ಸತ್ವಪೂರ್ಣವಾದ ಅಣಲೆಕಾಯಿ ಹಾಗು ಅದರ ಅರೋಗ್ಯ ಲಾಭಗಳ ಬಗ್ಗೆ ತಪ್ಪದೆ ನೋಡಿ

0
1511

ಅಣಿಲೆ ಕಾಯಿಯೂ ಈಶ್ವರನ ಮನೆಯಲ್ಲಿ ಹುಟ್ಟಿತ್ತಂತೆ, ಈಶ್ವರನ ಕೈಬೆರಳುಗಳ ಗುರುತುಗಳನ್ನು ಪಂಚರೇಖಾಯುತ್ತವಾದ ಅಣಿಲೆಕಾಯಿಯಲ್ಲಿ ತೋರಿಸುತ್ತಾರೆ, ಅಣಿಲೆ ಕಾಯಿಯ ಎಲ್ಲಾ ಔಷಧಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ ರೋಗಗಳನ್ನು ಇದು ಗೆಲ್ಲುವುದರಿಂದ ವಿಜಯ ಎಂದು, ವ್ರಣಗಳನ್ನು ರೋಪಾನ ಮಾಡುವುದರಿಂದ ರೋಹಿನಿ ಎಂದು ಪ್ರಲೇಪ ಮಾಡುವುದರಿಂದ ಪೂತನ ಎಂದು ಶರೀರವನ್ನು ಶೋಧನ ಮಾಡುವುದರಿಂದ ಅಮೃತ ಎಂದು ದೇಹದ ಎಲ್ಲಾ ರೋಗಗಳನ್ನು ನಿವಾರಿಸಿ ಜೀವದಾನ ಮಾಡುವುದರಿಂದ ಜೀವಂತೀ ಎಂದು ಹೊಸ ಚೇತನವನ್ನು ನೀಡುವುದರಿಂದ ಚೇತನಾ ಎಂದೂ ಇದನ್ನು ಕರೆಯುತ್ತಾರೆ, ಸದಾ ಹಸಿರಾಗಿರುವದಿರಿಂದ ಮತ್ತು ಎಲ್ಲಾ ರೋಗಗಳನ್ನು ಪರಿಹರಿಸುವುದುರಿಂದ ಹರೀತಕೀ ಎಂಬ ಹೆಸರು ಇದೆ, ಹೀಗೆ ಇದೊಂದು ಅತ್ಯಂತ ಸತ್ವಪೂರ್ಣವಾದ ವನಸ್ವತಿ ನೀಡಬಲ್ಲ ಸಂಜೀವಿನಿ.

ಚಿಕಿತ್ಸೆಗಾಗಿ ಉಪಯೋಗಿಸಬೇಕಾದ ಅಣಿಲೆ ಕಾಯಿಯ ಸ್ವರೂಪವನ್ನು ಭಾವ ಮಿಶ್ರರು ಹೀಗೆ ವಿವರಿಸುತ್ತಾರೆ, ಅದು ಹೊಸತಾಗಿರಬೇಕು, ಗಟ್ಟಿಯಾಗಿರಬೇಕು, ವೃತ್ತಾಕಾರವಾಗಿರಬೇಕು, ಭಾರವನ್ನು ಹೊಂದಿರಬೇಕು, ನೀರಿನಲ್ಲಿ ಮುಳುಗಬೇಕು, ಭಾರದಲ್ಲಿ ಎರಡು ಕರ್ಷ ಇರಬೇಕು ಇಂತಹ ಫಲವು ಪ್ರಶಸ್ತವಾಗಿದೆ, ತನ್ನ ಗುಣವನ್ನು ವ್ಯಕ್ತಪಡಿಸಬಲ್ಲುದಾಗಿದೆ.

