ಪದೇ ಪದೇ ಕಾಡುತ್ತ ಇದ್ಯಾ ಗ್ಯಾಸ್ಟ್ರಿಕ್ ಸಮಸ್ಯೆ ? ಇಲ್ಲಿದೆ ಅದಕ್ಕೆ ಮುಕ್ತಿ!

0
1204

ಹೊಟ್ಟೆಯಲ್ಲಿ ಉರಿ, ಹೊಟ್ಟೆ ಬಿಗಿತ, ಹೊಟ್ಟೆ ನುಲಿಯುವುದು ಇವೆಲ್ಲವೂ ಗ್ಯಾಸ್ಟ್ರಿಕ್ ನ ಲಕ್ಷಣಗಳು, ಕೆಲವೊಮ್ಮೆ ನಾವು ಸೇವಿಸಿದ ಆಹಾರದಿಂದಲೂ ಸಹ ಈ ರೀತಿಯ ತೊಂದರೆ ಕಾಣಿಸಿಕೊಳ್ಳುತ್ತದೆ, ಈ ರೀತಿಯ ಸಮಸ್ಯೆ ಪ್ರತಿನಿತ್ಯವೂ ನಿಮ್ಮನ್ನು ಕಾಡುತ್ತಿದ್ದರೆ, ವೈದ್ಯರನ್ನು ಕಾಣುವುದು ಉತ್ತಮ, ಆದರೆ ಯಾವಾಗಲಾದರೂ ಒಮ್ಮೆ ಕಂಡು ಬಂದಲ್ಲಿ ನೀವು ನಿಮ್ಮ ಮನೆಯಲ್ಲೇ ಸರಳವಾದ ಉಪಚಾರಗಳ ಮೂಲಕ ಈ ಸಮಸ್ಯೆಯಿಂದ ದೂರವಿರಬಹುದು.

ಊಟಕ್ಕೆ ಮುಂಚೆ ಕನಿಷ್ಟ ಒಂದು ಗ್ಲಾಸ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತದೆ.

ನಿಮಗೆ ಚೂಯಿಂಗ್ ಗಮ್ ಜಗಿಯುತ್ತಾ ಮಾತನಾಡುವ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಿ ಏಕೆಂದರೆ, ಮಾತನಾಡುವಾಗ ಜೊತೆಗೆ ಗಾಳಿಯೂ ಒಳ ಸೇರಿ, ಹೊಟ್ಟೆ ಉಬ್ಬರ ಕಾಣಿಸಿಕೊಂಡು ಗ್ಯಾಸ್ ಉತ್ಪತ್ತಿಯಾಗುತ್ತದೆ.

ಹೊಟ್ಟೆಯಲ್ಲಿ ಸೇರಿರುವ ಗ್ಯಾಸನ್ನು ಶಮನ ಮಾಡಲು ಹರ್ಬಲ್ ಪಾನೀಯಗಳು ಬಹಳಾನೇ ಉತ್ತಮ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಹೊಟ್ಟೆಗೆ ಗ್ಯಾಸ್ ಹೋಗದಂತೆ ಮಾಡಲು, ನೀವು ಸೇವಿಸುವ ಆಹಾರದಲ್ಲಿ ಗ್ಯಾಸ್ ಇರುವ ಆಹಾರಗಳನ್ನು ನಿಲ್ಲಿಸಿ, ಉದಾ: ಅವರೆಕಾಳು, ಬೇಳೆಗಳು, ಎಲೆಕೋಸು, ಮೂಲಂಗಿ ಇತ್ಯಾದಿ.

ಪೆಪ್ಸಿ, ಕೋಕಾಕೋಲ, ಸ್ಪ್ರೈಟ್ ಮುಂತಾದ ಸೋಡಾ ಇರುವಂತಹ ಪಾನೀಯಗಳನ್ನು ನಿಲ್ಲಿಸಿ, ಇದು ಹೊಟ್ಟೆಯಲ್ಲಿ ಗ್ಯಾಸ್ ಅನ್ನು ತುಂಬಿ ಸಮಸ್ಯೆಯನ್ನು ಇನ್ನೂ ಹೆಚ್ಚಿಸುತ್ತವೆ.

ರಾತ್ರಿ ಊಟವಾದ ಬಳಿಕ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಿ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here