ಗೌರಿ ಹಬ್ಬದ ದಿನ ಅತ್ಯಂತ ಸರಳ ರೀತಿಯಲ್ಲಿ ಸ್ವರ್ಣ ಗೌರಿ ಪೂಜೆ ಮಾಡುವ ಸರಿಯಾದ ವಿಧಾನ!

0
1575

ಮೊದಲು ಮನೆಯನ್ನೇಲ್ಲ ಶುಭ್ರಗೊಳಿಸಿ ಬಾಗಿಲಮುಂದೆ, ದೇವರ ಮುಂದೆ ಬಣ್ಣ ಬಣ್ಣದ ರಂಗವಲ್ಲಿ ಬಿಡಿಸಿ ತಳಿರು ತೋರಣ ಕಟ್ಟಿ ಎಣ್ಣೆ ಅರಿಶಿನ ಹಚ್ಚಿಕೊಂಡು ಮುತ್ತೈದೆಯರು ಸ್ನಾನ ಮಾಡಿ ಮಡಿ ಬಟ್ಟೆಯನು ಧರಿಸಿ ನಿಮ್ಮ ಮನೆಯಲ್ಲಿ ಹೇಗೆ ಪದ್ದತಿ ಇದೆಯೊ ಹಾಗೆ ನಂತರ ಒಂದು ಮಂಟಪಕ್ಕೆ ಬಾಳೆ ತಳಿರು ತೋರಣದಿಂದ ಅಲಂಕರಿಸಿ ಹೂ ಮಾಲೆ ಹಾಕಿ ಮಂಟಪದ ಎರಡೂ ಬದಿಯಲ್ಲಿ ದೀಪದ ಕಂಬದಲ್ಲಿ ದೀಪ ಹಚ್ಚಿ ನಂತರ ಮಂಟಪದ ಮದ್ಯೆ ಮಣೆಯ ಮೇಲೆ ಅಕ್ಕಿ ಹದಿನಾರು ದಳದ ಚಿತ್ರವನ್ನು ಕುಂಕುಮದಿಂದ ಬರೆಯಬೇಕು.

ನಂತರ ಕಳಶವನ್ನು ಇಟ್ಟು ಮುಖವನ್ನು ಇಟ್ಟು ಆಭರಣದ ಅಲಂಕಾರ ಮಾಡಿ, ಇನ್ನು ಕೆಲವರ ಮನೆಯಲ್ಲಿ ಕಲಶದ ಬದಲು ಗೌರಿಗೊಂಬೆಯನ್ನು ಕುಡಿಸುತ್ತೀರಾ, ಕೆಲವರು ಅರಿಷಿಣ ಗೌರಿ ಮಾಡಿ ಪೂಜಿಸುತ್ತೀರಾ, ನಿಮ್ಮ ಮನೆಯ ಪದ್ದತಿ ಕಲಶ ಕೂಡಿಸುವವರು ಕಲಶದಲ್ಲಿ ನೀರು ಹಾಕಬಹುದು, ಇಲ್ಲ ಧಾನ್ಯವನ್ನು ಸಹ ಹಾಕಬಹುದು ಅರಿಶಿನ ಕುಂಕುಮ, ಅಡಿಕೆ ಬೆಟ್ಟ ದಕ್ಷಿಣೆ, ಅಕ್ಷತೆ ಹಾಕಿ ಕಲಶದ ಸುತ್ತಲೂ ಐದು ಎಲೆಯನ್ನು ತೆಂಗಿನಕಾಯಿ ಇಡಬೇಕು, ಜುಟ್ಟು ಇಲ್ಲದ ತೆಂಗಿನಕಾಯಿ ಇಡಬಾರದು ನಂತರ ಆಭರಣ ಅಲಂಕಾರ ಮಾಡಿ ಇನ್ನು ಮೇಲೆ ಪೂಜೆ ಶುರು ನೀವು ಆಸನದ ಮೇಲೆ ಕೂತು ಚಾಪೆ ಅಥವಾ ಮಣೆ ಪೂಜೆ ಮಾಡಿ ನೆಲದ ಮೇಲೆ ಕೂಡಬಾರದು ಆವೆರಡು ಇಲ್ಲದ ಪಕ್ಷದಲ್ಲಿ ನೀರಿನಿಂದ ಚೌಕಾಕಾರದ ಮಂಡಲ ಮಾಡಿಕೊಳ್ಳಿ.

ಹದಿನಾರು ಎಳೆಯದಾರವನ್ನು ಹಾಲು ಅರಿಷಿಣ ಕಲಿಸಿ ಅದರಲ್ಲಿ ನೆನೆಸಿ ದೇವಿಯ ಸಮೀಪದಲ್ಲಿ ಒಂದು ವಿಳೆದೆಲೆಯ ಮೇಲಿಟ್ಟು ಪೂಜಿಸತಕ್ಕದ್ದು.

ಆಚಮನೆ ಮಾಡಿ : ಸಂಕಲ್ಪ ಏವಂಗುಣ ತದಗಿತಿತೌ ಮಮ ಯಾವಜ್ಜೀವ ಸೌಮಂಗಲ್ಯಾಬಿವ್ರದ್ಯರ್ಥಂ ಧೀರ್ಘ ಸೌಮಂಗಲ್ಯತಾ ಸಿದ್ಧಾರ್ಥಮ್ ಪುತ್ರ ಪೌತ್ರಾದಿ ಅಭಿವೃದ್ಯರ್ಥಂ ವರ್ಷೇವರ್ಷೇ ಕರ್ತವ್ಯಂ ಕಲ್ಪೋಕ್ತ ಪ್ರಕಾರೇಣ ದ್ಯಾನಾವಾಹನಾದಿ ಶ್ರೀ ಸ್ವರ್ಣ ಗೌರಿವ್ರತ ಮ್ ಕರಿಷ್ಯೇ ಅಂತ ಬಲಗೈಯಲ್ಲಿ ಅಕ್ಷತೆ ಹಿಡಿದು ಕಲಶದಿಂದ ಒಂದು ಸೌಟು ನೀರು ಬಿಡಬೇಕು.

ಮೊದಲು ಮಂಟಪ ಪೂಜೆ : ಚತುರ್ ದ್ವಾರ ಸ್ಥಿತ ದ್ವಾರಪಾಲಾದಿ ದೇವತಾಭ್ಯೋನಮಃ ಧ್ಯಾನಾದಿ ಉಪಚಾರಾನ್ ಸಮರ್ಪಯಾಮಿ ಇತಿ ದ್ವಾರ ಪಾಲಾದೀನ್ ಅಭ್ಯರ್ಚ್ಯ [ಮಂಟಪದ ಒಳಗೆ ನಾಲ್ಕು ದಿಕ್ಕಿಗೂ ಹೂವು ಇಡುವುದು]

LEAVE A REPLY

Please enter your comment!
Please enter your name here