ಅಣಿಲೆಕಾಯಿಯು ತ್ರಿದೋಷಗಳಿಂದ ಉಂಟಾದ ಎಲ್ಲಾ ರೋಗಗಳನ್ನು ಪರಿಹರಿಸುತ್ತದೆ ಉಪ್ಪು ಹಾಗೂ ಅಣಿಲೆಕಾಯಿಯ ಸೇವನೆಯಿಂದ ಕಫಜ ರೋಗಗಳು ಸಕ್ಕರೆ ಮತ್ತು ಅಣಿಲೆಕಾಯಿಂದ ಪಿತ್ತರೋಗಗಳು ದನದ ತುಪ್ಪದೊಂದಿಗೆ ಸೇವಿಸಿದರೆ ಎಲ್ಲಾ ವಾತರೋಗಗಳೂ ದೂರವಾಗುತ್ತವೆ, ಬೇರೆ ಬೇರೆ ಋತುಗಳಲ್ಲಿ ಉಂಟಾಗುವ ವಿವಿಧ ವ್ಯಾಧಿಗಳಿಗೂ ಇದು ಪ್ರಶಸ್ತವಾದ ಭೇಷಜವಾಗಿದೆ, ಶಿಶಿರ ಋತುವಿನಲ್ಲಿ ಹಿಪ್ಪಲಿಯೊಡನೆ ವಸಂತ ಋತುವಿನಲ್ಲಿ ಜೇನಿನೊಡನೆ ಮತ್ತು ಗ್ರೀಷ್ಮ ಋತುವಿನಲ್ಲಿ ಬೆಲ್ಲದೊಂದಿಗೆ ಅಣಿಲೆಕಾಯಿಯನ್ನು ತಿನ್ನುವುದರಿಂದ ಶರೀರದ ಆರೋಗ್ಯ ಅನಿರ್ಬಂಧಿತವಾಗಿರುತ್ತದೆ ದೀರ್ಘಾಯುಷ್ಯ ತಾರುಣ್ಯ ಬುದ್ಧಿವಂತಿಕೆಗಳು ಲಭಿಸುತ್ತದೆ.

ಅಣಿಲೆಯ ರಾಸಾಯನಿಕ ಘಟಕಗಳಲ್ಲಿ ಟೆನ್ನಿಸ್ ನಲ್ಲಿ ಚೆಬುಲೆಜಿಕ್ ಆಸಿಡ್, ಚೆಬುಲಿನಿಕ್ ಆಸಿಡ್ ಕೊರಿಲೇ ಜಿನ್ಗಳು ಪ್ರಮುಖವಾಗಿದವೆ ಇವುಗಳ ಹೊರತಾಗಿ ಸಕ್ಕರೆ ಎಮಿನೋ ಆಸಿಡ್ ರಂಜಕ ಆಮ್ಲಗಳು ಇರುತ್ತವೆ. ಅಣಿಲೆಕಾಯಿಯ ಲೇಪನದಿಂದ ಬಾವು ನೋವುಗಳು ನಿವಾರಣೆಯಾಗುತ್ತದೆ ರೆಪ್ಪೆಗೆ ಹಚ್ಚುವುದರಿಂದ ಕಣ್ಣಿನ ಕಲೆಗಳು ವಾಸಿಯಾಗುತ್ತವೆ ಅಣಿಲೆ ಕಾಯಿ ಕಷಾಯದಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಮತ್ತು ಗಂಟಲಿನ ರೋಗಗಳು ಗುಣ ಹೊಂದುತ್ತವೆ.

ವಾತಾವ್ಯಾಧಿಯಲ್ಲಿ ಅಣಿಲೆಕಾಯಿಯು ಅತ್ಯುತ್ತಮ ಔಷಧಿ, ವಾತನಾಡಿಗಳಲ್ಲಿ ದೌರ್ಬಲ್ಯ ಮಸ್ತಿಷ್ಕ ದೌರ್ಬಲ್ಯಗಳನ್ನು ಇದು ಪರಿಹರಿಸುತ್ತದೆ ದೃಷ್ಟಿಮಾಂದ್ಯದಂತಹ ಇಂದ್ರಿಯ ವಿಕಾರಗಳನ್ನು ಹೋಗಲಾಡಿಸುತ್ತದೆ. ಜೀರ್ಣಾಂಗದ ತೊಂದರೆಗಳಲ್ಲಿಯೂ ಅಣಿಲೆಕಾಯಿಯು ಪರಿಣಾಮಕಾರಿ ಬಾಯಿಯಲ್ಲಿ ಇಟ್ಟುಕೊಂಡು ಚೀಪುವುದರಿಂದ ಹಸಿವೆ ಉಂಟಾಗುತ್ತದೆ ತೋಟವನ್ನು ತಿನ್ನುವುದರಿಂದ ಹೊಟ್ಟೆಉಬ್ಬರ, ಮಲಬದ್ಧತೆ ದೂರವಾಗುತ್ತದೆ, ಪೈಲ್ಸ್, ಕಾಮಾಲೆ ರೋಗ, ಯಕೃತ್ ಪ್ಲೀಹಗಳ ರೋಗಗಳು ಕ್ರೀಮಿರೋಗಗಳನ್ನು ಗುಣಪಡಿಸುತ್ತದೆ.

