ಈ ಧಾರವಾಹಿ ನಟರೆಲ್ಲರೂ ಮುಸ್ಲಿಮರು ಗೊತ್ತೇ. ನೋಡಿದರೆ ಶಾಕ್ ಆಗ್ತೀರಾ.

0
16860

ಕನ್ನಡ ಚಿತ್ರರಂಗದಲ್ಲಿ ಕಲಾವಿದರಿಗೆ ಕಡಿಮೆ ಏನು ಇಲ್ಲ. ಪ್ರತಿದಿನ ಸಾವಿರಾರು ಕಲಾವಿದರು, ಚಿತ್ರರಂಗಕ್ಕೆ ಬರುತ್ತಿರುತ್ತಾರೆ, ನೂರಾರು ಕಲಾವಿದರು ನಿರಾಶೆಯಿಂದ ಚಿತ್ರ ರಂಗವನ್ನು ಬಿಡುತ್ತಿರುತ್ತಾರೆ. ಒಟ್ಟಾರೆ ಹೇಳುವುದಾದರೆ ಕಿರುತೆರೆ ಅಥವಾ ಬೆಳ್ಳಿತೆರೆಯಲ್ಲಿ ಅವಕಾಶಗಳು ಸಿಗುವುದು ಸುಲಭದ ಮಾತಲ್ಲ. ಕನ್ನಡ ಚಿತ್ರರಂಗದಲ್ಲಿ ಯಾವುದೇ ರೀತಿಯ ಜಾ’ತಿಯ ತಾರತಮ್ಯತೆ ಇಲ್ಲವಾದರೂ, ಬೆರಳೆಣಿಕೆಯಷ್ಟು ಮುಸ್ಲಿಂ ನಟ ಮತ್ತು ನಟಿಯರು ನಮ್ಮ ಕನ್ನಡ ಚಿತ್ರರಂಗಕ್ಕೆ ದೊರಕಿದ್ದಾರೆ.

ಇತ್ತೀಚೆಗೆ ಸಾಕಷ್ಟು ಚಿತ್ರಗಳಲ್ಲಿ ಹಾಗೂ ಕನ್ನಡ ಕಿರುತೆರೆಯ ಧಾರವಾಹಿಗಳಲ್ಲಿ ಮುಸ್ಲಿಂ ನಟ ನಟಿಯರನ್ನು ನೋಡಲು ಕಾಣಸಿಗುತ್ತಾರೆ. ಆದರೆ ಅವರು ನಟನೆಯಲ್ಲಿ ಎಷ್ಟರಮಟ್ಟಿಗೆ ಪರಿಣಿತಿ ಪಡೆದಿದ್ದಾರೆಂದರೆ ಅವರ ಪಾತ್ರವನ್ನು ನೋಡಿದರೆ ಅವರು ಮುಸ್ಲಿಂ ಎಂದು ತಿಳಿಯುವುದೇ ಇಲ್ಲ. ನಟರಿಗೆ ತಮ್ಮ ರೂಪದ ಜೊತೆ ಭಾಷೆಯ ಮೇಲು ಕೂಡ ಹಿಡಿತ ಇರಬೇಕಾಗುತ್ತದೆ.

ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಮಾತನಾಡಿದರೆ ಮಾತ್ರ ಕರ್ನಾಟಕದಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆ ಎರಡು ಕಡೆಯಲ್ಲೂ ಮಿಂಚಲು ಸಾಧ್ಯ. ಇತ್ತೀಚೆಗೆ ನಮ್ಮ ಕನ್ನಡ ಧಾರವಾಹಿಗಳಲ್ಲಿ ಕೆಲವು ನಟರು ಅಮೋಘ ನಟನಾ ಶಕ್ತಿಯನ್ನು ತೋರಿಸುತ್ತಿದ್ದಾರೆ. ಮಾತೃಭಾಷೆ ಉರ್ದು ಅಥವಾ ಹಿಂದಿ ಆಗಿದ್ದರೂ ಕೂಡ ಕನ್ನಡವನ್ನು ಸ್ಪಷ್ಟವಾಗಿ ಕಲಿತು ನಟನೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಮೊಟ್ಟ ಮೊದಲನೆಯದಾಗಿ ಸಿಬು ಸುರೇನ್ ಎಂದೇ ಖ್ಯಾತರಾಗಿರುವ, ಸಾಕಷ್ಟು ಧಾರಾವಾಹಿಯಲ್ಲಿ ನಟನೆ ಮಾಡಿರುವ ಇವರ ಮೂಲ ಹೆಸರು ಸಿಗ್ಬಾತ್ ಉಲ್ಲ. ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಧಾರವಾಹಿಯಲ್ಲಿ ದ್ವಿತೀಯ ನಾಯಕನಾಗಿ ಕೂಡ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ತಮಿಳು ತೆಲುಗು ಧಾರವಾಹಿಗಳನ್ನು ಕೂಡ ಇವರನ್ನು ಕಾಣಬಹುದು.

ಎರಡನೆಯದಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರವಾಹಿಯ ನಾಯಕಿಯ ಪಾತ್ರಧಾರಿ. ಮೂಲತಹ ಈ ಧಾರವಾಹಿ ಭಕ್ತಿ ಪ್ರಧಾನ ಧಾರವಾಹಿಯಾಗಿದ್ದರಿಂದ ಈಕೆಗೆ ಇದು ಬಹಳ ಚಾಲೆಂಜಿಂಗ್ ಆದ ಪಾತ್ರವಾಗಿತ್ತು. ಮೂಲತಹ ಮುಸ್ಲಿಂ ಧರ್ಮದವರಾದ ಆಸಿಯಾ ಫಿರ್ದೋಸ್ ಅವರು ಅತ್ಯಂತ ಅಚ್ಚುಕಟ್ಟಾಗಿ ದೈವ ಭಕ್ತಿಯನ್ನು ತಮ್ಮ ನಟನೆಯ ಮೂಲಕ ತೋರ್ಪಡಿಸಿದ್ದರು. ಧಾರವಾಹಿಯು ಕೂಡ ಉತ್ತಮ ಪ್ರದರ್ಶನ ಕಂಡು ಒಳ್ಳೆಯ ರೇಟಿಂಗ್ ಪಡೆದುಕೊಂಡಿತ್ತು.

ಮೂರನೆಯದಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮಾಧವ್ ಅವರ ಪುತ್ರನ ಪಾತ್ರ ಮಾಡುತ್ತಿರುವ ಅವಿನಾಶ್ ಹೆಸರಿನ ಪಾತ್ರಧಾರಿ. ಈ ನಟರ ಮೂಲ ಹೆಸರು ಅರ್ಫತ್ ಶರೀಫ್. ಇವರು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಹೀಗೆ ಸಾಕಷ್ಟು ಅನ್ಯಧರ್ಮೀಯರಾದ ನಟರು ಕೂಡ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಾ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಕ್ಕೆ ಗೌರವ ಸಲ್ಲಿಸುತ್ತಿದ್ದಾರೆ.

ಇದೇ ತರಹದ ಮತ್ತಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಹಾಗೂ ನಮ್ಮ ವೆಬ್ಸೈಟನ್ನು ಆಗಾಗ ಫಾಲ್ಲೋ ಮಾಡುತ್ತೀರಿ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲಾ ಲೇಟೆಸ್ಟ್ ಅಪ್ಡೇಟ್ಗಳಿಗಾಗಿ ತಪ್ಪದೆ ನಮ್ಮನ್ನು ಫಾಲೋ ಮಾಡಿ.

LEAVE A REPLY

Please enter your comment!
Please enter your name here