ಆಪಲ್ ಗಿಂತ ನೂರು ಪಾಲು ಉತ್ತಮ ಬೋರೆ ಹಣ್ಣು ಯಾಕೆ ಗೊತ್ತಾ..?

0
2357

ಅದ್ಭುತವಾದ ಇತಿಹಾಸವನ್ನು ಹೊಂದಿರುವ ಹಣ್ಣು ಬೋರೆಹಣ್ಣು ಎಂದರೆ ತಪ್ಪಾಗಲಾರದು, ಕಾರಣ ಹಿಂದೂಗಳ ಪವಿತ್ರ ಗ್ರಂಥ ರಾಮಾಯಣದಲ್ಲಿ ಈ ಹಣ್ಣಿನ ಉಲ್ಲೇಖವಾಗಿದೆ, ಶಬರಿ ರಾಮನಿಗಾಗಿ ಕಾದು ರಾಮ ಬಂದೊಡನೆ ತಿನ್ನಲು ಎಂಜಿಲು ಮಾಡಿ ಕೊಟ್ಟ ಹಣ್ಣುಗಳು ಬೋರೆಹಣ್ಣು, ಈ ಹಣ್ಣುಗಳನ್ನು ಕರ್ನಾಟಕದ ಎಲ್ಲಾ ಭಾಗದಲ್ಲೂ ಬೆಳೆಯಲಾಗುವುದು, ಈ ಹಣ್ಣುಗಳಲ್ಲಿ ಪೋಷಕಾಂಶಗಳು ಹೇರಳವಾಗಿವೆ, ಈ ಗಿಡದ ಹಣ್ಣು ಮಾತ್ರವಲ್ಲದೆ ಬೇರು, ಎಲೆ, ಕಾಂಡದ ತೊಗಟೆ, ಬೀಜಗಳ ತಿರುಳು ಇವೆಲ್ಲವೂ ಔಷಧಿ ಗುಣಗಳನ್ನು ಹೊಂದಿವೆ.

ನಾನು ಬಂದಿದ್ದೆ ಇರುವ ವ್ಯಕ್ತಿಗಳು ಈ ಹಣ್ಣನ್ನು ದೈನಂದಿನ ಆಹಾರದಲ್ಲಿ ಬಳಸಿ ಇದರಿಂದ ನಿಮ್ಮ ಸಮಸ್ಯೆ ಬಹುಬೇಗನೆ ದೂರವಾಗುವುದು, ತಡೆಯಿಲ್ಲದ ವಾಂತಿ ಆಗುತ್ತಿದ್ದರೆ ಚಿಂತೆ ಬೇಡ ಬೋರೆ ಹಣ್ಣಿನ ರಸಕ್ಕೆ ಸ್ವಲ್ಪ ಕಲ್ಲುಸಕ್ಕರೆ ಮತ್ತು ಕಾಳುಮೆಣಸಿನಪುಡಿ ಬೆರೆಸಿ ಕುಡಿದರೆ ವಾಂತಿ ತಕ್ಷಣವೇ ಕಡಿಮೆಯಾಗುತ್ತದೆ.

ಕೆಲವರಿಗೆ ಏನೇ ಮಾಡಿದರೂ ಮುಖದಲ್ಲಿ ಮೊಡವೆಗಳು ಕಡಿಮೆಯಾಗುವುದಿಲ್ಲ, ಇದಕ್ಕಾಗಿ ಅವರು ನಾನಾ ಫೇಸ್ ಕ್ರೀಮ್ಗಳಿಗೆ ಬಹಳಷ್ಟು ದುಡ್ಡನ್ನು ಸುರಿಯುತ್ತಾರೆ, ಅದರ ಬದಲು ಬೋರೆ ಹಣ್ಣಿನ ಬೀಜದ ತಿರುಳನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಆಯಿತು, ಎಷ್ಟು ಸುಲಭವಾಗಿದೆ ನೋಡಿ ತಪ್ಪದೇ ಇದನ್ನು ಒಮ್ಮೆ ಪ್ರಯತ್ನಪಟ್ಟು ನೋಡಿ.

ಇನ್ನು ಈ ಹಣ್ಣಿನ ಸೇವನೆಯಿಂದ ದೇಹದ ರಕ್ತ ಶುದ್ಧವಾಗುತ್ತದೆ, ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಊತವಾಗಿದ್ದರೆ ಬೋರೆ ಗಿಡದ ಎಲೆಗಳನ್ನು ಜಜ್ಜಿ ಆ ಚಟ್ನಿಯನ್ನು ಉತವಾಗಿರುವ ಜಾಗಕ್ಕೆ ಲೇಪನ ಮಾಡಿ, ಊತ ಬಹುಬೇಗ ಮಾಯವಾಗುತ್ತದೆ, ಅಷ್ಟೇ ಅಲ್ಲದೆ ತಲೆ ಕೂದಲು ಉದುರುವ ಸಮಸ್ಯೆ ಇದ್ದವರು ಇದೇ ಎಲೆಯ ರಸವನ್ನು ಹಚ್ಚಿಕೊಂಡರೆ ತಲೆ ಕೂದಲು ಉದುರುವುದಿಲ್ಲ.

ಮೊದಲೆಲ್ಲಾ ಆಯುರ್ವೇದದಲ್ಲಿ ಜ್ವರ ಬಂದ ತಕ್ಷಣ ಇದೇ ಗಿಡದ ಬೇರಿನ ಪುಡಿಯನ್ನು ಜೇನುತುಪ್ಪದಲ್ಲಿ ಅಥವಾ ಹಾಲಿನಲ್ಲಿ ಬೆರೆಸಿ ಕುಡಿಸುತ್ತಿದ್ದರು ಇದರಿಂದ ಜ್ವರ ಕಡಿಮೆಯಾಗುತ್ತಿತ್ತು, ಅತಿಯಾದ ಬೇದಿ ಆದರೆ ಇದೇ ಗಿಡದ ತೊಗಟೆಯ ಪುಡಿ ಕಷಾಯಮಾಡಿ ಸೇವನೆ ಮಾಡಲು ಬಿಡುತ್ತಿದ್ದರು, ಮಲಬದ್ಧತೆ ಸಮಸ್ಯೆ ಇದ್ದರೆ ಈ ಹಣ್ಣುಗಳನ್ನು ತಿಂದರೆ ಸಾಕು ಸರಾಗವಾಗಿ ಮಲ ವಿಸರ್ಜನೆಯಾಗುತ್ತದೆ, ಚರ್ಮರೋಗಕ್ಕೆ ಈ ಗಿಡದ ತೊಗಟೆಯ ಕಷಾಯ ಉತ್ತಮ, ಈ ಹಣ್ಣುಗಳು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here