ಕೈಮುಗಿದು ಒಮ್ಮೆ ಮನಸಾರೆ ಬೇಡಿದರೆ ಸಾಕು ಸಕಲ ಕಷ್ಟಗಳನ್ನು ನಿವಾರಿಸುವ ಗೊರವನಹಳ್ಳಿ ಶ್ರೀ ಲಕ್ಷ್ಮಿ..!!

0
7209

ಲಕ್ಷ್ಮಿ ದೇವಸ್ಥಾನ ಎಂದ ಕೂಡಲೇ ನೆನಪಾಗುವುದು ಕೊಲ್ಲಾಪುರದ ಲಕ್ಷ್ಮಿ ದೇವಾಲಯ, ಆದರೆ ನಮ್ಮ ಕರ್ನಾಟಕದಲ್ಲಿ ಇರುವ ಗೊರವನಹಳ್ಳಿ ಕೊಲ್ಲಾಪುರ ದಂತೆಯೇ ಪ್ರಸಿದ್ಧಿಯನ್ನು ಪಡೆಯುತ್ತಿದೆ, ಕರ್ನಾಟಕದಲ್ಲಿ ಲಕ್ಷ್ಮಿಗೆ ಮೀಸಲಾದ ಕೆಲವು ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಈ ದೇವಾಲಯ ಧಾರ್ಮಿಕ ಶ್ರದ್ದಾ ಕೇಂದ್ರವಾಗಿದೆ.

ಈ ದೇವಾಲಯವು ಲಕ್ಷ್ಮಿ ಆರಾಧನೆಯ ಮುಖ್ಯ ಸ್ಥಾನ ವಾಗಿರುವುದರಿಂದ ಪ್ರತಿ ಮಂಗಳವಾರ ಶುಕ್ರವಾರ ಹಾಗೂ ಭಾನುವಾರದಂದು ವಿಶೇಷವಾದ ಪೂಜೆಗಳು ಇರುತ್ತದೆ, ಜೊತೆಯಲ್ಲಿ ದೇವಾಲಯದ ವತಿಯಿಂದ ಇಲ್ಲಿ ಪ್ರತಿದಿನ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ, ದೇವಸ್ಥಾನದ ಆಡಳಿತ ವರ್ಗದಿಂದ ಇಲ್ಲಿ ಕಲ್ಯಾಣ ಮಂಟಪವೂ ನಿರ್ಮಿಸಲಾಗಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗಿದೆ.

ದೇಗುಲದ ಇತಿಹಾಸ : ಇದೇ ಗೊರವನಹಳ್ಳಿ ಗ್ರಾಮದಲ್ಲಿ ಅಬ್ಬಯ್ಯ ಎನ್ನುವ ಒಬ್ಬ ವ್ಯಕ್ತಿ ನಡೆಸಿದ್ದನು, ಕೊಳದ ಬಳಿ ಆತನ ಕೆಲಸ ಮಾಡುತ್ತಿರುವಾಗ ಆತನಿಗೆ ಒಂದು ಹೆಣ್ಣಿನ ಅಶರೀರವಾಣಿಯೊಂದು ಕೇಳಿಸಿತು, ನಿನ್ನ ಮನೆಗೆ ನಾನು ಬರ್ತೀನಿ ಕರೆದುಕೊಂಡು ಹೋಗು ಎಂದು, ಪದೇ ಪದೇ ಇದೇ ಧ್ವನಿ ಅಪ್ಪಯ್ಯನಿಗೆ ಕೇಳಿಸಿದಾಗ ವಿಚಲಿತನಾದ ಅಬ್ಬಯ್ಯ ತಾಯಿಯಲ್ಲಿ ಕೇಳುತ್ತಾನೆ, ಆಗ ತಾಯಿ ದೆವ್ವ ವಾದರೆ ಬರಬೇಡ ದೇವರಾದರೆ ಬಾ ಎಂದು ಹೇಳುತ್ತಾಳೆ.

ತಾಯಿಯ ಮಾತನ್ನು ಒಪ್ಪಿಕೊಂಡ ಅಂಬಯ್ಯ ಕೆಲಸ ಮಾಡಬೇಕಾದರೆ ಮತ್ತೊಮ್ಮೆ ಅದೇ ಧ್ವನಿ ಕೇಳಿಸಿದಾಗ ತಾಯಿ ಹೇಳಿಕೊಟ್ಟ ಹಾಗೆ ದೆವ್ವ ವಾದರೆ ಬರಬೇಡ ದೇವರಾದರೆ ಎನ್ನುತ್ತಾನೆ, ಹೀಗೆ ಹೇಳಿದ ಕ್ಷಣದಲ್ಲೇ ಕೊಳದಿಂದ ಗೆದ್ದು ಒಂದು ಅಪ್ಪಯ್ಯನ ಮನೆ ಸೇರಿದಂತೆ ಲಕ್ಷ್ಮಿ ತಾಯಿ, ಅಂದಿನಿಂದ ಗೊರವನಹಳ್ಳಿ ಪವಿತ್ರ ಪುಣ್ಯಕ್ಷೇತ್ರವಾಗಿ ಪರಿವರ್ತನೆಯಾಗಿತ್ತು.

ಆದರೆ 1925 ರ ನಂತರದಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಗ್ರಾಮಸ್ಥರ ಮನಸ್ಸನ್ನು ಒಲಿಸಲು ಕಮಲಮ್ಮನವರು ಬಹಳ ಶ್ರಮಪಟ್ಟು ದೇಗುಲ ನಿರ್ಮಾಣ ಮಾಡಿದರು, ಇದರಿಂದ ಸಂತೃಪ್ತರಾಗಿ ಲಕ್ಷ್ಮೀದೇವಿಯು ಬೇಡಿ ಬಂದ ಭಕ್ತರ ಸಕಲ ಕಷ್ಟಗಳನ್ನು ಪರಿಹಾರ ಮಾಡುತ್ತಿದ್ದಾಳೆ.

ಬೆಂಗಳೂರಿಂದ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನ ಕ್ಕೆ ನೇರವಾಗಿ ಬಸ್ಸಿನ ವ್ಯವಸ್ಥೆ ಇದ್ದು, ತುಮಕೂರಿಂದ ಅರವತ್ತೇಳು ಕಿಲೋಮೀಟರ್ ದೂರವಾಗುತ್ತದೆ, ಗೊರವನಹಳ್ಳಿಯಲ್ಲಿ ವಸತಿ ಗೃಹಗಳ ವ್ಯವಸ್ಥೆಯೂ ಇದೆ, ಗೊರವನಹಳ್ಳಿ ಪಕ್ಕದಲ್ಲಿಯೇ ಕಣ್ಣು ತುಂಬಿಕೊಳ್ಳಲು ತೀತಾ ಜಲಾಶಯವಿದೆ, ಜಯಮಂಗಲಿ ನದಿ ಇದೆ, ದೇವರಾಯ ದುರ್ಗಾ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಹಾಗೂ ವೀರಾಪುರ ಶ್ರೀನಿವಾಸ ದೇವಾಲಯಗಳಿವೆ, ಅಷ್ಟೇ ಅಲ್ಲದೆ ಸಮೀಪದಲ್ಲಿ ಸಿದ್ದಗಂಗೆ ಇದೆ, ಶಾಂತಲೆಯನ್ನು ನೆನಪಿಸುವ ಶಿವಗಂಗೆ ಇದೆ, ಸಿದ್ದರು ಬದುಕಿದ ಸಿದ್ದರಬೆಟ್ಟ ಇದೆ.

LEAVE A REPLY

Please enter your comment!
Please enter your name here