ಈ ಖ್ಯಾತ ಹಿಂದಿ ಧಾರಾವಾಹಿಯು ತನ್ನ ಎರೆಡು ದಿನದ ಎಪಿಸೋಡ್ ಗಳನ್ನು ಗಾನ ಗಂಧರ್ವರಿಗೆ ಅರ್ಪಿಸಿದೆ.

0
1676

ನಮಸ್ಕಾರ ಪ್ರಿಯ ಓದುಗರೇ. ಎಲ್ಲರೂ ಕ್ಷೇಮವಾಗಿ, ಆರೋಗ್ಯವಾಗಿ ಇದ್ದೀರಿ ಎಂದು ಭಾವಿಸುತ್ತೇವೆ. ಇಂದಿನ ನಮ್ಮ ವಿಷಯ ಏನಪ್ಪಾ ಅಂದ್ರೆ, ನಮ್ಮೆಲ್ಲರ ಅಚ್ಚುಮೆಚ್ಚಿನ ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಜಲಿ ಅರ್ಪಿಸುವ ಸಲುವಾಗಿ ಈ ಒಂದು ಖ್ಯಾತ ಸೀರಿಯಲ್ ತನ್ನ ಎರೆಡು ಎಪಿಸೋಡ್ ಗಳನ್ನು ಅವರಿಗಾಗಿ ಮುಡಿಪಾಗಿಟ್ಟಿದ್ದು. ಹಿಂದಿಯ ಖ್ಯಾತ ಕಾಮಿಡಿ ಸೀರಿಯಲ್ ಆದ ತಾರಕ್ ಮೇಹೆತಾ ಕಾ ಉಲ್ಟಾ ಚಶ್ಮ ಎಂಬ ಒಂದು ಸೀರಿಯಲ್ ನಲ್ಲಿ ನಮ್ಮ ಭಾರತದ ಹೆಮ್ಮೆಯ ಗಾಯಕ, ಗಾನ ಕೋಗಿಲೆ, ಸರಸ್ವತೀ ಪುತ್ರರಾದ ಎಸ್. ಪಿ. ಬಿ ಅವರಿಗೋಸ್ಕರ ಅವರ ಹಾಡುಗಳನ್ನೆಲ್ಲಾ ನೆನೆಸಿಕೊಂಡು ಅವರ ಕೆಲವು ಅಧ್ಬುತ ಗೀತೆಗಳನ್ನು ಆಯ್ದುಕೊಂಡು ಎರೆಡು ದಿನದ ಎಪಿಸೋಡ್ ಒಂದನ್ನು ಅವರಿಗಾಗಿ ಅರ್ಪಿಸಿದ್ದಾರೆ.

ಅಲ್ಲದೆ ಅವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನಮ್ಮೊಟ್ಟಿಗೆ ತಮ್ಮ ಹಾಡುಗಳ ಮೂಲಕ ಜೀವಂತವಾಗಿದ್ದಾರೆ ಎಂದು ಸಹ ತೋರಿಸಿದ್ದಾರೆ. ಇದು ಎಷ್ಟು ಖ್ಯಾತ ಸೀರಿಯಲ್ ಎಂದು ನಮ್ಮೆಲ್ಲರಿಗೂ ಗೊತ್ತು. ಈ ಧಾರಾವಾಹಿಯಲ್ಲಿ ಇಡೀ ಭಾರತದ ಎಲ್ಲಾ ಜಾ’ತಿ, ಮ’ತ, ಪಂ’ಥಗಳು ಒಂದೇ. ನಾವೆಲ್ಲರೂ ಒಂದೇ. ಎಲ್ಲರೂ ಕೂಡಿ ಬಾಳಿದರೆ ಅದೇ ಸ್ವರ್ಗ ಎಂಬಂತೆ ಎಲ್ಲಾ ಪ್ರಾಂತ್ಯದ ಕುಟುಂಬಗಳನ್ನು ಸೇರಿಸಿಕೊಂಡು ನಾವೆಲ್ಲರೂ ಕೂಡಿ ಬಾಳಬೇಕು ಎಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಗುಜರಾತಿ, ಪಂಜಾಬಿ, ತಮಿಳಿಯನ್, ಮರಾಠಿ, ಬೆಂಗಾಲಿ ಹೀಗೆ ಎಲ್ಲಾ ರೀತಿಯ ಕುಟುಂಬಗಳನ್ನು ಸಹ ನಾವು ನೋಡಬಹುದು.

ಯಾವುದೋ ಒಂದು ಎಪಿಸೋಡ್ ನಲ್ಲಿ ನಮ್ಮ ಕನ್ನಡ ಭಾಷೆಯ ಪ್ರಯೋಗ ಕೂಡ ಆಗಿತ್ತು. ಈ ಧಾರಾವಾಹಿ ಎಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ, ಇದರ ಫ್ಯಾನ್ಸ್ ಇಡೀ ಭಾರತದ ಎಲ್ಲಾ ಪ್ರಾಂತ್ಯದಲ್ಲೂ ಇದ್ದಾರೆ. ಒಂದು ಕಾಮಿಡಿ ಧಾರಾವಾಹಿಯಲ್ಲಿ ಬರೀ ತಮಾಷೆ ಅಲ್ಲದೇ ಹಲವಾರು ಉಪಯುಕ್ತ ಮಾಹಿತಿಗಳನ್ನು ತನ್ನ ವಿಷಯವಾಗಿ ಇಟ್ಟುಕೊಂಡು ಕಥೆಗಳನ್ನು ಮಾಡುತ್ತಾರೆ. ಇದಲ್ಲದೆ ಎಷ್ಟೋ ವಿಚಾರಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಜನರನ್ನು ಒಳ್ಳೆಯ ಕೆಲಸಗಳನ್ನು ಮಾಡುವತ್ತ ಪ್ರೇರೇಪಿಸಿ ಗಮನ ಸೆಳೆಯುತ್ತಾರೆ.

