ಈ ಜನ್ಮದಲ್ಲಿ ನಿಮಗೆ ಕಿಡ್ನಿ ಸಮಸ್ಯೆ ಬರದಿರಲು ಜಸ್ಟ್ ಹೀಗೆ ಮಾಡಿ

0
1136

ನಿರಂತರ ಚಟುವಟಿಕೆ : ದೇಹದ ಬೊಜ್ಜು ಕರಗಬೇಕು ಅಂದರೆ ದಿನವು ನೀವು ಚಟುವಟಿಕೆಗಳಿಂದ ಕೂಡಿರ ಬೇಕು, ಇದು ತೂಕ ನಷ್ಟ, ಸಕಾರಾತ್ಮಕ ಚಿಂತನೆ ಮತ್ತು ಮೂತ್ರಪಿಂಡವನ್ನು ಆರೋಗ್ಯಕರವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಗ್ಲುಕೋಸ್ ಮಟ್ಟ : ನಿಮ್ಮ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆ ಮಾಡಿಸುವುದರಂದ ಮಧುಮೇಹ ಇರುವ ಬಹುಪಾಲು ಜನರು ಕಿಡ್ನಿ ಹಾನಿಗೆ ಒಳಗಾಗುವುದನ್ನು ತಪ್ಪಿಸಬಹುದು.

ಆಹಾರ ಪದ್ಧತಿ : ನೀವು ಆರೋಗ್ಯಕರ ಆಹಾರ ಪದ್ದತಿಯನ್ನು ಪಾಲಿಸುವುದರಿಂದ ಹೃದಯ ಸಮಸ್ಯೆ ಮಧುಮೇಹ ಹೀಗೆ ನಿಮ್ಮ ಕಿಡ್ನಿಯ ಮೇಲೆ ದೀರ್ಘಾವದಿ ಸಮಸ್ಯೆ ಬೀರುವುದನ್ನು ತಡೆಗಟ್ಟಬಹುದಾಗಿದೆ, ಕಡಿಮೆ ಉಪ್ಪನ್ನು ಸೇವಿಸಿ, ಹೊರಗಡೆಯ ರೆಸ್ಟೋರೆಂಟ್ಗಳ ಊಟ ಸೇವನೆ ಮತ್ತು ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಉಪ್ಪು ಇರುವುದರಿಂದ ಅದರ ಬದಲಾಗಿ ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ತಿನ್ನಬೇಕು. ಇದು ನಿಮ್ಮ ದೇಹದಲ್ಲಿನ ಉಪ್ಪಿನ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಸಾಕಷ್ಟು ನೀರು : ಹೆಚ್ಚು ನೀರು ಕುಡಿಯುವುದರಿಂದ ಕಿಡ್ನಿಯು ದೇಹದ ತ್ಯಾಜ್ಯಗಳು ಮತ್ತು ಹೆಚ್ಚಿನ ಸೋಡಿಯಂ, ಯೂರಿಯ ಗಳನ್ನು ಮೂತ್ರದಲ್ಲಿ ಹೊರಹಾಕುತ್ತದೆ, ಇದರಿಂದ ಕಿಡ್ನಿ ಹಾನಿಗೊಳಗಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಇರುವ ರೋಗಿಗಳು ಒಂದು ದಿನಕ್ಕೆ 1-2 ಲೀಟರ್ ನೀರನ್ನು ಅವಶ್ಯಕವಾಗಿ ಕುಡಿಯುವುದರಿಂದ ಹೊಸ ಕಲ್ಲುಗಳು ಆಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಧೂಮಪಾನ : ಧೂಮಪಾನ ಮಾಡುವುದರಿಂದ ಮೂತ್ರಪಿಂಡಗಳಲ್ಲಿ ರಕ್ತದ ಹರಿವು ನಿಧಾನವಾಗುತ್ತದೆ. ಮತ್ತು ಇದರಿಂದ ಮೂತ್ರಪಿಂಡದ ಕೆಲಸದ ಮೇಲೆ ಪರಿಣಾಮ ಬೀರಿ ಅದರ ಕಾರ್ಯನಿರ್ವಹಣೆ ಕುಂಠಿತವಾಗುತ್ತದೆ, ಅಷ್ಟೇ ಅಲ್ಲದೆ ಧೂಮಪಾನ ಮಾಡುವುದರಿಂದ ಕಿಡ್ನಿ ಕ್ಯಾನ್ಸರ್ ಬರುವ ಸಂಭವಗಳು ೫೦% ಹೆಚ್ಚಾಗುತ್ತದೆ.

LEAVE A REPLY

Please enter your comment!
Please enter your name here