ಮ’ರಣ ಕಾಲದಲ್ಲಿ ಯಾವ ಯೋಚನೆಗಳು ಬರಬಹುದು.

0
3623

ಮ’ರಣ ಕಾಲದಲ್ಲಿ ಯಾವ ಯೋಚನೆಗಳು ಬರಬಹುದು. ಇದೊಂದು ನಂಬಲಾರದಂತಹ ವಿಚಾರ. ಆದರೆ ನಮ್ಮ ಪುರಾತನ ಋಷಿಗಳು ಭೂತ, ವರ್ತಮಾನ, ಭವಿಷ್ಯಗಳನ್ನು ಬಲ್ಲಂತಹ ತ್ರಿಕಾಲ ಜ್ಞಾನಿಗಳು ಅಲ್ಲವೇ. ಅವರು ನಡೆಸಿದ ಸಂಶೋಧನೆಗಿಂತ ಮಿಗಿಲು ಯಾವುದೂ ಇಲ್ಲ. ಕೇವಲ ನಾವಿಂದು ಅದನ್ನು ಆ ಸಂಶೋಧನೆಗಳನ್ನು ಹುಡುಕಿ ಇಂದಿನ ವ್ಯಾವಹಾರಿಕತೆಗೆ ಹೊಂದುವಂತೆ ಬರೆಯಬಹುದಷ್ಟೆ. ಮನುಷ್ಯನು ತನ್ನ ಕೊನೆಯುಸಿರಿನ ಕಾಲದಲ್ಲಿ ಏನು ಯೋಚಿಸಿರುವನು.

ಇದನ್ನು ಹೇಳಲಿಕ್ಕೆ ಆ ಮನುಷ್ಯನು ಇರುವುದಿಲ್ಲ. ಮರಣಕ್ಕೆ ಕೆಲ ಗಳಿಗೆಗೆ ಮುಂಚೆ ಕೆಲವರು ಅವರ ಮನದ ಇಂಗಿತಗಳನ್ನು ಹೇಳಿದ್ದಿದೆ. ಆದರೆ ಕೊನೆಯ ಉಸಿರಿನಲ್ಲಿ ಇರುವಾಗ ಮನದ ಯೋಚನೆಗಳು ಏನಿರಬಹುದು ಎಂದು ಯೋಚಿಸಿದವರಿಲ್ಲ. ಇಲ್ಲಿ ನಾಲ್ಕು ವಿಧಗಳ ಚಿಂತನೆಗಳಿವೆ. ಆರ್ತ, ರೌದ್ರ, ಧನ್ಯ ಮತ್ತು ಶುಕ್ಲ. ಇವುಗಳಲ್ಲಿ ಯಾವುದಾದರೂ ಒಂದು ಚಿಂತನೆ ಬರಲೇ ಬೇಕು ಎಂಬುದು ಮರಣ ಕಾಲದ ಸಿದ್ಧಾಂತ. ಆರ್ತ-ಹೆಸರೇ ಹೇಳುತ್ತದೆ ಆರ್ತ ನಾದ ಎಂದು.

ಅಯ್ಯೋ ನನ್ನ ಮಕ್ಕಳು, ನನ್ನ ಹೆಂಡತಿ, ನನ್ನ ಆಸ್ತಿ ಎಲ್ಲಾ ಬಿಟ್ಟು ಹೋಗಬೇಕಲ್ಲಾ ಎಂಬ ದುಃಖ ಬರುತ್ತದೆ. ನೀವು ನೋಡಿರಬಹುದು, ಕೆಲ ಮನುಷ್ಯರು ಮರಣ ಕಾಲಕ್ಕೆ ಸದಾ ಅಳುವವರನ್ನು. ಅಂದರೆ ಇವರಿಗೆ ಈ ಲೋಕದ ವ್ಯಾಮೋಹವನ್ನು ತುಂಡು ಮಾಡಿ ಹೋಗಲು ಆಗುತ್ತಿಲ್ಲ. ಆ ಕಡೆಯಿಂದ ಯಮ ಪಾಶ ಎಳೆಯುತ್ತದೆ. ಹಾಗಾಗಿ ದುಃಖಿಸುತ್ತಾರೆ. ಆಗ ಅವರ ಮಕ್ಕಳು ಅಪ್ಪಾ, ಅಜ್ಜಾ, ಅಮ್ಮಾ. ನಿನಗೆ ಏನು ಆಸೆ ಇದೆ ಹೇಳು ಎಂದು ಸಾಂತ್ವನ ಹೇಳುತ್ತಾರೆ.