ಕಳೆದ 12 ವರ್ಷಗಳಿಂದ ಈ ಧಾರಾವಾಹಿ ಪ್ರಬಲವಾಗಿದೆ. ಇದು ನೈಜ ಜಗತ್ತಿನಲ್ಲಿ ನಡೆಯುತ್ತಿರುವ ಸನ್ನಿವೇಶಗಳನ್ನು ಪ್ರತಿಬಿಂಬಿಸಲು ಹೆಸರುವಾಸಿಯಾಗಿದೆ. ಕೊ’ರೋನವೈ’ರಸ್ ಸಾಂ’ಕ್ರಾಮಿಕದ ಮಧ್ಯೆ ಪ್ರದರ್ಶನವು ಮತ್ತೆ ಚಿತ್ರೀಕರಣ ಪ್ರಾರಂಭಿಸಿದಾಗಿನಿಂದಲೂ ಕೂಡ, ಇದು ಪ್ರೇಕ್ಷಕರಲ್ಲಿ ವೈ’ರಸ್ ಬಗ್ಗೆ ಅವರ ಚ’ಮತ್ಕಾರಿ ರೀತಿಯಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಇತ್ತೀಚೆಗೆ, ಪ್ರದರ್ಶನವು 3000 ಸಂಚಿಕೆಗಳನ್ನು ಸಹ ಪೂರ್ಣಗೊಳಿಸಿತು.

ಇದರೊಂದಿಗೆ, ಭಾರತದ ಹೆಚ್ಚು ಇಷ್ಟವಾದ ಟೆಲಿವಿಷನ್ ಧಾರಾವಾಹಿ ತನ್ನ 12 ವರ್ಷಗಳ ಓಟದ 13 ನೇ ವರ್ಷವನ್ನು ಪ್ರವೇಶಿಸಿತು. ಪ್ರದರ್ಶನದ ಯಶಸ್ಸಿಗೆ ಭಾರತೀಯ ಸಮಾಜದೊಂದಿಗೆ ಅದರ ನಿಕಟ ಸಂಪರ್ಕವಿದೆ, ಅದು ಅದರ ಕಥಾಹಂದರ ಮತ್ತು ಅದರ ಪಾತ್ರಗಳ ಮೂಲಕ ಪ್ರತಿನಿಧಿಸುತ್ತದೆ. ಆಶ್ಚರ್ಯವೇನಿಲ್ಲ, ಪ್ರದರ್ಶನದ ಗೋಕುಲ್ಧಾಮ್ ಸೊಸೈಟಿಯನ್ನು ಸ್ವತಃ ಹೆಗ್ಗುರುತಾಗಿ ಮಾರ್ಪಡಿಸಲಾಗಿದೆ, ಇದನ್ನು ಸಾಮಾನ್ಯವಾಗಿ ‘ಮಿನಿ ಇಂಡಿಯಾ’ ಎಂದು ಕರೆಯಲಾಗುತ್ತದೆ.

ಎಸ್.ಪಿ.ಬಿ ಅವರಿಗಾಗಿ ಅರ್ಪಿಸುವ ಆ ಎರೆಡು ಎಪಿಸೋಡ್ ಗಳು ಕಳೆದ ಗುರುವಾರ ಹಾಗೂ ಶುಕ್ರವಾರದಂದು ಪ್ರಸಾರವಾಗಿತ್ತು. ಕಡೆಯದಾಗಿ ಎಸ್.ಪಿ.ಬಿ ಅವರ ಮಾತೃಭಾಷೆಯಾದ ತಮಿಳಿನ ಒಂದು ಸುಂದರ ಹಾಡಿನಿಂದ ಅವರಿಗೆ ನಮನ ಸಲ್ಲಿಸಿದರು. ಧಾರಾವಾಹಿಯಲ್ಲಿ, ಅದರಲ್ಲೂ ಹಿಂದಿಯ ಒಂದು ಟಾಪ್ ಧಾರಾವಾಹಿಯಲ್ಲಿ ನಮ್ಮ ದೇಶದ ಹೆಮ್ಮೆಯ ಪುತ್ರನಿಗೆ ನಮನ ಸಲ್ಲಿಸಿರುವುದು ಇಲ್ಲಿಯ ವಿಶೇಷವಾಗಿದೆ.

ಮನುಷ್ಯ ಬದುಕಿದ್ದಾಗ ತನ್ನ ಕೈಯಲ್ಲಿ ಆಗುವಷ್ಟು ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಎಲ್ಲರಿಗೂ ಖುಷಿಯನ್ನು ಹಂಚುವ ಕೆಲಸ ಮಾಡಬೇಕು ಎಂದು ತನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಎಸ್. ಪಿ. ಬಿ ಅವರು ಹಾಗೆಯೇ ಬದುಕಿದರು. ಅವರ ಜೀವನ ಹಾಗೂ ಸಾಧನೆ ನಮಗೆಲ್ಲಾ ಉದಾಹರಣೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇಡೀ ಭಾರತದಲ್ಲೇ ಎಲ್ಲರಿಗೂ ಇಷ್ಟ ಆಗೋ ಒಬ್ಬ ವ್ಯಕ್ತಿ ಇವರು. ಇಂತಹ ಸಾಧಕರಿಗೆ ಒಂದು ದೊಡ್ಡ ಪ್ರಣಾಮಗಳು.

LEAVE A REPLY

Please enter your comment!
Please enter your name here