ಈ ಎರಡು ವಿಧಾನ ಬಳಸಿ ಮೆಂತ್ಯಯಿಂದ ಹೀಗೆ ಮಾಡಿದರೆ ಮುಖ ಬಿಳಿಯಾಗುವುದರ ಜೊತೆಗೆ ಮುಖದಲ್ಲಿ ಯಾವುದೇ ಕಲೆ ಕೂಡ ಇರುವುದಿಲ್ಲ..!!

0
2251

ಎಲ್ಲರಿಗು ಕೂಡ ತಾವು ಬೇರೆಯವರಿಗಿಂತ ಸುಂದರವಾಗಿ ಕಾಣಬೇಕು ಎಂಬ ಬಯಕೆ ಇದ್ದೆ ಇರುತ್ತದೆ ಅದೇ ಕಾರಣಕ್ಕೆ ಬೇಡದ ಕೃತಕ ಸೌಂದರ್ಯ ವರ್ದಕಗಳುತಮ್ಮ ಮುಖದ ಮೇಲೆ ಪ್ರಯೋಗಿಸುತ್ತಲೇ ಇರುತ್ತಾರೆ ಆದರೆ ಇದರಿಂದ ನಿಮ್ಮ ತ್ವಚೆ ಇನ್ನು ಹಾಳಾಗುತ್ತೆ ಹೊರತು ಬೇರೇನೂ ಬದಲಾವಣೆ ಕಾಣುವುದಿಲ್ಲ.

ಆದರೆ ನಿಮ್ಮ ಸಮಸ್ಯೆಗಳಿಗೆ 95% ಪರಿಹಾರ ನಿಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ನೀವೇ ತಯಾರಿಸಿಕೊಳ್ಳಬಹುದು ಮುಖದ ಸಮಸ್ಯೆಗೂ ಕೂಡ ನಿಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ನಿಮ್ಮ ಚರ್ಮ ಬಿಳಿಯಾಗಿಸಿ ಮೊಡವೆ ಹಾಗು ಕಲೆಯನ್ನು ನಿವಾರಿಸಿ ನಿಮ್ಮ ಮುಖದ ಅಂದವನ್ನ ಇನ್ನು ಹೆಚ್ಚಿಸಿಕೊಳ್ಳಬಹುದು ಹೇಗೆ ಅಂತ ಬನ್ನಿ ನೋಡೋಣ.

ಬೇಕಾಗುವ ಸಾಮಗ್ರಿ : ಮೆಂತ್ಯ ಕಾಳಿನ ಪುಡಿ – 2 ಸ್ಪೂನ್, ಜೇನು ತುಪ್ಪ – 1 ಸ್ಪೂನ್, ಹಾಲು – 4 – 5 ಸ್ಪೂನ್, ನಿಂಬೆ ರಸ – 1 ಸ್ಪೂನ್, ಗಂಧದ ಪುಡಿ – 1 ಸ್ಪೂನ್.

ಮಾಡುವ ವಿಧಾನ : ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಒಂದು ಕಪ್ ಬೌಲ್ ನಲ್ಲಿ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ ಈ ಪೇಸ್ಟ್ ತೆಳುವಾಗಿರುವಂತೆ ಮಾಡಿ ಗಟ್ಟಿಯಾದರೆ ಇನ್ನು ಒಂದೆರಡು ಸ್ಪೂನ್ ಹಾಲು ಹಾಕಿಕೊಳ್ಳಿ ನಂತರ ನಿಮ್ಮ ಮುಖ ಹಾಗು ಕುತ್ತಿಗೆ ಭಾಗವನ್ನು ನೀರಿನಿಂದ ಚನ್ನಾಗಿ ತೊಳೆದು ನಂತರ ನೀವು ತಯಾರಿಸಿಕೊಂಡ ಮಿಶ್ರಣವನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಒಣಗಲು ಬಿಡಬೇಕು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಬೇಕಾಗುವ ಸಾಮಗ್ರಿ : ಮೆಂತ್ಯ ಕಾಳಿನ ಪುಡಿ – 2 ಸ್ಪೂನ್, ಮೊಸರು – 5-6 ಸ್ಪೂನ್, ಜೇನು ತುಪ್ಪ – 2 ಸ್ಪೂನ್.

ಮಾಡುವ ವಿಧಾನ : ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಒಂದು ಕಪ್ ಬೌಲ್ ನಲ್ಲಿ ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ ನಂತರ ನಿಮ್ಮ ಮುಖ ಹಾಗು ಕುತ್ತಿಗೆ ಭಾಗವನ್ನು ಚನ್ನಾಗಿ ತೊಳೆದು ಈ ಪೇಸ್ಟ್ ಅನ್ನು ಹಚ್ಚಿ 5 ನಿಮಿಷ ನೀವೇ ಮಸಾಜ್ ಮಾಡಿಕೊಳ್ಳಿ ನಂತರ 30 ನಿಮಿಷ ಒಣಗಲು ಬಿಡಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿದ ತೊಳೆಯಿರಿ.

ಮೆಂತ್ಯ ಕಾಳಿನಲ್ಲಿ ಆಂಟಿ ಇನ್ಫ್ಲಮೆಟ್ರಿ (anti inflammatory) ಮತ್ತು ಆಂಟಿ ಬ್ಯಾಕ್ಟೆರಿಯಲ್ (anti bacterial) ಗುಣವಿದ್ದು ನಮ್ಮ ಮುಖವನ್ನು ಒಣಗಲು ಬಿಡುವುದಿಲ್ಲ ಹಾಗು ಮ್ಯೊಚುರೈಜೆರ್ ಆಗಿ ಕೆಲಸ ಮಾಡುತ್ತದೆ ಹಾಗು ನಿಮ್ಮ ಮುಖ ಬಿಳಿಯಾಗಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿತ್ತದೆ.

ಇನ್ನು ಮೊಸರಿನಲ್ಲಿ ಲಾಕ್ಟಕ್ ಆಸಿಡ್ ನ ಗುಣವಿದ್ದು ಡೆಡ್ ಸ್ಕಿನ್ ತೆಗೆದು ಹಾಕಲು ಸಹಾಯ ಮಾಡುತ್ತದೆ ಹಾಗು ಮುಖದಲ್ಲಿ ತುತ್ತನ್ನು ತೊಲಗಿಸಲು ಸಹಾಯಕವಾಗಿದೆ ಜೇನುತುಪ್ಪ ನಿಮ್ಮ ತ್ವಚೆಯ ಮ್ಯೊಚುರೈಜೆರ್ ಆಗಿ ಕೆಲಸ ಮಾಡುತ್ತದೆ ಒಮ್ಮೆ ಉಪಯೋಗಿಸಿ ನೋಡಿ ಪರಿಣಾಮ ನೀವೇ ಕಾಣುತ್ತಿರಾ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here