ಹನುಮಾನ್ ಚಾಲೀಸಾ ಪಠಣ ಪ್ರಯೋಜನಗಳನ್ನು ತಿಳಿದರೆ ಅಚ್ಚರಿ ಪಡುತ್ತೀರಿ..!!

0
2813

ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ, ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು, ಮಂಗಳವಾರವನ್ನು ಹನುಮಂತನನ್ನು ನೆನೆಯಲು ವಿಶೇಷ ದಿನವಾಗಿ ಪರಿಗಣಿಸಲಾಗಿದೆ, ಈ ದಿನದಂದು ಭಕ್ತಿಯಿಂದ ಹನುಮಂತನನ್ನು ನೆನೆದರೆ ಮತ್ತು ಅವರನ್ನು ಪೂಜಿಸಿದರೆ ಹನುಮಂತನ ಕೃಪೆಗೆ ನಾವು ಪಾತ್ರರಾಗುತ್ತೇವೆ ಎಂದು ವೇದಗಳು ತಿಳಿಸುತ್ತವೆ.

ಅಂತೆಯೇ ಈ ದಿನಂದು ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಕೂಡ ಹನುಮಂತನು ನಮ್ಮನ್ನು ಸರ್ವ ವಿಘ್ನಗಳಿಂದ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ, ಹನುಮಾನ್ ಚಾಲೀಸಾವು ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಕಾರಣವಾಗಿದೆ, ಅಂತೆಯೇ ಉತ್ತಮ ಆರೋಗ್ಯ ಮತ್ತು ಮನಃಶಾಂತಿಯನ್ನು ತರುತ್ತದೆ, ಹನುಮಾನ್ ಚಾಲೀಸಾದ ಕುರಿತು ಇನ್ನಷ್ಟು ರೋಚಕ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ನಿರಾ೦ತಕದ, ಸುಖಕರ ಪ್ರಯಾಣಕ್ಕಾಗಿ, ಕಾರುಗಳಲ್ಲಿ, ಹಿನ್ನೋಟವನ್ನು ಒದಗಿಸುವ ಕನ್ನಡಿಯಲ್ಲಿ ತೂಗುಹಾಕಿರುವ ಹನುಮ೦ತನ ಪುಟ್ಟ ಕಲಾಕೃತಿಯ ಬಿ೦ಬವನ್ನೋ ಅಥವಾ ಕಾರ್ ನ ಡ್ಯಾಶ್ ಬೋರ್ಡ್ ನ ಮೇಲೆ ಹನುಮ೦ತನ ಪುಟ್ಟ ಮೂರುತಿಯನ್ನು ಇರಿಸಿರುವುದನ್ನು ನೀವು ನೋಡಿರಲೇಬೇಕಲ್ಲವೇ? ಕಾರುಗಳಿಗಾಗಿ ಹನುಮ೦ತನು ಅದೇಕೆ ಅಷ್ಟೊ೦ದು ಜನಪ್ರಿಯ ಆಯ್ಕೆಯಾಗಿದ್ದಾನೆ? ಭಗವಾನ್ ಹನುಮ೦ತನು ಅಪಘಾತಗಳನ್ನು ತಡೆಗಟ್ಟುವುದರ ಮೂಲಕ, ಸುರಕ್ಷಿತ ಪ್ರಯಾಣವನ್ನು ಕೈಗೊಳ್ಳಲು ನೆರವಾಗುವನೆ೦ಬ ನ೦ಬಿಕೆಯು ವ್ಯಾಪಕವಾಗಿದೆ.

ದುಷ್ಟ ಶಕ್ತಿಗಳ ದಿಗ್ಬಂಧನ : ಹನುಮಾನ್ ಚಾಲೀಸವು ಹೆಚ್ಚು ಶಕ್ತಿಶಾಲಿ ಮಂತ್ರವಾಗಿದ್ದು, ದೆವ್ವ, ಪಿಶಾಚಿ ಅಂತೆಯೇ ದುಷ್ಟಶಕ್ತಿಗಳ ದಿಗ್ಬಂಧನ ಮಾಡುತ್ತದೆ, ಹನುಮಂತ ದೇವರು ಈ ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತಾರೆ, ಅಂತೆಯೇ ಮನದಲ್ಲಿರುವ ಭಯ ತರುವ ವಿಚಾರಗಳನ್ನು ಈ ಮಂತ್ರವು ತೊಡೆದು ಹಾಕುತ್ತದೆ, ಆದ್ದರಿಂದಲೇ ಮಕ್ಕಳಿಗೆ ಈ ಮಂತ್ರವನ್ನು ಪಠಿಸಲು ಹಿರಿಯರು ಹೇಳುತ್ತಾರೆ.

