ಊಟದ ನಂತರ ನೀರು ಕುಡಿಯಬೇಕೋ ಅಥವಾ ಊಟಕ್ಕಿಂತ ಮುಂಚೆ ನೀರು ಕುಡಿದರೆ ಒಳ್ಳೆಯದೋ..?

0
2527

ಊಟಮಾಡುವಾಗ ನೀರು ಕುಡಿಯುವ ಅಭ್ಯಾಸ ಯಾರಿಗೆ ಇಲ್ಲ ಹೇಳಿ, ನೀರು ಕುಡಿಯುವುದರ ಬಗ್ಗೆ ಯಾರೂ ಅಷ್ಟಾಗಿ ಯೋಚನೆ ಮಾಡುವುದಿಲ್ಲ, ಊಟ ಮಾಡುವ ಬದಲು ಅಥವಾ ಊಟದ ಸಮಯದಲ್ಲಿ ಬೇಕು ಅಂತ ಅನ್ನಿಸಿದಾಗೆಲ್ಲ ನೀರನ್ನು ನಾವು ಕುಡಿಯುತ್ತೇವೆ, ಆದರೆ ಈ ರೀತಿ ಮಾಡುವುದು ಎಷ್ಟು ಸರಿ ಅಥವಾ ಎಷ್ಟು ತಪ್ಪು, ಕೆಲವರು ಊಟದ ನಂತರ ನೀರನ್ನು ಕುಡಿಯಬೇಕು ಎಂದು ಹೇಳಿದರೆ ಮತ್ತೆ ಕೆಲವರು ಊಟದ ಮುಂಚೆ ನೀರು ಕುಡಿಯಬೇಕು ಎಂದು ಹೇಳುತ್ತಾರೆ ಯಾವುದು ಸರಿ ಯಾವುದು ತಪ್ಪು.

ಈ ಪ್ರಶ್ನೆಯನ್ನು ನಾವು ಕೆಲವು ತಜ್ಞರ ಬಳಿ ಕೇಳಿದಾಗ ಅವರು ಹೇಳುವುದು ಏನೆಂದರೆ ಊಟದ ಮುಂಚೆ ನೀರು ಕುಡಿಯ ಬಹುದು ಆದರೆ ಕೆಲವು ಸೆಕೆಂಡುಗಳ ಅಂತರದಲ್ಲಿ ನೀರು ಕುಡಿದು ಊಟವನ್ನು ಮಾಡಬಾರದು, ಇದರಿಂದ ನಮ್ಮ ಜೀವನ ಕ್ರಿಯೆ ನಿಗದಿತ ಸಮಯಕ್ಕಿಂತ ಬೇಗನೆ ಆಗುತ್ತದೆ ಎಂದು, ಈ ರೀತಿ ನಡೆದರೆ ದೇಹದಲ್ಲಿ ಆಸಿಡಿಟಿ ಸಾಧ್ಯತೆ ಬಹಳ ಹೆಚ್ಚಿರುತ್ತದೆ ಅಂತೆ.

ಇನ್ನು ಊಟ ಮಾಡಬೇಕಾದರೆ ನಿಮಗೆ ತಿಳಿದಿರುವ ಹಾಗೆ ನಿಮ್ಮ ಆಹಾರ ಜೊತೆಯಲ್ಲಿ ಬಾಯಲ್ಲಿ ಬರುವ ಜೊಲ್ಲುರಸ ಮಿಶ್ರಣವಾಗಿ ನಿಮ್ಮ ದೇಹವನ್ನು ಸೇರುತ್ತದೆ, ಈ ಜೊಲ್ಲು ರಸವೆ ನಿಮ್ಮ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ ಆದರೆ ಮಧ್ಯದಲ್ಲಿ ನೀರು ಕುಡಿಯುವುದರಿಂದ ಜೊಲ್ಲು ಉತ್ಪಾದನೆಗೆ ಅಡ್ಡಿ ಉಂಟು ಮಾಡುತ್ತದೆ, ಊಟ ಮುಗಿದ ತಕ್ಷಣ ಅಂದರೆ ತಟ್ಟೆ ಖಾಲಿ ಮಾಡಿದ ತಕ್ಷಣ ನೀರು ಸೇವಿಸುವುದರಿಂದಲು ಜೀರ್ಣ ಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಾದರೆ ನಾವು ನೀರು ಕುಡಿಯುವ ಸರಿಯಾದ ಸಮಯ ಯಾವುದು ಎಂಬ ಗೊಂದಲ ನಿಮ್ಮಲ್ಲಿದ್ದರೆ ಈ ಮುಂದೆ ಓದಿ, ಊಟವಾದ ಮೇಲೆ ಮೊದಲ ಹಂತದ ಜೀರ್ಣಕ್ರಿಯೆ ಮುಗಿಯಲು 30 ನಿಮಿಷ ಬೇಕಂತೆ ಇದಾದ ಮೇಲೆ ನೀರು ಕುಡಿದರೆ ಉತ್ತಮ ಹಾಗೂ ಇದರಿಂದ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.

LEAVE A REPLY

Please enter your comment!
Please enter your name here