ಕಲರ್ಸ್ ವಾಹಿನಿಗೆ ಎರೆಡು ವರ್ಷ. ಅರೆ ಇದೇನು ಅಂತೀರಾ. ನೀವೇ ನೋಡಿ.

0
1211

ಕನ್ನಡದ ಹೆಸರಾಂತ ಚಾನೆಲ್ ಕಲರ್ಸ್ ಕನ್ನಡಕ್ಕೆ ಎರಡು ವರ್ಷ ತುಂಬಿದೆ. ಈಟಿವಿಯಿಂದ ಕಲರ್ಸ್ ಕನ್ನಡ ಎಂದು ಬದಲಾಗಿ ಸರಿಸುಮಾರು ಹತ್ತು ವರ್ಷವಾಯಿತು. ಅಲ್ಲ ಇದೇನು ಎರಡು ವರ್ಷ ಎಂದು ಹೇಳುತ್ತಿದ್ದಾರೆ ಅಂತ ಅಂದುಕೊಳ್ಳುತ್ತಿದ್ದೀರಾ. ನಿಮ್ಮ ಸಂದೇಹ ಸರಿಯಾಗಿಯೇ ಇದೆ. ಎರಡು ವರ್ಷ ತುಂಬುತ್ತಿರುವುದು ಕಲರ್ಸ್ ಕನ್ನಡದ ಮತ್ತೊಂದು ಪ್ರಖ್ಯಾತ ಚಾನೆಲ್ ಕಲರ್ಸ್ ಕನ್ನಡ ಸಿನಿಮಾ ವಾಹಿನಿಗೆ.

ಹೌದು, 2018 ಸೆಪ್ಟೆಂಬರ್ 24 ರಂದು ವಿಶ್ವದಾದ್ಯಂತ ತನ್ನ ಹೊಸ ಚಾನೆಲ್ ಅನ್ನು ಕಲರ್ಸ್ ಕನ್ನಡವು ಪರಿಚಯಿಸಿತು. ಅದೇ ಕಲರ್ಸ್ ಕನ್ನಡ ಸಿನಿಮಾ. ಈಟಿವಿ ಇರುವಾಗಲೇ ಸರಿ. ಸುಮಾರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದ್ದ ಈ ಟಿವಿ ಕನ್ನಡ, ತನ್ನ ಸಂಪೂರ್ಣ ಬ್ರಾಡ್ಕಾಸ್ಟಿಂಗ್ ಹಕ್ಕನ್ನು ಕಲರ್ಸ್’ಗೆ ವಹಿಸಿದ ನಂತರ ಈಟಿವಿ ಕನ್ನಡ ತನ್ನದೇ ಆದ ಹೊಸ ಛಾಪನ್ನು ಪಡೆದುಕೊಂಡಿತ್ತು. ಅದೇ ಕಲರ್ಸ್ ಕನ್ನಡ.

ಕೆಲವು ವರ್ಷಗಳ ನಂತರ ಅಂದರೆ 2018ರಲ್ಲಿ ಸರಿ ಸುಮಾರು 400ಕ್ಕೂ ಹೆಚ್ಚು ಚಿತ್ರಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದ್ದ ಕಲರ್ಸ್ ಕನ್ನಡ ವಾಹಿನಿಯು ತನ್ನದೇ ಆದಂತಹ ಒಂದು ಹೊಸ ಸಿನಿಮಾ ಚಾನಲನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಿತು. ಆಗ ಉಗಮವಾದ ವಾಹಿನಿಯೇ ಕಲರ್ಸ್ ಕನ್ನಡ ಸಿನಿಮಾ. ಸರಿಸುಮಾರು ಮುನ್ನೂರಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡುವ ಈ ವಾಹಿನಿಯಲ್ಲಿ ಎಡಿಟಿಂಗ್ ಡಿಪಾರ್ಟ್ಮೆಂಟ್ ನಿಂದ ಹಿಡಿದು ಬ್ರಾಡ್ಕಾಸ್ಟಿಂಗ್ ಡಿಪಾರ್ಟ್ಮೆಂಟ್ ನ ವರೆಗೂ ಪ್ರತಿಯೊಬ್ಬರೂ ಪರಿಣಿತರ ಕೆಲಸ ಮಾಡುತ್ತಿದ್ದಾರೆ.