ಅಂತೂ ಕೊನೆಗೆ ಕ್ಷೀಣವಾಗಿ ಆತ ಇಹಲೋಕವನ್ನು ಒತ್ತಾಯಪೂರ್ವಕ ತ್ಯಜಿಸಬೇಕಾಗುತ್ತದೆ. ಇದನ್ನು ಆರ್ತ ಮರಣ ಎಂದಿದ್ದಾರೆ. ‘ಯಥಾ ಮರಣ ಸ್ವರೂಪಂ ತಥಾ ಪುನರ್ಜಃನ್ಮಃ’ ಅಂದರೆ ಯಾವ ಚಿಂತೆಯಲ್ಲಿ ಸಾಯುತ್ತಾನೋ ಅದೇ ಸ್ವರೂಪದ ಪುನರ್ಜನ್ಮ ಲಭಿಸುತ್ತದೆ. ಈ ರೀತಿಯಲ್ಲಿ ಹುಟ್ಟಿದವರು ಮುಂದಿನ ಜನ್ಮದಲ್ಲಿ ಹೇಗಿರುತ್ತಾನೆ ಎಂಬುದು ನವಜಾತ ಶಿಶುವಿನ ಅಳುವು ಸೂಚಿಸುತ್ತದೆ. ನವಜಾತ ಶಿಶುವು ವಿಪರೀತ ಅಳುವುದು ಈ ಸಂಬಂಧದಿಂದ. ಇದೊಂದು ರೀತಿಯ ಮಾನವನ ಮನಶಾಸ್ತ್ರದ ಕಲಿಕೆಯಂತೆ. ಈ ವ್ಯಕ್ತಿ ಜೀವನದಲ್ಲಿ ಜಿಪುಣ, ದುಃಖಿತನಾಗಿ ಬಾಳುತ್ತಾನೆ.

ಅದರೆ ಉತ್ತಮ ಸಂಯೋಜಕರಿದ್ದರೆ ಇದನ್ನು ಸರಿ ಮಾಡಲು ಸಾಧ್ಯವಿದೆ. ಅದಕ್ಕಾಗಿ ವಿದ್ವಜ್ಜನರ ಸಂಪರ್ಕ ಬೇಕು ಎನ್ನುವುದು. ರೌದ್ರ : ನೀವು ಕೆಲ ಮನುಷ್ಯರು ಆಡುವ ಮಾತುಗಳನ್ನು ಕೇಳಿರಬಹುದು. ‘ನಾನು ಸತ್ತರೂ ನನ್ನ ಹೆಣ ಮುಟ್ಟಬೇಡ, ನಾನು ಸತ್ತರೂ ದೆವ್ವವಾಗಿ ನಿನ್ನನ್ನು ಬಿಡುವುದಿಲ್ಲ, ನನ್ನ ಚಿ’ತೆಗೆ ಹಿರಿ ಮಗ ಕೊ’ಳ್ಳಿ ಇಡುವುದು ಬೇಡ, ನಾನು ಸತ್ತರೆ ನೀನು ನನ್ನ ಅಂತ್ಯ ವಿಧಿ ಮಾಡಬೇಡ’, ಇತ್ಯಾದಿ ಮಾತಾಡುವವರಿಗೆ ರೌದ್ರ ಚಿಂತನೆ ಮ’ರಣವಿರುತ್ತದೆ. ಇವರ ಮುಂದಿನ ಜನ್ಮ ಕಲಹ ಸ್ವರೂಪದಲ್ಲಿ ಇರುತ್ತದೆ.

ಇಂತವರ ಪುನರ್ಜನ್ಮದಲ್ಲಿ ಶಿಶುವಿನಿಂದಲೇ ಈ ಗುಣ ತಿಳಿಯಬಹುದು. ವಿಪರೀತ ಹಟ ಮಾಡುವಿಕೆ, ಕೋಪದಿಂದ ಮಗುವಿನ ಮುಖದ ವರ್ಣವೇ ಬದಲಾಗುವುದು, ಹಾಲಿನ ಬಾಟಲಿಯನ್ನು ಎಳೆದು ಬಿಸಾಡುವಿಕೆ, ಕೆಲ ಜನರನ್ನು ಕಂಡರೆ ಅಳುವುದು ಇತ್ಯಾದಿ ಗುಣಗಳಿರುತ್ತದೆ. ಇಂತಹ ಗುಣವುಳ್ಳ ಮಗುವನ್ನು ಅದರ ಮಾತಾ ಪಿತೃಗಳು ಒಳ್ಳೆಯ ಪೋಲೀಸ್ ಅಧಿಕಾರಿಯೋ, ಐ.ಯೆ.ಎಸ್ ಅಧಿಕಾರಿಯನ್ನೋ ಮಾಡಿದಾಗ ಈ ಮನ ಪರಿವರ್ತನೆಯಾಗಿ ಆತ ಒಬ್ಬ ನಿಷ್ಟಾವಂತ ಮನುಷ್ಯನಾಗಬಹುದು. ಇಲ್ಲವಾದಲ್ಲಿ ಮತ್ತೆ ಪಾಪಿಯೇ ಆಗಬಹುದು.

