ರಾಜ್ಯದಲ್ಲಿ ಇರುವ ಸಮಸ್ಯೆಗಳ ಬಗ್ಗೆ ವಾಟಾಳ್ ನಾಗರಾಜ್ ಅವರು ಮೊದಲಿನಿಂದಲೂ ವಿವಿಧ ರೀತಿಯ ಪ್ರತಿಭಟನೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ, ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಗಳು ಮಾಡುವುದು ಇವರ ಒಂದು ವೈಶಿಷ್ಟ್ಯ, ಈ ಮೂಲಕವೇ ಕರ್ನಾಟಕದ ಜನರ ಮನೆಮಾತಾಗಿದ್ದಾರೆ.
ಈ ಬಾರಿಯೂ ಕೂಡ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಏಕಾಂಗಿಯಾಗಿ ರಸ್ತೆ ಮಧ್ಯೆ ಮಲಗಿ ತಮ್ಮ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ, ಬೆಂಗಳೂರಿನ ಮೈಸೂರ್ ಸರ್ಕಲ್ ರಸ್ತೆ ಮಧ್ಯೆ ಮಲಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು, ಪ್ರತಿಭಟನೆಯ ಕಾರಣ ರಾಜ್ಯ ಸರ್ಕಾರ ಕರೋನವೈರಸ್ ತಡೆಯುವುದರಲ್ಲಿ ವಿಫಲವಾಗಿದೆ ಎಂದು ತೀವ್ರವಾಗಿ ಖಂಡಿಸಿದರು.
ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಪ್ರತಿದಿನ ಕರ್ನಾಟಕದಲ್ಲಿ ನೂರಕ್ಕೂ ಅಧಿಕ ಮಂದಿ ತಮ್ಮ ಜೀವ ಕಳೆದುಕೊಳ್ಳುತ್ತಿದ್ದು, ಬಡವರಿಗೆ ಚಿಕಿತ್ಸೆ ಕೊಡುವುದರಲ್ಲಿ ಹಾಗೂ ಖಾಸಗಿ ಆಸ್ಪತ್ರೆಗಳ ಅತಿ ಹೆಚ್ಚು ಆಸ್ಪತ್ರೆ ದರಗಳ ಮೇಲೆ ಕಡಿವಾಣ ಹಾಕುವುದರಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ, ಎಂದು ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.