ಇದೊಂದು ಸಣ್ಣ ವ್ರತ ನಿಮ್ಮ ಮನೆಯಲ್ಲೇ ಮಾಡಿದರೆ ಸಾಕು ನಿಮ್ಮ ಸಕಲ ಆಸೆಗಳು ನೆರವೇರುತ್ತದೆ..!! ಗಂಡಸರು ಮಾಡಬಹುದು.

0
2550

ಈ ವ್ರತವು ನಿಮಗೆ ತುಂಬಾ ಬೇಗ ಫಲವನ್ನು ಕೊಡುತ್ತದೆ ಯಾವುದೇ ಸಮಯ ವ್ಯಕ್ತಿ ಸ್ಥಳದ ತಾರತಮ್ಯ ವಿರುವುದಿಲ್ಲ, ಸೋಮವಾರದಂದು ನಿಮಗೆ ಯಾವಾಗ ಮಾಡಬೇಕು ಅನ್ನಿಸುತ್ತದೋ ಅವಾಗ ಮಾಡಬಹುದು ಭಕ್ತಿ ಮತ್ತು ನಂಬಿಕೆ ಅತಿಮುಖ್ಯ ಕಾರಣ ಈಶ್ವರ ಭಕ್ತಿ ಪ್ರಿಯ, ಭಾಟಿಕಿ ಇದ್ದರೆ ಬೇಗ ಒಲಿಯುತ್ತಾನೆ. ಆದರೂ ಪೂಜೆಗೆ ಅತೀ ಸೂಕ್ತ ಕಾಲವೆಂದರೆ ಚಾತುರ್ಮಾಸ ಹದಿನಾರು ಸೋಮವಾರ ಈ ವ್ರತ ಮಾಡಬೇಕು.

ಪುರುಷರು ಅಥವ ಸ್ತೀಯರು ಯಾರು ಬೇಕಾದರೂ ಈ ವ್ರತವನ್ನು ಪಾಲಿಸಬಹುದು ಆದರೆ ಎಲ್ಲರೂ ನಿಯಮಗಳನ್ನು ಪಾಲಿಸಬೇಕು.

ಪ್ರತೀ ಸೋಮವಾರ ಬೆಳೆಗ್ಗೆ ಸ್ನಾನ ಮಾಡಿ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು, ಅಂದು ಸಾಯಂಕಾಲದವರೆಗೆ ಉಪವಾಸ ವಿರಬೇಕು. (ಅಶಕ್ತರಿಗೆ, ರೋಗಿಗಳು ಹಣ್ಣು, ಹಾಲು ತಿನ್ನಬಹುದು, ಅಡ್ಡಿ ಇಲ್ಲ) ಸೂರ್ಯಾಸ್ತದ ಸಮಯಕ್ಕೆ ಸ್ನಾನ ಮಾಡಿ ಹುತ್ತದ ಮಣ್ಣಿನಿಂದ ಶಿವಲಿಂಗವನ್ನು ರಚಿಸಬೇಕು ಎಷ್ಟು ತರಹದ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳು ದೊರೆಯುವುದೋ ಅಷ್ಟು ಸಂಗ್ರಹಿಸಿರಿ ನಿಮ್ಮ ಶಕ್ತ್ಯಾನುಸಾರ. ನಂತರ ಪಂಚಾಮೃತ ಅಭಿಷೇಕದೊಂದಿಗೆ “ಷೋಡಶೋಪಚಾರ” ದಿಂದ ಆ ಲಿಂಗವನ್ನು ಪೂಜೆ ಮಾಡಬೇಕು. ಬ್ರಹ್ಮಾರ್ಪಣ ಮಾಡಿ ವಿಸರ್ಜಿಸಬೇಕು.