ಧನ್ಯ : ಈ ವ್ಯಕ್ತಿಯು ಜೀವನದಲ್ಲಿ ಸದಾ ಸಜ್ಜನಿಕೆಯುಳ್ಳವನೆ. ಇವನು ತನ್ನ ಕೊನೆಯ ಕಾಲದಲ್ಲಿ, ‘ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಅನೇಕ ಜನರಿಗೆ, ಸಂಘ ಸಂಸ್ಥೆಗಳಿಗೆ ದಾನ ಮಾಡಿದ್ದೇನೆ, ಯಾರನ್ನೂ ದೂಷಿಸಿಲ್ಲ, ಒಟ್ಟಿನಲ್ಲಿ ಸತ್ಯದಲ್ಲೇ ನಡೆದಿದ್ದೇನೆ ಎಂದು ಯೋಚಿಸುತ್ತಾ ಜೀವ ಬಿಡುತ್ತಾನೆ. ಇದು ಧನ್ಯ ಚಿಂತನಾ ಮ’ರಣ. ಮುಂದಿನ ಜನ್ಮದಲ್ಲಿ ಸಾತ್ವಿಕನೂ ಶ್ರೀಮಂತನೂ, ದಾನಿಯೂ ಆಗಿ ಹುಟ್ಟುತ್ತಾನೆ. ಇವನು ಮಗುವಿದ್ದಾಗಲೂ ಯಾರಿಗೂ ಹಿಂ’ಸೆ ನೀಡುವುದಿಲ್ಲ.

ನೀವು ಕೆಲ ತಾಯಂದಿರ ಮಾತು ಕೇಳಿರಬಹುದು. ನನ್ನ ದೊಡ್ಡ ಮಗ ಶಿಶುವಾಗಿದ್ದಾಗ ರಗಳೆಯೇ ಇಲ್ಲ. ಹಾಲು ಕೊಟ್ಟು ಮಲಗಿಸಿದರೆ ಅವನಷ್ಟಕ್ಕೇ ಆಟವಾಡಿಕೊಂಡು ಇರುತ್ತಾನೆ. ಅಳುವುದು ಬಾರೀ ಕಡಿಮೆ. ಅಂತೂ ಇವನ ಬಾಲ್ಯದಲ್ಲಿ ನನಗೇನೂ ರಗಳೆಯಾಗಲಿಲ್ಲಪ್ಪ’ ಎಂದು ಮಗುವಿನ ಬಗ್ಗೆ ಗುಣಗಾನ ಮಾಡುತ್ತಾಳೆ. ಇದು ಧನ್ಯ ಚಿಂತನೆಯಲ್ಲಿ ಮರಣಿಸಿದವನ ಪುನರ್ಜನ್ಮದ ರೂಪ.

ಶುಕ್ಲ : ಈ ಮ’ರಣ ಬರುವುದು ಅಪರೂಪ. ಕಲಿಯುಗದಲ್ಲಂತೂ ಲಕ್ಷಕ್ಕೆ ಒಬ್ಬ ಮಾತ್ರ ಎನ್ನಬಹುದು. ಇದು ಹೇಗೆಂದರೆ ಇವರ ಮ’ರಣ ಕಾಲದಲ್ಲಿ ಅವರ ಕ್ರಿಯಾ ಉದ್ದೇಶ ಚಿಂತನೆ, ತಾನು ಏನು ಮಾಡಿದ್ದೇನೆ ಎಂಬುದರ ಮೆಲುಕು ಇವರಲ್ಲಿ ಇಲ್ಲ. ಉದಾ : ಮಾಜಿ ರಾಷ್ಟ್ರಪತಿ ಕಲಾಂ ಮೇಷ್ಟ್ರು, ಯಕ್ಷಗಾನ ವೇಷಧಾರಿಯಾದ ಕೆರೆಮನೆ ಶಂಬು ಹೆಗ್ಗಡೆ, ಯಕ್ಷಗಾನ ಭಾಗವತರಾದ ದಾಮೋದರ ಮಂಡೆಚ್ಚರು, ಮಹಾತ್ಮಾ ಗಾಂಧೀಜಿ, ಹೋರಾಟದಲ್ಲೇ ಮಡಿಯುವ ಯೋಧರು ಇತ್ಯಾದಿ ತನ್ನ ಉದ್ದೇಶಿತ ಕೆಲಸದ ಮಧ್ಯದಲ್ಲೇ ಅಸುನೀಗುವವರು.

