ನಿಂಬೆಹಣ್ಣಿನ ದೀಪದ ಮಹತ್ವ ಏನು, ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು. ಸಂಪೂರ್ಣ ಮಾಹಿತಿ.

0
8838

ನಿಂಬೆಹಣ್ಣಿನ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಮತ್ತು ಯಾರು ಹಚ್ಚಬಾರದು ಹಾಗು ಅದರ ಮಹತ್ವ ಏನು. ಇದರ ಸಂಪೂರ್ಣ ಮಾಹಿತಿ ಇಂದು ತಿಳಿಯೋಣ ಬನ್ನಿ ಸ್ನೇಹಿತರೇ.

ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಳ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲೆಂದು ಹಚ್ಚುತ್ತೇವೆ. ಮತ್ತು ತಮ್ಮ ಸಂಸಾರದಲ್ಲಿ ಯಾವಾಗಲೂ ಜಗಳ, ಹಣಕಾಸಿನ ತೊಂದರೆಗಳು, ನಿರುತ್ಸಾಹ, ಆರೋಗ್ಯದ ಸಮಸ್ಯೆಗಳು, ಮನೆಯ ವಾಸ್ತುದೋಷಕ್ಕೆ, ಅಪಮೃತ್ಯು ಇವೆಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.

ಮುಖ್ಯವಾಗಿ ಕಾಳಸರ್ಪ ದೋಷಕ್ಕೆ, ವ್ಯವಹಾರದಲ್ಲಿ ತೊಂದರೆ ಯಾಗುತ್ತಿದ್ದರೆ, ಶತೃಗಳ ಕಾಟ ಹೆಚ್ಚಿದ್ದರೆ, ಮದುವೆ ನಿಧಾನವಾಗುತ್ತಿದ್ದರೆ ಕೆಟ್ಟ ಕನಸುಗಳು ಅನುಭವಿಸುತಿದ್ದರೆ ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚುವುದರಿಂದ ಮತ್ತು ದೇವಿಯನ್ನು ಆರಾಧನೆ ಮಾಡುವುದರಿಂದ ಈ ಎಲ್ಲಾ ಸಮಸ್ಸೆಗಳು ನಿವಾರಣೆಯಾಗುತ್ತದೆ.

ನಿಂಬೆಹಣ್ಣಿನ ದೀಪವನ್ನು ಪಾರ್ವತಿ ಸ್ವರೂಪರಾದ ಅಂಬಾಭವಾನಿ, ಕಾಳಿಕದೇವಿ, ಚೌಡೇಶ್ವರಿ, ಮಾರಿಯಮ್ಮ, ದುರ್ಗಿದೇವಿ ಹಾಗೂ ಶಕ್ತಿ ದೇವಸ್ಥಾನಗಳಲ್ಲಿ ಹಚ್ಚುವುದು ಒಳ್ಳೆಯದು. ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗೆ 11.00ರಿಂದ 12.30 ವರೆಗೆ ಹಚ್ಚಬಹುದು.

ನಿಂಬೆ ದೀಪವನ್ನು ಮಂಗಳವಾರ ಹಚ್ಚುವುದಕ್ಕಿಂತ ಶುಕ್ರವಾರ ಹಚ್ಚುವುದು ಬಹಳ ಶ್ರೇಷ್ಠ. ಶುಕ್ರವಾರದ ದೀಪವು ಸತ್ವಗುಣದಿಂದ ಕೂಡಿರುತ್ತದೆ ಮತ್ತು ಶುಭಪ್ರದವಾಗಿರುತ್ತದೆ. ನಿಂಬೆಹಣ್ಣಿನ ದೀಪವನ್ನು ಹಚ್ಚಿಸಿ ನಂತರ ದೇವಿಗೆ ಅಷ್ಟೋತ್ತರ ಮತ್ತು ಪೂಜೆಯನ್ನು ಮಾಡಿಸಬೇಕು. ಹೆಂಗಸರು ಪೂಜೆಯಾದ ನಂತರ ಅಲ್ಲಿಗೆ ಬಂದಿರುವ ಸುಮಂಗಲಿಯರಿಗೆ ಅರಿಶಿನ ಕುಂಕುಮಗಳನ್ನು ಕೊಟ್ಟು ನಮಸ್ಕಾರ ಮಾಡಿ ಅವರ ಆರ್ಶಿವಾದವನ್ನು ತೆಗೆದುಕೊಳ್ಳಬೇಕು.

ಯಾರಿಗೆ ಸಮಸ್ಸೆ ಬಂದಿದೆ ಅವರಿಗೆ ಹಚ್ಚುವ ಸಮಯವಿಲ್ಲದಿದ್ದರೂ ಅವರ ಮನೆಯವರು ಯಾರುಬೇಕಾದರು ದೀಪವನ್ನು ಹಚ್ಚಬಹುದು ಆದರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು.

ನಿಂಬೆಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕು ಆರೋಗ್ಯ ಸರಿಇಲ್ಲದಿದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು. ಮಕ್ಕಳ ಹುಟ್ಟುಹಬ್ಬ, ಮದುವೆಯಾದ ದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು. ಒಂದು ದೀಪ ಹಚ್ಚುವುದರಿಂದ ಗ್ರಹ ದೋಷ ನಿವಾರಣೆ ಮಾಡಿಕೊಳ್ಳಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here