ದೇವರ ಅರ್ಚನೆ ಮಾಡುವ ಅರ್ಚಕನ ಮನಸ್ಸು ಯಾವ ರೀತಿ ಇರಬೇಕು?
ಭಾವನಾತ್ಮಕತೆ : ಭಗವಂತನ ಅರ್ಚನೆ ಮಾಡುವ ಅರ್ಚಕ ಭಕ್ತರ ಪಾಲಿಗೆ ಅವನೇ ದೇವರು ಎಂದರೆ ತಪ್ಪಾಗಲಾರದು, ಪ್ರಾಚೀನ ಕಾಲದಿಂದಲೂ ಅರ್ಚಕ ಎಂದರೆ ಧರ್ಮದ ಹಾದಿಯಲ್ಲಿ ಕರೆಯುತ್ತಾನೆ, ಅವನು ದೇವರ ಪ್ರತಿನಿಧಿ ಎನ್ನುವ ನಂಬಿಕೆ ಭಕ್ತರ ಮನಸ್ಸಿನಲ್ಲಿ ಸುಳಿದಾಡುತ್ತಿತ್ತು, ದೇವರ ಪೂಜೆ ಮಾಡುವ ಅರ್ಚಕರು ಭಗವಂತನಿಗೆ ಸಮ, ಅವನೇ ವಿಷ್ಣು ನಾರಾಯಣ ಹರಿ ಎಂಬ ಸಂಸ್ಕೃತ ಶ್ಲೋಕ ಒಂದಿದೆ, ಅಂತ ದಿವ್ಯ ಶಕ್ತಿ ಅರ್ಚಕರಲ್ಲಿ ಇರುತ್ತದೆ, ಹೀಗೆ ಭಗವಂತನ ಸನ್ನಿಧಿಯಲ್ಲಿ ಇರುವವನು ಅರ್ಚಕ ಅವನೇ ಭಗವಂತನ ಪ್ರತಿರೂಪ.
ವಾಸ್ತವಿಕತೆ : ದೇವರು ಎನ್ನುವ ನಮ್ಮ ಭಾವ, ಭಕುತಿಯ ಮೇಲೆ ನಿಂತಿದೆ, ದೇವರು ಎನ್ನುವುದು ನಮ್ಮನ್ನು ಮೀರಿದ ಶಕ್ತಿ, ನಮಗೆ ಅರಿವಾಗದಿರದು ಹಲವಾರು ತಲೆಗಳು ನಡೆದ ಸಮಯಲ್ಲಿ ನಮಗೆ ಮೀರಿದ ಶಕ್ತಿ ಇದೆ ಎಂದು ನಾವು ನಂಬಿಕೆ ಬೇಕಾಗುತ್ತದೆ, ದೇವರಿಗೆ ಪರ್ಯಾಯ ಬೇರೆ ಇಲ್ಲವೇ ಇಲ್ಲ.
ಆಸ್ತಿಕ ಹಾಗೂ ನಾಸ್ತಿಕನಿಗೆ ದೇವರು ಎನ್ನುವ ಆಯಾ ವ್ಯಕ್ತಿಗಳ ನಂಬಿಕೆಯ ಮೇಲೆ ಆಧಾರ ಪಟ್ಟಿದೆ ಎಂದರೆ ತಪ್ಪಾಗುವುದಿಲ್ಲ, ನಾಸ್ತಿಕರು ತನ್ನ ನಂಬಿಕೆಗಳನ್ನು ಗೌರವಿಸಿ ಮಾಡುವ ಕೆಲಸದಲ್ಲಿ ದೇವರನ್ನು ಕಾಣುತ್ತಾನೆ ಎನ್ನಬಹುದು, ಆಸ್ತಿಕನು ಮೂರ್ತಿ ಪೂಜೆ, ದೇವಸ್ಥಾನಗಳಿಗೆ ಭೇಟಿ, ಹವನ ಹೋಮಗಳನ್ನು ಮಾಡುವುದರಿಂದ ನಿಮ್ಮದೇ ಕಾಣುತ್ತಾನೆ, ಹೀಗೆ ಜೀವನದಲ್ಲಿ ಸಕಾರಾತ್ಮಕವಾಗಿ ಇರುವುದು ಅರ್ಚಕ, ಭಕ್ತರ ಕೆಲಸ ಹಾಗಿರಲಿ, ಹೀಗೆ ಅರ್ಚಕನು ನಡೆದುಕೊಳ್ಳುವುದರಿಂದ ದೇವರು ಸಹ ಸಂಪ್ರೀತನಾಗುತ್ತಾನೆ.