ಅವರಿಗೆ ಗತ ಕಾಲದ ಚಿಂತನೆಗಳಿಲ್ಲ. ಆ ಕಾಲದ ವಿಚಾರ ಮಾತ್ರವೇ ಇರುತ್ತದೆ.ಇನ್ನು ಕೆಲ ಜ್ಞಾನಿಗಳೂ ಶುಕ್ಲ ಚಿಂತನೆಯಲ್ಲಿ ಕೊನೆಗೊಳ್ಳುತ್ತಾರೆ. ಇವರು, ನಾನು ಏನೂ ಮಾಡಲಿಲ್ಲವಪ್ಪಾ, ಎಲ್ಲಾ ದೈವ ಪ್ರೇರಣೆಯಂತೆ ನನ್ನ ಮೂಲಕ ನಡೆದಿರಬಹುದು ನಾನು ಕೇವಲ ನಿಮಿತ್ತ ಮಾತ್ರ ಎಂದು ಯೋಚಿಸುವವರು. ಇವರು ತಪ್ಪಿಯೂ ನನಗೆ ಮೋಕ್ಷ ಸಿಗಲಿ ಎಂದು ಬಯಸುವವರಲ್ಲ. ಇಂತವರಿಗೆ ಮೋಕ್ಷ ಯೋಗವಿರುತ್ತದೆ.

ಆತ್ಮಕಾರಕ ಶುಭಗ್ರಹ ಮೀನಾಂಶದಲ್ಲಿ ಬಂದವರಿಗೆ ನಿಶ್ಚಿತವಾಗಿಯೂ ಮೋಕ್ಷ ಯೋಗವಿದೆ. ಇಂತವರಿಗೆ ಮರು ಹುಟ್ಟಿಲ್ಲ. ಆದರೆ ಇವರು ಆರ್ತ, ರೌ’ದ್ರ, ಧನ್ಯ ಮ’ರಣಗಳನ್ನು ದಾಟಿಯೇ ಬರಬೇಕು. ಇದು ಒಂದು ರೀತಿಯ ವಿಕಾಸ. ‘ಅಯೋಗ್ಯ ಪುರುಷಂ ನಾಸ್ತಿ’ ಎಂದು ವೇದಗಳು ಹೇಳಿವೆ. ಆದರೆ ಸಂಯೋಜಕರು ಸರಿ ಇರಬೇಕು. ಅದು ಸರಿ ಇಲ್ಲದಿದ್ದಾಗ ಅಯೋಗ್ಯರಾಗಬಹುದು. ಅದಕ್ಕಾಗಿಯೇ ಪೂರ್ವ ಶೋಡಶ ಸಂಸ್ಕಾರಗಳಿರುವುದು. ಅದರ ಉದ್ದೇಶ ತಿಳಿಯದೆ ಸಂಸ್ಕಾರ ಪಡೆದರೂ ಪ್ರಯೋಜನವಿಲ್ಲ. ಅರ್ಥ ತಿಳಿದರೆ ಅವನಿಗೆ ಹಂತ ಹಂತಗಳಲ್ಲಿ ಜ್ಞಾನವೃದ್ಧಿ ಆಗುತ್ತದೆ. ಜ್ಞಾನಿಗೆ ದುಃಖ ಸುಳಿಯದು. ದುಃಖ ರಹಿತನಿಗೆ ಶುಕ್ಲ ರೂಪದ ಮ’ರಣವೂ ಮೋಕ್ಷವೂ ಲಭ್ಯವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ, ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾಗದಿದ್ದದ್ದು ಇಲ್ಲಿ ಸಾಧ್ಯ. ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ. ಕರೆ ಮಾಡಿ 95350 04448

LEAVE A REPLY

Please enter your comment!
Please enter your name here