ಕಣ್ಣು ಉರಿ ಹಾಗೂ ಕಣ್ಣಲ್ಲಿ ನೀರು ಬರುವ ಸಮಸ್ಯೆ ಇದ್ದರೆ ಸುಲಭ ಮತ್ತು ಸರಳ ಟಿಪ್ಸ್

0
2195

ಹಲವರಿಗೆ ಹಲವು ರೀತಿಯ ಕಣ್ಣಿನ ಸಮಸ್ಯೆ ಇರುತ್ತದೆ ದೃಷ್ಟಿ ದೋಷದ ಸಮಸ್ಯೆಗಳು ಒಂದೆಡೆಯಾದರೆ ಕಣ್ಣು ಉರಿ ಹಾಗೂ ಪದೇ ಪದೇ ಕಣ್ಣಿನಲ್ಲಿ ನೀರು ಸುರಿಯುವ ಸಮಸ್ಯೆ ಇನ್ನು ಹಲವರಿಗೆ ಇರುತ್ತದೆ ಈ ರೀತಿಯ ಕಣ್ಣಿನಲ್ಲಿ ನೀರು ಬರುವ ಸಮಸ್ಯೆ ಇದ್ದವರಿಗೆ ಇಂದು ಅತ್ಯದ್ಭುತವಾದ ಮನೆ ಮದ್ದಿನ ಸಲಹೆಯೊಂದನ್ನು ನೀಡುತ್ತೇವೆ.

ಕಣ್ಣು ಉರಿ ನಿಮಗೆ ಹೆಚ್ಚಾಗಿ ಕಾಡುತ್ತಿದ್ದರೆ ಅಥವಾ ತುರಿಕೆ ಸಂಬಂಧ ಸಮಸ್ಯೆಗಳು ಇದ್ದರೆ ಹಾಲಿನಲ್ಲಿ ಶುದ್ಧವಾದ ಹತ್ತಿಯನ್ನು ಅದ್ದಿ ಅದರಿಂದ ಕಣ್ಣನ್ನು ಶುಚಿಗೊಳಿಸಿ ಅಥವಾ ಇದೇ ರೀತಿಯಲ್ಲಿ ರೋಸ್ ವಾಟರ್ ಬಳಸಿ ಕಣ್ಣನ್ನು ಶುಚಿಗೊಳಿಸಿ ಈ ರೀತಿ ಮಾಡುವುದರಿಂದ ಕಣ್ಣು ತಂಪಾಗುತ್ತದೆ ಹಾಗೂ ಉರಿ ಕಡಿಮೆಯಾಗುತ್ತದೆ.

ಕಣ್ಣುಗಳಿಗೆ ಕತ್ತರಿಸಿದ ಸೌತೆಕಾಯಿ ಉತ್ತಮ ಮನೆಮದ್ದು ಎಂದರೆ ತಪ್ಪಾಗಲಾರದು ಕತ್ತರಿಸಿದ ಸೌತೆಕಾಯಿ ತುಂಡನ್ನು ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ ಅತಿ ಮುಖ್ಯವಾಗಿ ಹೊರಗಿನಿಂದ ಬಂದಾಗ ಮುಖವನ್ನು ಸ್ವಚ್ಛಗೊಳಿಸುವಾಗ ಕಣ್ಣುಗಳನ್ನು ಸ್ವಚ್ಛಗೊಳಿಸಿ ಈ ರೀತಿ ಮಾಡುವುದು ಒಳ್ಳೆಯದು.

ಸಾಫ್ಟ್ವೇರ್ ಉದ್ಯಮಿಗಳಿಗೆ ಅಥವಾ ಡೇಟಾ ಎಂಟ್ರಿ ಕೆಲಸ ಮಾಡುವ ಉದ್ಯಮಿಗಳಿಗೆ ಕಣ್ಣಿನ ಉರಿ ಸಮಸ್ಯೆ ಸಾಮಾನ್ಯ ಅಂಥವರು ಆಲೂಗಡ್ಡೆಯನ್ನು ಕತ್ತರಿಸಿ ಕಣ್ಣಿಗೆ ಇಟ್ಟರೆ ಉರಿ ಕಡಿಮೆಯಾಗುವುದು ಅತಿ ಮುಖ್ಯವಾಗಿ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವವರು ಪ್ರತಿದಿನ ಒಂದು ಗಂಟೆ 2 ರಿಂದ 3 ನಿಮಿಷ ಕಣ್ಣಿಗೆ ವಿಶ್ರಾಂತಿ ಕೊಡಲೇಬೇಕು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here