮ ಹಿರಿಯರು ಹೇಳಿದಂತಹ ಈ ನಿಯಮಗಳನ್ನು ನಾವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸೋ ಬದಲು ಹಿರಿಯರು ಯಾವ ವಸ್ತುಗಳನ್ನು ಪಡೆಯಬಾರದು ಅಂತ ಹೇಳಿದ್ದಾರೆ ಅಂತ ನೋಡೋಣ.

ಮುಖ್ಯವಾಗಿ ಪೆನ್ನು ಕೆಲವು ಮೂಢನಂಬಿಕೆಯ ಪ್ರಕಾರ ಪೆನ್ನನ್ನು ನಾವು ಎರವಲು ಪಡೆಯಬಾರದು ಇತರರ ಪೆನ್ನನ್ನು ಪಡೆದು ಅದನ್ನು ವಾಪಾಸು ಕೊಡದಿದ್ದರೆ ಅರ್ಥಿಕ ದಿವಾಳಿತನ ಎದುರಾಗುತ್ತಂತೆ ನಿಮ್ಮ ಪೆನ್ನು ನಿಮ್ಮ ಕರ್ಮ ಫಲ ಎಂದು ಹೇಳಲಾಗುತ್ತೆ, ಆದ್ದರಿಂದ ಪೆನ್ನನ್ನು ಎರವಲು ಪಡೆಯಬಾರದು.

ಇನ್ನೊಬ್ಬರ ವಾಚನ್ನು ನಾವು ಎರವಲು ಪಡೆದು ಕಟ್ಟಿಕೊಳ್ಳುವುದರಿಂದ ಹಣಕಾಸಿನ ತೊಂದರೆ ಉಂಟಾಗುತ್ತದೆ ಆರ್ಥಿಕವಾಗಿ ಸದೃಢ ಬೇಕು ಅಂದ್ರೆ ವಾಚನ್ನು ಯಾರಿಗೂ ಕೊಡಲೂಬಾರದು, ಪಡೆಯಲೂ ಬಾರದು.

ವಿವಾಹಕ್ಕೆ ಸಹಾಯಕ್ಕಾಗಿ ಹಣವನ್ನು ಎರವಲು ಕೊಡಲೂ ಬಾರದು ಪಡೆಯಲೂ ಬಾರದು ಒಂದು ವೇಳೆ ಹಣಕಾಸಿನ ನೆರವನ್ನು ಪಡೆದರೆ ವಿವಾಹ ಜೀವನ ಚೆನ್ನಾಗಿ ಇರುವುದಿಲ್ಲ ಎಂದು ನಂಬಲಾಗಿದೆ ಆದ್ದರಿಂದ ಮದುವೆಗೆ ಬೇಕಾಗುವ ಹಣವನ್ನು ನೀವೆ ಹೊಂದಿಸಿಕೊಳ್ಳಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮದುವೆ ಮಾಡಿದರೆ ಸಾಕು.

ನಿಶ್ಚಿತಾರ್ಥದ ಉಂಗುರ ಖರೀದಿಸಲು ಹಣ ಸಾಲವಾಗಿ ಪಡೆಯಬಾರದು ನಿಮ್ಮ ಮದುವೆ ಆಗುವ ಹೆಣ್ಣಿಗೆ ಬೆಲೆಬಾಳುವ ಉಂಗುರ ತೊಡಿಸಬೇಕು ಎಂದು ಸಾಲ ಮಾಡುವ ಬದಲಿಗೆ ನಿಮ್ಮ ಸಾಮರ್ಥ್ಯ ಎಷ್ಟಿದೆಯೋ ಅಷ್ಟರಲ್ಲೇ ಸಣ್ಣ ಮಟ್ಟದ ಉಂಗುರ ತೊಡಿಸಿದರೆ ಸಾಕು.

ಪುಸ್ತಕಗಳನ್ನು ಎರವಲು ಕೊಡಬೇಡಿ ಒಂದು ವೇಳೆ ಪ್ರೀತಿ ಪಾತ್ರರಿಗೆ ಪುಸ್ತಕ ಇಲ್ಲವೆನ್ನಲು ಆಗದಿದ್ದಾಗ ಅವರಿಗಾಗಿ ಹೊಸ ಪುಸ್ತಕ ಕೊಡುವುದು ಉತ್ತಮ ನಿಮಗಾಗಿ ತಂದಿರುವ ಪುಸ್ತಕ ಕೊಡಬೇಡಿ, ಇನ್ನೊಬ್ಬರು ಧರಿಸಿರುವ ವಸ್ತ್ರಗಳನ್ನು ಬೇರೆಯ ಧರಿಸಬಾರದು ಧರಿಸಿದರೆ ದುರದೃಷ್ಟ ನಮ್ಮ ಬೆನ್ನ ಮೇಲೆ ಹತ್ತುತ್ತದೆ, ಈ ಮೇಲಿನ ಎಲ್ಲಾ ವಸ್ತುಗಳನ್ನು ಎರವಲು ಕೊಡಲೂ ಬೇಡಿ ಪಡೆಯಲೂಬೇಡಿ.

LEAVE A REPLY

Please enter your comment!
Please enter your name here