ನಾಡಿ ಜ್ಯೋತಿಷ್ಯದಲ್ಲಿ ನಿಖರವಾಗಿ ಭವಿಷ್ಯವನ್ನು ಹೇಳಬಹುದಾಗಿದೆ. ಇದರ ಮಹತ್ವವನ್ನು ಪೂರ್ಣವಾಗಿ ತಿಳಿಯಿರಿ.

0
1816

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ. ನಾಡೀ ಜ್ಯೋತಿಷ ಒಂದು ಪರಿಚಯ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಾಡಿ ಜ್ಯೋತಿಷ್ಯವು ಬಹಳ ಪ್ರಾಚೀನ ಕಾಲದ ಶಾಸ್ತ್ರವಾಗಿದೆ. ನಾಡಿ ಶಾಸ್ತ್ರದಲ್ಲಿ ಭೃಗುನಾಡಿ, ಸಪ್ತರ್ಷಿನಾಡಿ, ಸ್ಕಂದನಾಡಿ, ಗರ್ಗನಾಡಿ, ಮುಂತಾದ ನಾಡಿ ಶಾಸ್ತ್ರಗಳು ಲಭ್ಯವಿದೆ. ನಾಡಿ ಶಾಸ್ತ್ರವೆಂದರೆ ಕೈಯ ನಾಡಿ ಹಿಡಿದು ಅದರ ಮಿಡಿತದಿಂದ ಫಲ ಹೇಳುವುದು. ಈ ಹಿಂದೆ ಪ್ರಾಚೀನ ಆಚಾರ್ಯರು ಇದನ್ನು ಮಾಡುತ್ತಿದ್ದರು.

ಶರೀರದಲ್ಲಿ 3.50 ಲಕ್ಷ ನಾಡಿಗಳಿವೆ. ಇವುಗಳಲ್ಲಿ ಮುಖ್ಯವಾಗಿ ಇಡಾ, ಪಿಂಗಳಾ, ಸುಷುಮ್ನಾ. ಸುಷುಮ್ನಾ ನಾಡಿಯು ಬೇರೆ ಬೇರೆ ಸ್ಥಿತಿಗಳಲ್ಲಿ ಕುಂಡಲಿನಿಯು ಹರಿದು ಹೋಗುವುದಕ್ಕೆ ಚಕ್ರಗಳು ಎಂದು ಕರೆಯುತ್ತೇವೆ. ಒಂದೊಂದು ಚಕ್ರಗಳನ್ನೂ ಒಂದೊಂದು ಗ್ರಹಗಳು ಆಳುತ್ತವೆ. ಮೂಲಾಧಾರವನ್ನು ಸೂರ್ಯನೂ, ಸ್ವಾಧಿಷ್ಠಾನವನ್ನು ಚಂದ್ರನೂ, ಮಣಿಪೂರವನ್ನು ಕುಜನೂ, ಅನಾಹತವನ್ನು ಬುಧನೂ, ವಿಶುದ್ಧವನ್ನು ಗುರುವೂ, ಆಜ್ಞಾಚಕ್ರವನ್ನು ಶುಕ್ರನೂ, ಸಹಸ್ರಾರವನ್ನು ಶನಿಯೂ, ನಾಡಿಸಂಧಿಗಳಲ್ಲಿ ರಾಹು ಕೇತುಗಳು ಆಳುತ್ತವೆಂದು ಗ್ರಂಥಗಳು ತಿಳಿಸುತ್ತವೆ.

ಈ ಶಾಸ್ತ್ರದಿಂದ ವ್ಯಕ್ತಿಯ ಹಿಂದಿನ ಜನ್ಮ, ಮುಂದಿನ ಜನ್ಮ, ಆಯುಷ್ಯ, ಮಕ್ಕಳ ಭವಿಷ್ಯ, ಹುಟ್ಟಿದ ದಿನಾಂಕಗಳನ್ನು ಕರಾರುವಾಕ್ಕಾಗಿ ಹೇಳಿ ಆತನು ಹುಟ್ಟಿದ ಕಾಲದ ಗ್ರಹಸ್ಥಿತಿಯನ್ನು ಕುಂಡಲಿಯನ್ನು ಪ್ರಾಚೀನ ಶಾಸ್ತ್ರಜ್ಞರು ತೆಗೆದುಕೊಡುತ್ತಿದ್ದರು. ನಾಡಿ ಶಾಸ್ತ್ರದಲ್ಲಿ ಕೇವಲ ರಾಶಿಕುಂಡಲಿಯಿಂದಲೇ ವ್ಯಕ್ತಿಯ ಜಾತಕ, ಅವನ ತಂದೆ, ತಾತರ ಬಗ್ಗೆ ಎಲ್ಲವನ್ನೂ ತಿಳಿಸಲಾಗುತ್ತದೆ. ರಾಶಿಗಳಿಗೆ ದಿಕ್ಕುಗಳನ್ನು ಕೊಡಲಾಗಿದೆ. ಮೇಷ, ಸಿಂಹ, ಧನುಸ್ಸು ಪೂರ್ವ ದಿಕ್ಕು, ವೃಷಭ, ಕನ್ಯಾ, ಮಕರ ದಕ್ಷಿಣ ದಿಕ್ಕು, ಮಿಥುನ, ತುಲ, ಕುಂಭ ಪಶ್ಚಿಮ ದಿಕ್ಕು, ಕಟಕ, ವೃಶ್ಚಿಕ, ಮೀನ ಉತ್ತರ ದಿಕ್ಕು ಎಂದು ವಿಂಗಡಿಸಲಾಗಿದೆ.