ಪ್ರಾಯಶ್ಚಿತ್ತ ಸಂಕಲ್ಪ ಮತ್ತು ಮನೋಸಂಕಲ್ಪ ಎರಡೂ ಮಾಡಬೇಕು. ಬಿಲ್ವಪತ್ರೆ ತುಳಸೀ ಗರಿಕೆ ಅವಶ್ಯವಾಗಿ ಪೂಜೆಯಲ್ಲಿ ಬಳಸಬೇಕು. ಪೂರ್ಣಫಲ ನೈವೇದ್ಯ ಮಾಡಬೇಕು. ಪೂಜೆಯ ಸಾಂಗತಾ ಸಿದ್ಯರ್ಥವಾಗಿ ಬ್ರಾಹ್ಮಣರಿಗೆ “ವಾಯನದಾನ” ಮಾಡಬೇಕು.

ನೈವೇದ್ಯ : ಅರ್ಧ ಸೇರು ಗೋಧಿಯ ಹಿಟ್ಟನ್ನು ಹುರಿದು ಸಾಕಷ್ಟು ಸಕ್ಕರೆ, ತುಪ್ಪ, ಏಲಕ್ಕಿ, ಜಾಕಾಯಿ ಎಲ್ಲಾ ಹಾಕಿ ಗುಳುಪ್ಪಡಿಯನ್ನು ಮಾಡಬೇಕು. ಈ ಗುಳುಪ್ಪಡಿಯನ್ನು ಮೂರು ಭಾಗ ಮಾಡಿ ಮೂರು ಉಂಡೆಗಳನ್ನು ಮಾಡಬೇಕು, ಎಲ್ಲವನ್ನೂ ಶಿವಲಿಂಗಕ್ಕೆ ನೈವೇದ್ಯ ಮಾಡಬೇಕು.

ಪೂಜಾನಂತರ ಒಂದನ್ನು ಹಸುವಿಗೆ ಒಂದನ್ನು ಪ್ರಸಾದ ರೂಪವಾಗಿ ಎಲ್ಲರಿಗೂ ಕೊಡಬೇಕು. ಮತ್ತೊಂದನ್ನು ಪೂಜಾ ಕರ್ತೃವು ಸೇವಿಸಬೇಕು. ಪೂಜಿಸಿದ ಶಿವಲಿಂಗವನ್ನು ನದಿಯಲ್ಲಿ, ಜಲಾಶಯದಲ್ಲಿ ವಿಸರ್ಜಿಸಬೇಕು. ಅಸಾಧ್ಯವಾದವರು ಪುಷ್ಕರಿಣಿಯಲ್ಲಿ ವಿಸರ್ಜಿಸಬಹುದು, ದೇವರ ಪ್ರಾರ್ಥನೆ ಮಾಡಿ. ಕೊನೆಯ ಸೋಮವಾರ ಎಂದಿನಂತೆ ಪೂಜೆ ನೈವೇದ್ಯ ಮಾಡಿ, ಅನ್ನದಾನ ಮಾಡಬೇಕು. ಎಷ್ಡು ಜನಕ್ಕೆ ಸಾಧ್ಯವೋ ಅಷ್ಟು ಜನಕ್ಕೆ ಮಾಡಬೇಕು. ಅಂದು ದೇವರಿಗೆ ಅಡುಗೆಯಲ್ಲಿ ವಿಶೇಷವಾಗಿ ತಯಾರಿಸಬಹುದು, ಕರ್ತೃವು ತಯಾರಿಸಿದರೆ ತುಂಬಾ ತುಂಬಾ ಒಳ್ಳೆಯದು, ಬ್ರಾಹ್ಮಣರಿಗೆ ತಾಂಬೂಲ ದಾನ ಮಾಡಬೇಕು.

ಈ ವ್ರತ ನಿಮ್ಮ ಸಕಲ ಕಷ್ಟ ನಿವಾರಿಸಿ, ಇಷ್ಟಾರ್ಥಸಿದ್ಧಿಯನ್ನು ಕೊಡುತ್ತದೆ ಮತ್ತು ಸುಲಭವಾದ, ವಿದ್ಯಾರ್ಥಿಗಳು, ಧನಾರ್ಥಿಗಳು, ಸಂತಾನಪೇಕ್ಷೆಯುಳ್ಳವರು, ರೋಗ ನಿವಾರಣೆ ಬಯಸುವರು, ಎಲ್ಲರೂ ಈ ವ್ರತವನ್ನು ಮಾಡಬಹುದು.

LEAVE A REPLY

Please enter your comment!
Please enter your name here