ವೈಚಾರಿಕತೆ : ನಾವು ಮಾಡುವ ಕೆಲಸಗಳು ಸಮಾಜಮುಖಿಯಾಗಿ ಇರಬೇಕು, ಇಲ್ಲದಿದ್ದರೆ ಬದುಕಿನಲ್ಲಿ ಏಳಿಗೆ, ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ, ಅರ್ಚಕರು ಮಾತ್ರ ಭಗವಂತನ ಪ್ರತಿನಿಧಿ ಎಂದು ಭಾವಿಸಬೇಕಿಲ್ಲ, ಮನಸ್ಸು ನಿಷ್ಕಲ್ಮಶವಾಗಿ ಇದ್ದರೆ ಸಾಕು, ಅವನು ಭಗವಂತನ ಪ್ರತಿರೂಪ, ನಾವು ಸಮಾಜದಲ್ಲಿ ವಾಸ ಮಾಡುತ್ತಿರುವುದರಿಂದ ಸಮಾಜಮುಖಿಯಾಗಿರಬೇಕು, ಅವನೇ ನಿಜವಾದ ಅರ್ಚಕ, ಒಂದು ಮಾತು ಜ್ಞಾಪಕದಲ್ಲಿ, ಸತ್ಯ, ನೀತಿ ಪ್ರಾಮಾಣಿಕತೆ ನಮ್ಮನ್ನು ಭಗವಂತನ ಸನಿಹಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ.
ದೇವರನ್ನು ಪೂಜಿಸುತ್ತಾ ಬೇರೆ ವ್ಯಕ್ತಿಗಳಿಗೆ ಮೋಸ ಮಾಡಿದರೆ ಏನಾಗಬಹುದು? ಈತನ ನಿಜವಾದ ಭಕ್ತನೇ.
ದೇವರು ಎನ್ನುವುದು ಕೇವಲ ಪೂಜೆ ಮಾಡಿದರೆ ಕೇಳಿದ ವರಗಳನ್ನು ನೀಡಲು ಅಲ್ಲವೇ ಅಲ್ಲ, ದೇವರು ಎನ್ನುವುದು ನಂಬಿಕೆ, ದೇವರು ಎನ್ನುವ ಸಂಗತಿ ನಮ್ಮ ಬದುಕಿಗೆ ಆಸರೆ, ದೇವರು ನಮ್ಮ ಜೀವನದ ಗುರಿ, ನಿಶ್ಚಿಂತೆ ತಂದುಕೊಡುವ ಭಾವ, ಅಂತಹ ದೇವರನ್ನು ಪೂಜಿಸುವ ನಾವು ಪರರಿಗೆ ಕೇಡು ಬಗೆಯುವ ಬಗ್ಗೆ ಯೋಚನೆ ಸಹ ಮಾಡಬಾರದು.
ದೇವರ ಬಗ್ಗೆ ಕೇವಲ ಸಲಿಗೆ ಇದ್ದರೆ ಸಾಕಾಗುವುದಿಲ್ಲ, ದೇವರು ನಮ್ಮ ಒಳ್ಳೆತನ ಮೆಚ್ಚಿ ವರ ನೀಡುವಂತೆ, ಕೆಟ್ಟದ್ದು ಮಾಡಲು ಹೊರಟರೆ ಬುದ್ಧಿ ಹೇಳುವುದು ಖಚಿತ, ಹೀಗಾಗಿ ನಾವು ಬದುಕಿನಲ್ಲಿ ದೇವರ ಬಗ್ಗೆ ನಂಬಿಕೆ ಇಟ್ಟು ಕೊಂಡು ಬೇರೆ ಅವರ ಬಗ್ಗೆ ನಾವು ಕರುಣೆ, ದಯೆ ಹಾಗೂ ಸ್ನೇಹ ಉಳ್ಳವರಾಗಿರಬೇಕು, ಅಕಸ್ಮಾತ್ ಅಂತಹ ಭಾವನೆಗಳು ನಮ್ಮ ಮನಸ್ಸಿನಲ್ಲಿ ಮೂಡಿದರೆ ಪರವಾಗಿಲ್ಲ, ಕೇಡು ಬಯಸುವ ಮನಸ್ಸು ಮಾತ್ರ ಇಟ್ಟುಕೊಳ್ಳಬಾರದು.
