ಸಕ್ಕರೆ ಎಂಬ ವಿಷ ಭಯಂಕರ ಸೇವಿಸಿದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಹೇಗೆ ನೋಡಿ!

0
2196

ದೊಡ್ಡವರಿಗೆ ಸಕ್ಕರೆ ಪಾಕದಲ್ಲಿ ಮುಳುಗಿಸಿರುವ ರಸಗುಲ್ಲ, ಗುಲಾಬ್ ಜಾಮೂನ್ ಗಳೆಂದರೆ ಪಂಚಪ್ರಾಣ, ಸಕ್ಕರೆ ಇದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಸಕ್ಕರೆ ಇಲ್ಲದ ಕಾಫಿ, ಚಹಾವನ್ನು ಊಹಿಸಲು ಅಸಾಧ್ಯ, ಸಕ್ಕರೆ ಹಾಕಿ ಮಾಡಿರುವ ಸಿಹಿತಿಂಡಿಗಳು, ಕೇಕ್, ಚಾಕ್ಲೇಟ್, ಐಸ್ ಕ್ರೀಮ್ ಗಳಂತೂ ಮಕ್ಕಳಿಗೆ ತುಂಬಾನೇ ಇಷ್ಟ, ಮದುವೆ ಮುಂಜಿ ಮೊದಲಾದ ಸಭೆ ಸಮಾರಂಭಗಳ ಊಟಗಳಲ್ಲಂತೂ ಸಕ್ಕರೆಯನ್ನು ಬಳಸಿ ಮಾಡಿರುವ ಪಾಯಸ, ಸಿಹಿ ತಿಂಡಿಗಳದ್ದೇ ಗಮ್ಮತ್ತು.

ಸಕ್ಕರೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯಿಲ್ಲ, ಅಗತ್ಯಕ್ಕಿಂತ ಜಾಸ್ತಿಯಾಗಿ ಸಕ್ಕರೆ ಸೇವಿಸುವುದರಿಂದ ಬಹಳಷ್ಟು ರೋಗಗಳಿಗೆ ನಮ್ಮ ದೇಹವು ಆಹ್ವಾನ ಕೊಟ್ಟಂತೆಯೇ, ಸಕ್ಕರೆ ಸೇವನೆಯಿಂದ ದೇಹದಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗುತ್ತದೆ ಇದರಲ್ಲಿ ಕ್ಯಾಲೊರಿಗಳು ಹೆಚ್ಚಾಗಿರುವುದರಿಂದ ನಮ್ಮ ದೇಹದ ವಿವಿಧ ಅಂಗಾಂಗಗಳಲ್ಲಿ ಅನಗತ್ಯವಾದ ಕೊಬ್ಬು ಸಂಗ್ರಹವಾಗುವಂತೆ ಮಾಡಿ ಬೊಜ್ಜು ಬರಬಹುದು.

ಡಯಾಬಿಟಿಸ್ಸ ಸಕ್ಕರೆಯನ್ನು ಜಾಸ್ತಿ ಸೇವಿಸುವವರಲ್ಲಿ ಮಧುಮೇಹ ಅಥವಾ ಡಯಾಬಿಟಿಸ್ ರೋಗ ಬರುವ ಸಾಧ್ಯತೆ ತುಂಬಾ ಹೆಚ್ಚು.

ಹೃದ್ರೋಗಗಳು ಬರಬಹುದು ಸಕ್ಕರೆ ಜಾಸ್ತಿ ಸೇವಿಸುವವರಿಗೆ ಡಯಾಬಿಟಿಸ್ ಸಾಧ್ಯತೆ ಹೆಚ್ಚು, ಡಯಾಬಿಟಿಸ್ ಇರುವವರಲ್ಲಿ, ಅದರಲ್ಲೂ ಟೈಪ್ 2 ಡಯಾಬಿಟಿಸ್ ಇರುವವರಲ್ಲಿ, ಹೃದಯದ ಖಾಯಿಲೆಗಳು ಬರುವ ಸಾಧ್ಯತೆ 65% ಹೆಚ್ಚು ಎಂದು ಸಂಶೋಧನೆಗಳು ತೋರಿಸಿಕೊಟ್ಟಿವೆ.

ಕೊಲೆಸ್ಟ್ರಾಲ್ಸ ಸಕ್ಕರೆ ಜಾಸ್ತಿ ಸೇವಿಸುವವರ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಗಳಿಗಿಂತ ಕೆಟ್ಟ ಕೊಲೆಸ್ಟ್ರಾಲ್ಸ ಗಳ ಪ್ರಮಾಣ ಜಾಸ್ತಿ ಇರುವುದು ಕೆಲವು ಸಂಶೋಧನೆಗಳಲ್ಲಿ ಕಂಡು ಬಂದಿವೆ.

ಕ್ಯಾನ್ಸರ್ ಡಯಾಬಿಟಿಸ್ ಖಾಯಿಲೆ ಇರುವವರಲ್ಲಿ ಇನ್ಸುಲಿನ್ ಸರಿಯಾಗಿ ಉತ್ಪಾದನೆ ಆಗುವುದಿಲ್ಲ, ಇನ್ಸುಲಿನ್ ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಾದ ಹಾರ್ಮೋನ್ ಆಗಿದೆ, ಇದು ಸರಿಯಾಗಿ ಬಿಡುಗಡೆ ಆಗದಿದ್ದಲ್ಲಿ ಜೀವಕೋಶಗಳು ಬೇಕಾಬಿಟ್ಟಿಯಾಗಿ ಬೆಳೆದು ಕ್ಯಾನ್ಸರ್ ಬರುವ ಸಾಧ್ಯತೆಯು ಜಾಸ್ತಿ.

ಕಣ್ಣಿನ ಸಮಸ್ಯೆಗಳು ಡಯಾಬಿಟಿಸ್ ಗೂ ಕಣ್ಣಿನ ಆರೋಗ್ಯಕ್ಕೂ ನೇರ ಸಂಬಂಧ ಇದೆ, ಹಾಗಾಗಿ ಸಕ್ಕರೆ ಖಾಯಿಲೆ ಇರುವವರಲ್ಲಿ ಕಣ್ಣಿನ ಸಮಸ್ಯೆಗಳು ತಲೆದೋರಬಹುದು.

ಹಲ್ಲಿನ ಸಮಸ್ಯೆಗಳು ನಾವು ಸೇವಿಸಿದ ಆಹಾರ ಹಲ್ಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ ದಂತ ಕುಳಿಗಳ ಸಾಧ್ಯತೆ ಹೆಚ್ಚು, ಆದರೆ ಸಕ್ಕರೆ ಸೇವಿಸಿದಾಗ ಇದಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ದಂತ ಕುಳಿಗಳು ಆಗಬಹುದು.

LEAVE A REPLY

Please enter your comment!
Please enter your name here