ಅಣಿಲೆಕಾಯಿಯು ಇನ್ನೂ ಹಲವಾರು ಕಾಯಿಲೆಗಳನ್ನು ಗುಣಪಡಿಸುವದರಿಂದ ಪಥ್ಯಗಳಲ್ಲೆಲ್ಲಾ ಇದು ಸರ್ವೋತ್ಕೃಷ್ಟ ಎಂದು ಚರಕರು ಘೋಷಿಸಿದ್ದಾರೆ, ಯಾಕೆಂದರೆ ಹೃದಯ ದೌರ್ಬಲ್ಯ, ವಾತರಕ್ತ, ನೆಗಡಿ, ಬಿಕ್ಕಳಿಕೆ, ಸ್ವರಭೇದ, ಕೆಮ್ಮು, ದಮ್ಮು, ಗರ್ಭಾಶಯದ ದೌರ್ಬಲ್ಯ, ಪ್ರಮೇಹ ಮೂತ್ರ ಸಂಬಂಧಿ ತೊಂದರೆಗಳು, ಕುಷ್ಠ, ಸರ್ಪಸುತ್ತು, ವಿಷಮಜ್ವರ ಹೀಗೆ ಅಸಂಖ್ಯಾತ ಕಾಯಿಲೆಗಳಲ್ಲಿ ಹರಿತಕಿ ಹಿತಕರವಾಗಿದೆ, ಭೋಜನದೊಂದಿಗೆ ಇದನ್ನು ಸೇವಿಸುವುದರಿಂದ ಬುದ್ಧಿ, ಬಲ ಮತ್ತು ಇಂದ್ರಿಯಗಳ ಚುರುಕುತನ ಹೆಚ್ಚುತ್ತದೆ, ತ್ರಿದೋಷಜರೋಗಗಳು ನಿರ್ಮೂಲನವಾಗುತ್ತದೆ, ಮೂತ್ರ, ಮಲ, ಬೆವರು ಮೊದಲಾದವುಗಳ ಏರುಪೇರುಗಳು ಸಮರ್ಪಕವಾಗಿರುತ್ತದೆ ಎಂಬ ಹೇಳಿಕೆ ಇದೆ, ಇದು ಶರೀರಕ್ಕೆ ಪೌಷ್ಟಿಕವಾಗಿದೆ, ಅಣಿಲೆಕಾಯಿಯ ಚೂರ್ಣವನ್ನು ಮೂರರಿಂದ ಆರು ಗ್ರಾಂ ಸೇವಿಸಬಹುದು.

ಆದರೆ ಆತಿ ಖಿನ್ನವಾದವನು ಕ್ಷೀಣನು, ಕೃಶನು, ರಕ್ತಹೀನನು, ಪಿತ್ತಾಧಿಕ್ಯವುಳ್ಳವನು, ಗರ್ಭಿಣೀ ಇವರುಗಳು ಹರೀತಕೀ ಸೇವಿಸಬಾರದುದೆಂದು ಚರಕರು ಎಚ್ಚರಿಸುತ್ತಾರೆ, ಅತಿ ಬಾಯಾರಿಕೆಯುಳ್ಳವರು, ಬಾಯಿ ಒಣಗಿದವರು, ನವಜ್ವರಗಳಿಂದ ಪೀಡಿತರಿಗೂ ಇದು ಅಹಿತಕರವಾಗಿದೆ.

LEAVE A REPLY

Please enter your comment!
Please enter your name here