ಈಗಾಗಲೇ ಹೇಳಿರುವಂತೆ ದೇವರು ಎಂದರೆ ನಂಬಿಕೆ, ನಮ್ಮನ್ನು ನಂಬಿ ಬಂದಿರುವ ವ್ಯಕ್ತಿಗಳಿಗೆ ಮೋಸ ಮಾಡಿ ಘಾಸಿ ಮಾಡಬಾರದು, ಸಮಾಜದಲ್ಲಿ ಜನರು ಬದುಕುತ್ತಿರುವುದು ಕೇವಲ ನಂಬಿಕೆಯಿಂದ ಎನ್ನುವ ಸಂಗತಿ ಎಲ್ಲರಿಗೂ ತಿಳಿದಿರುವುದೇ ಆಗಿದೆ, ಹೀಗಾಗಿ ನಾವು ಒಳ್ಳೆಯದು ಮಾಡದಿದ್ದರೂ ಪರವಾಗಿಲ್ಲ ಕೆಟ್ಟದ್ದು ಮಾಡಬಾರದು, ಎನ್ನುವುದು ನಿಮ್ಮ ಈ ರೀತಿ ಮಾಡಿದರೆ ದೇವರಿಗೆ ದ್ರೋಹ ಬಗೆದಂತೆ ಎಂದು ನಂಬಿಕೆ.
ವಾಸ್ತವಿಕತೆ : ಒಳ್ಳೆತನ ಇರುವ ಕಡೆ ಸುಖ ನೆಮ್ಮದಿ ಸಂತೋಷ ಶಾಂತಿ ಇರುತ್ತದೆ, ಕೆಟ್ಟ ಸಂಗತಿಗಳ ಬಗ್ಗೆ ಯೋಚನೆ ಮಾಡುವ ವ್ಯಕ್ತಿಗಳು ಇಡೀ ಸಮಾಜಕ್ಕೆ ಹಾಗೂ ತಮಗೆ ಸಹ ನಕಾರಾತ್ಮಕ ಫಲಿತಾಂಶಗಳನ್ನು ತಂದುಕೊಂಡು ಒದ್ದಾಡುತ್ತಾರೆ ಎನ್ನುವ ಮಾತು ನೂರಕ್ಕೆ ನೂರು ಸತ್ಯ, ಹೀಗಾಗಿ ದೇವರ ಪೂಜೆ ಮಾಡುವುದು ಆತ್ಮ ಸಂತೋಷ, ತಮ್ಮ ನಿವೇದನೆ ಭಗವಂತನ ಮುಂದೆ ಪ್ರಾರ್ಥನೆ ಮಾಡುವ ಮೂಲಕ ಸಲ್ಲಿಸುವ ಸಲುವಾಗಿ ಅಲ್ಲವೇ ? ಅಂತಹ ಭಗವಂತನ ಪ್ರಾರ್ಥನೆ ಮಾಡಿ ಉಳಿದ ಸಮಯದಲ್ಲಿ ಬೇರೆ ವ್ಯಕ್ತಿ ಗಳಿಗೆ ಹಾನಿ ಮಾಡುವ ಯೋಚನೆ ಮಾಡು ವುದರಿಂದ ಭಗವಂತನು ನಮ್ಮ ವಿಷಯದಲ್ಲಿ ಕಠಿಣ ಆಗುತ್ತಾನೆ, ಹೀಗಾಗಿ ನಾವು ಅಂತಹ ಕೆಲಸ ಗಳಿಂದ ದೂರ ಇರುವುದೇ ಕ್ಷೇಮ.
ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಸಿಗುವ ಲಾಭಗಳು.