ಜಾತಕದಲ್ಲಿನ ಗ್ರಹಗಳನ್ನು ನಾಲ್ಕು ದಿಕ್ಕುಗಳಿಗೆ ವಿಂಗಡಿಸಿ ಫಲ ನಿರ್ಣಯಿಸಲಾಗುತ್ತದೆ. ನಾಡಿ ಜ್ಯೋತಿಷ್ಯಕ್ಕೆ ದಶಾಭುಕ್ತಿಯ ಅಗತ್ಯ ಇಲ್ಲ. ನವಾಂಶ, ಅಷ್ಟಕವರ್ಗಗಳ ಅವಶ್ಯಕತೆ ಇಲ್ಲ. ಕೇವಲ 9 ಗ್ರಹಗಳಿಂದ ಫಲಭಾಗ ಹಾಗೂ ವ್ಯಕ್ತಿಯ ಜಾತಕವನ್ನು ಪರಿಶೀಲಿಸುವ ದಿನದ ಗ್ರಹಗಳ ಪರಿಭ್ರಮಣದ ಕುಂಡಲಿ ತಿಳಿಯುವುದು ಅತಿ ಮುಖ್ಯವಾಗಿದೆ. ನಾಡಿಶಾಸ್ತ್ರದಲ್ಲಿ ಗ್ರಹಗಳ ಯುತಿಗೆ ಶೇ.100, ಗ್ರಹಗಳ ದೃಷ್ಟಿಗೆ ಶೇ.75 ಫಲವನ್ನು ತಿಳಿಸಿರುತ್ತಾರೆ.

ನಾಡೀಗೋಚಾರದಲ್ಲಿ ಜಾತಕದಲ್ಲಿ ಗ್ರಹಗಳ ಮೇಲೆ ಗೋಚಾರಗ್ರಹ ಬಂದಾಗ ಫಲ ನಿರ್ಧರಿಸುವುದು ಮುಖ್ಯವಾದ ಸಂಗತಿ. ಉದಾಹರಣೆಗೆ ವ್ಯಕ್ತಿಯ ಜಾತಕದಲ್ಲಿ ಗುರುವಿನ ರಾಶಿಗೆ ಗೋಚಾರ ಗುರುವು ಬಂದಾಗ ಶೇ.100 ಫಲ. ಸಪ್ತಮಕ್ಕೆ ಬಂದಾಗ ಶೇ. 50 ಫಲ, ಕೋನದಲ್ಲಿ ಬಂದಾಗ ಶೇ.75 ಫಲ, ಉಪಚಯ ಲೆಕ್ಕಕ್ಕಿಲ್ಲ. ಆದರೆ 3 ಹಾಗೂ 11 ರಲ್ಲಿ ಶೇ.30 ಫಲ ಸಿಗುತ್ತದೆ. ಹೀಗೆ ನಾಡಿ ಗೋಚಾರವನ್ನು ತಿಳಿಯಲಾಗುತ್ತದೆ.

ಈ ರೀತಿಯಾಗಿ ಗ್ರಹಗಳ ಕಾರಕತ್ವ, ಗ್ರಹಗಳ ಸಂಯೋಗ, ದಿಕ್ಕು, ದೃಷ್ಟಿಯಿಂದ ನಾಡಿ ಜ್ಯೋತಿಷ್ಯದಲ್ಲಿ ನಿಖರವಾಗಿ ಭವಿಷ್ಯವನ್ನು ಹೇಳಬಹುದಾಗಿದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here