ಕನ್ನಡದ ಹೆಸರಾಂತ ಹಾಗೂ ಬ್ಲಾಕ್ಬಸ್ಟರ್ ಚಿತ್ರಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಕಲರ್ಸ್ ಕನ್ನಡ ವಾಹಿನಿ, ಹೊಸ ಚಾನಲ್’ನಲ್ಲಿ ಹಲವಾರು ಪ್ರೀಮಿಯರ್ ಮೂವಿಗಳನ್ನು ಟೆಲಿಕಾಸ್ಟ್ ಮಾಡಿದೆ. ಜೊತೆಗೆ ಬೊಂಬೆ ಹೇಳುತೈತೆ, ಒಂದು ಸಿನಿಮಾ ಕಥೆ, ಹೀಗೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಈ ವಾಹಿನಿಯ ನಾಳೆಗೆ, ಅಂದರೆ 24 ಸೆಪ್ಟೆಂಬರ್’ಗೆ ಎರಡು ವರ್ಷಗಳನ್ನು ಪೂರೈಸುತ್ತಿದೆ.

ಒಂದು ವಾಹಿನಿಯು ಇದ್ದಮೇಲೆ ಆ ವಾಹಿನಿಗೆ ಒಬ್ಬ ಕಂಠದಾನ ಕಲಾವಿದ ಇರಲೇಬೇಕು. ಅಂದರೆ ಮುಂಬರುವ ಕಾರ್ಯಕ್ರಮಗಳ ಹಿನ್ನೆಲೆ ಧ್ವನಿಯ ನಿರೂಪಣೆಗೆ ಕಂಠದಾನ ಎಂದು ಹೇಳುತ್ತಾರೆ. ಕಂಠದಾನಕ್ಕಾಗಿ, ಅಂದರೆ ವಾಯ್ಸ್ ಓವರ್ ಆಕ್ಟರ್’ಗಾಗಿ ಉತ್ತಮ ಕಂಠದ ಹುಡುಕಾಟದಲ್ಲಿದ್ದ ವಾಹಿನಿಗೆ ಹಲವಾರು ಆಡಿಶನ್ಸ್ ನಂತರ ಸಿಕ್ಕ ಯುವ ಪ್ರತಿಭೆ ಮನೋಜ್ ಶರ್ಮ. ಕನ್ನಡ ಕಿರುತೆರೆಯಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನವರಾಗಿರುವ ಮನೋಜ್ ಶರ್ಮಾ ಅವರ ಧ್ವನಿಯು ಉತ್ತಮವೆಂದು ಆಯ್ದ ವಾಹಿನಿ ಇಂದಿಗೂ ಹಚ್ಚ ಹಸಿರಾಗಿ ಕೇಳುವಂತೆ ವಿವಿಧ ರೀತಿಯ ಏರಿಳಿತಗಳೊಂದಿಗೆ ವಿಭಿನ್ನ ರೀತಿಯ ಧ್ವನಿ ಪ್ರಯೋಗಗಳನ್ನು ಮನೋಜ್ ಶರ್ಮಾ ಮಾಡುತ್ತಲೇ ಇರುತ್ತಾರೆ.

ಹೀಗೆಯೇ ತನ್ನ ವಿಭಿನ್ನ ಚಿತ್ರಗಳಿಂದ ಸತತ ಎರಡು ವರ್ಷಗಳನ್ನು ಪೂರೈಸಿರುವ ಕಲರ್ಸ್ ಕನ್ನಡ ಸಿನಿಮಾ ವಾಹಿನಿಯು ಮೂರನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಇದಕ್ಕೆ ಸ್ಪರ್ಧೆ ಎಂಬಂತೆ ಉದಯವಾಹಿನಿ, ಉದಯ ಮೂವೀಸ್, ಜಿ ಪಿಕ್ಚರ್, ಪಬ್ಲಿಕ್ ಮೂವೀಸ್ ವಾಹಿನಿಗಳು ಪೈಪೋಟಿ ನಡೆಸುತ್ತಲೇ ಇರುತ್ತವೆ. ಆದರೂ ವಿವಿಧ-ವಿಶೇಷ ಸಿನಿಮಾಗಳಿಂದ ಕಲರ್ಸ್ ಕನ್ನಡ ವಾಹಿನಿಯ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಈ ವಾಹಿನಿಯೂ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಹೊಸ ಹೊಸ ಸಿನಿಮಾಗಳನ್ನು ಕಿರುತೆರೆಯ ಮೇಲೆ ತರಲಿ ಎಂಬುದೇ ನೋಡುಗರ ಆಶಯವಾಗಿದೆ.

LEAVE A REPLY

Please enter your comment!
Please enter your name here