ನಾಗರಿಕತೆಯ ಪ್ರಾರಂಭದ ದಿನಗಳಲ್ಲಿ ಮನುಷ್ಯ ಆಹಾರಗಳನ್ನು ಬೇಯಿಸಿ ತಿನ್ನಲು ಶುರು ಮಾಡಿದಾಗ ಮೊದಲು ಆತ ಬಳಸುತ್ತಿದ್ದ ದ್ದೆ ಮಣ್ಣಿನ ಪಾತ್ರೆಗಳು, ಕಾಲಕ್ರಮೇಣ ಆಧುನಿಕತೆ ನಮ್ಮನ್ನು ಆವರಿಸಲು ಶುರು ಮಾಡಿದಾಗ ಮಣ್ಣಿನ ಪಾತ್ರೆ ಬದಲು ಸದ್ಯ ಈಗ ಸ್ಟೀಲ್ ಪಾತ್ರೆಗಳನ್ನು ಬಳಸುತ್ತಿದ್ದೇವೆ, ಆದರೆ ಮಣ್ಣಿನ ಪಾತ್ರೆಗಳ ಬಳಕೆಯ ಹಿಂದಿನ ಭಾವನಾತ್ಮಕತೆ, ವಾಸ್ತವಿಕತೆ ಹಾಗೂ ವೈಚಾರಿಕತೆಯ ಬಗ್ಗೆ ಸ್ವಲ್ಪ ತಿಳಿಯೋಣ.
ಭಾವನಾತ್ಮಕತೆ : ನಮ್ಮ ದೇಹ ಮಣ್ಣಿನಿಂದ ಬಂದು ಪುನಹ ಮಣ್ಣಿನಲ್ಲಿ ಲೀನವಾಗುತ್ತದೆ ಎಂದು ಭಾರತೀಯರು ಭಾವಿಸುತ್ತಾರೆ, ಈ ಮಾತು ಇಡೀ ವಿಶ್ವದ ಜನರಿಗೆ ಅನ್ವಯಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ, ಅಂತಹ ಬದುಕು ನಮ್ಮದು, ಜೀವನ ನಶ್ವರ, ನಮ್ಮ ಮನಸ್ಸು ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿಯಲ್ಲಿ ದೊರಕುವ ವಸ್ತುಗಳಲ್ಲಿ ಮಾತ್ರ ಜೀವಿಸಬೇಕು ಎಂದು ಹಂಬಲ ಇಟ್ಟುಕೊಂಡಿರುತ್ತದೆ, ಹೀಗೆ ಮಣ್ಣು ನಮ್ಮ ಬದುಕಿನ ಅವಿಭಾಜ್ಯ ಅಂಗ.
ವಾಸ್ತವಿಕತೆ : ಮಣ್ಣಿನ ಪಾತ್ರೆಗಳಲ್ಲಿ ಅಡುಗೆ, ನೀರು, ಹಾಲು, ಮೊಸರು, ಮಜ್ಜಿಗೆ ಮಾಡುವುದರಿಂದ ದೇಹಕ್ಕೆ ತಂಪು, ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವನೆ ಮಾಡಿದರೆ ಆ ಪಾತ್ರಗಳಲ್ಲಿ ಅಡಗಿರುವ ರಾಸಾಯನಿಕಗಳು ನಮ್ಮ ದೇಹ ಪ್ರವೇಶಿಸಿ ಅನಾರೋಗ್ಯ ತಂದುಕೊಡುವುದು ಸತ್ಯ.
ವೈಚಾರಿಕತೆ : ಬೇರೆ ಪಾತ್ರಗಳಿಗೆ ಅಪಾರ ಹಣ ಸುರಿಯಬೇಕಾಗುತ್ತದೆ, ಜೊತೆಗೆ ಬೇರೆ ಲೋಹದ ಪಾತ್ರೆ ಗಳ ಬಳಕೆಯಿಂದ ಅನಾರೋಗ್ಯ ಬರುವ ಸಂಭವವಿದೆ, ಮಣ್ಣಿನ ಪಾತ್ರೆಗಳು ಅಕಸ್ಮಾತ್ ಒಡೆದು ಹೋದರೆ ತುಂಬಾ ನಷ್ಟ ಉಂಟಾಗುವುದಿಲ್ಲ.
ಮಣ್ಣಿನ ಪಾತ್ರೆ ಯೊಂದಿಗೆ ಮಾನವನ ನಂಟನ್ನು ತಿಳಿಸುವ ಪ್ರಯತ್ನ ಮಾಡಿದ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರೆಯಿರಿ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.