ಶನಿ ದೋಷ ನಿವಾರಣೆ : ಶನಿ ದೇವರನ್ನು ಸಂಪ್ರೀತಿಗೊಳಿಸುವ ಒಂದು ವಿಧಾನವೆಂದರೆ ಹನುಮಂತನನ್ನು ನೆನೆಯುವುದಾಗಿದೆ, ಸಾಡೇ ಸಾಥಿಯಂತಹ ಶನಿ ದೋಷ ನಿವಾರಣೆಗೆ ಕೂಡ ಈ ಮಂತ್ರ ಕಾರಣವಾಗಿದೆ, ಒಂದು ದಂತಕಥೆಯ ಪ್ರಕಾರ ಹನುಮಂತನು ಶನಿ ದೇವರನ್ನು ರಕ್ಷಿಸಿದ್ದರಿಂದಾಗಿ, ಶನಿ ದೇವರು ಹನುಮನ ಭಕ್ತರ ಮೇಲೆ ತಾನು ಹಾನಿ ಮಾಡುವುದಿಲ್ಲ ಎಂದು ಮಾತುಕೊಟ್ಟಿರುತ್ತಾರೆ.

ಪಾಪಗಳ ನಿವಾರಣೆ : ನಮಗೆ ತಿಳಿದೋ ತಿಳಿಯದೆಯೋ ನಾವು ತಪ್ಪುಗಳನ್ನು ಮಾಡುತ್ತೇವೆ, ಹನುಮಾನ್ ಚಾಲೀಸವನ್ನು ಪಠಿಸುವುದರ ಮೂಲಕ ನಾವು ತಪ್ಪಿಗೆ ಕ್ಷಮೆಯಾಚಿಸಬಹುದು, ರಾತ್ರಿ ಹೊತ್ತು 8 ಬಾರಿ ಈ ಮಂತ್ರವನ್ನು ಪಠಿಸುವುದರಿಂದ ನೀವು ಮಾಡಿರುವ ಪಾಪ ಕೃತ್ಯಗಳು ನಿವಾರಣೆಯಾಗುತ್ತವೆ.

ಒತ್ತಡದಿ೦ದ ಮುಕ್ತಿ ಹೊ೦ದಲು : ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಚಾಲೀಸಾವನ್ನೇ ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ, ಪ್ರಾತ: ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಚಾಲೀಸಾದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ, ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ : ಜೀವನದಲ್ಲಿ ಮಹತ್ತರವಾದ ಗುರಿಯನ್ನು ಸಾಧಿಸುವ ಇಚ್ಛೆಯುಳ್ಳವರು ತಮ್ಮ ಗುರಿ ಸಾಧನೆಯ ಅವಧಿಯಲ್ಲಿ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಅಥವಾ ಮೂಲಾ ನಕ್ಷತ್ರದ ರಾತ್ರಿ ಒಟ್ಟು 1008 ಬಾರಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಹನುಮದೇವರ ಅನುಗ್ರಹ ಪಡೆಯಬಹುದು.

ವ್ಯಕ್ತಿಯನ್ನು ಪುನರ್ರೂಪಿಸುವುದಕ್ಕಾಗಿ : ದುಷ್ಟಜನರ ಸಹವಾಸಕ್ಕೆ ಬಲಿಬಿದ್ದ ಅಥವಾ ದುರ್ವ್ಯಸನಗಳಿಗೆ ದಾಸರಾಗಿರುವ ವ್ಯಕ್ತಿಗಳನ್ನು ಪುನರ್ರೂಪಿಸುವ ನಿಟ್ಟಿನಲ್ಲಿ ಹನುಮಾನ್ ಚಾಲೀಸಾದ ಪಠಣವು ನೆರವಾಗುತ್ತದೆ, ಚಾಲೀಸಾದ ಪಠಣದಿ೦ದ ಆವಿರ್ಭವಿಸುವ ಚೈತನ್ಯವು ಭಕ್ತನ (ಳ) ಹೃದಯವನ್ನು ಧನಾತ್ಮಕತೆ ಹಾಗೂ ಚೈತನ್ಯದಿ೦ದ ತು೦ಬುವ೦ತೆ ಮಾಡುತ್ತದೆ.

LEAVE A REPLY

Please enter your comment!
Please enter your name here