ಹಲವಾರು ಕಾಯಿಲೆಗಳು ತನ್ನದೇ ಆದ ವಿಶೇಷ ಲಕ್ಷಣಗಳನ್ನು ಹೊಂದಿರುತ್ತವೆ, ಆದರೆ ಕಿಡ್ನಿ ಸಮಸ್ಯೆಗಳಿಗೆ ಅಂತಹ ವಿಶೇಷವಾದ ಲಕ್ಷಣಗಳು ಎಂದು ಯಾವುದು ಇರುವುದಿಲ್ಲ, ಅದರಲ್ಲೂ ಕಿಡ್ನಿ ಸಮಸ್ಯೆ ಕೊನೆಯ ಹಂತಕ್ಕೆ ತಲುಪುವ ವರೆಗೂ ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದು ತಿಳಿಯುವುದೇ ಇಲ್ಲ, ನಿಮಗೆ ತಿಳಿದಿರಲಿ ಪ್ರಪಂಚದ ಎಲ್ಲಾ ದೇಶದಲ್ಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಆದರೆ ಅದರಲ್ಲಿ ಎಷ್ಟೋ ಜನಕ್ಕೆ ತಮಗೆ ಕಿಡ್ನಿ ಸಮಸ್ಯೆ ಇರುವುದರ ಬಗ್ಗೆ ತಿಳಿದಿರುವುದಿಲ್ಲ.
ಹಾಗಾದರೆ ಕಿಡ್ನಿ ಸಮಸ್ಯೆ ನಿಮಗೆ ಏನಾದರೂ ಇದ್ದರೆ ಯಾವ ರೀತಿಯ ಲಕ್ಷಣಗಳು ನಿಮಗೆ ಕಂಡುಬರುತ್ತವೆ ಅದರಿಂದ ನಾವು ಹೇಗೆ ತಿಳಿಯಬಹುದು ಎಂಬುದರ ಬಗ್ಗೆ ಅತ್ಯುತ್ತಮವಾದ ಮಾಹಿತಿಯನ್ನು ನಿಮಗೆ ನೀಡಲು ಬಯಸುತ್ತೇವೆ.
ಮೊದಲನೆಯದಾಗಿ ಕಿಡ್ನಿ ಸಮಸ್ಯೆ ಬಂದವರಿಗೆ ಕಣ್ಣಿನ ಸುತ್ತಲೂ ಉಬ್ಬಿಕೊಳ್ಳುತ್ತದೆ, ನಿಮಗೇನಾದರೂ ಈ ರೀತಿಯ ಸಮಸ್ಯೆಗಳು ಕಂಡು ಬಂದರೆ ದಯಮಾಡಿ ಮುಂಜಾಗರೂಕತೆಯಿಂದ ನೀವು ವೈದ್ಯರನ್ನು ಸಂಪರ್ಕಿಸುವುದು ಉತ್ತಮ, ನಿಮ್ಮ ದೇಹದ ಚರ್ಮವು ಒಣಗಲು ಶುರುವಾಗುತ್ತದೆ ಹಾಗೂ ತುರಿಕೆ ಇಂತಹ ಸಮಸ್ಯೆಗಳು ಉಂಟಾಗುತ್ತದೆ.
ಇನ್ನು ಕೆಲವರಿಗೆ ರಾತ್ರಿ ಎಷ್ಟು ತಡವಾದರೂ ನಿದ್ರೆ ಬರುವುದಿಲ್ಲ, ನಿದ್ರೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಇವರು ಅನುಭವಿಸುತ್ತಿರುತ್ತಾರೆ, ಮೂತ್ರ ಮಾಡುವಾಗ ರಕ್ತ ಬಿಂದು ಕಾಣಿಸುತ್ತದೆ, ರಕ್ತವಲ್ಲ ನಾವು ಹೇಳುತ್ತಿರುವುದು ರಕ್ತದ ಬಿಂದುಗಳು ಮೂತ್ರದಲ್ಲಿ ಕಾಣಿಸಿಕೊಂಡರೆ ಅಂಥವರಿಗೆ ಕಿಡ್ನಿ ಸಮಸ್ಯೆ ಇರಬಹುದು, ಇನ್ನು ಕೆಲವರಿಗೆ ಮೂತ್ರ ಮಾಡಿ ಬಂದ ತಕ್ಷಣ ಮತ್ತೊಮ್ಮೆ ಮೂತ್ರಕ್ಕೆ ಅವಶ್ಯವಾಗುತ್ತದೆ, ಹೀಗೆ ಗಂಟೆಯಲ್ಲಿ ಹಲವು ಬಾರಿ ಮೂತ್ರ ವಿಸರ್ಜನೆ ಮಾಡುವ ಸಮಸ್ಯೆ ಇದ್ದರೂ ಒಮ್ಮೆ ಕಿಡ್ನಿ ಪರೀಕ್ಷೆ ಮಾಡಿಸುವುದು ಉತ್ತಮ.
ಕಿಡ್ನಿ ಸಮಸ್ಯೆ ಬಂದವರಿಗೆ ಮುಖ್ಯಲಕ್ಷಣ ನಿಮ್ಮ ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವು ಕಡಿಮೆಯಾಗುತ್ತದೆ, ಹಾಗೂ ರಕ್ತದಲ್ಲಿ ಅನಿಮಿಯಾ ಸಮಸ್ಯೆ ಹೆಚ್ಚಾಗಲು ವಾಗುತ್ತದೆ, ಹಾಗೆ ಮುಂದೆ ನಿಮ್ಮ ಕಾಲು ಮತ್ತು ಕೈಗಳಲ್ಲಿ ಗಂಟು ಅಥವಾ ಊತ ಕಾಣಿಸಿಕೊಳ್ಳುತ್ತದೆ, ಹಾಗೂ ಇದರಿಂದ ವಿಪರೀತವಾದ ನೋವು ಕಾಣಿಸಿಕೊಂಡರೆ ಎಚ್ಚರವಹಿಸಿ, ಪದೇ ಪದೇ ನಿಮ್ಮ ಮಾಂಸಖಂಡಗಳಲ್ಲಿ ಗಟ್ಟಿಯಾದ ಹಿಡಿತ ಕಾಣಿಸಿಕೊಳ್ಳುತ್ತದೆ.
ವಾಂತಿ-ಭೇದಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿ ಇರುತ್ತದೆ, ಹಸಿವಾಗುವುದಿಲ್ಲ, ನಿಮಗೆ ಇಷ್ಟವಾದ ಆಹಾರವನ್ನು ನೋಡಿದರೂ ತಿನ್ನಬೇಕು ಎಂದು ಅನಿಸುವುದಿಲ್ಲ, ಬಾಯಿಗೆ ರುಚಿ ಬರುವುದಿಲ್ಲ, ಈ ರೀತಿಯ ಯಾವುದೇ ಸಮಸ್ಯೆಗಳು ನಿಮಗೆ ಬಂದರೆ ದಯಮಾಡಿ ನಿಗಾವಹಿಸಿ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ, ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಾಗೂ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.