ಇಂದು ಬಹಳ ವಿಶೇಷವಾದ ದಿನ. ಶ್ರೀರಾಮ ಹಾಗೂ ಶ್ರೀಕೃಷ್ಣನಿಗೆ ರಾಮಚಂದ್ರ ಹಾಗೂ ಕೃಷ್ಣಚಂದ್ರ ಎನ್ನುವ ಹೆಸರು ಬರಲು ಕಾರಣವೇನು.

0
1647

ಕೋಜಾಗರಿ ಹುಣ್ಣಿಮೆ (ಶರದ ಪೂರ್ಣಿಮೆ) ಈ ದಿನವೇ ಶ್ರೀಕೃಷ್ಣನು ವ್ರಜಮಂಡಲದಲ್ಲಿ ರಾಸಕ್ರೀಡೆಯನ್ನಾಡಿದನೆಂದು ಶ್ರೀಮದ್‌ಭಾಗವತದಲ್ಲಿ ಹೇಳಲಾಗಿದೆ. ಮಹತ್ವ : ಈ ದಿನ ಚಂದ್ರನು ಭೂಮಿಗೆ ಅತ್ಯಂತ ಸಮೀಪ ಬಂದಿರುತ್ತಾನೆ, ಆದುದರಿಂದ ಅವನು ದೊಡ್ಡದಾಗಿ ಕಾಣಿಸುತ್ತಾನೆ. ಮೂಲ ಚಂದ್ರತತ್ತ್ವದ ಅಂದರೆ, ‘ಚಂದ್ರಮ’ನನ್ನು ಪ್ರತಿನಿಧಿಸುವ ಮತ್ತು ನಮಗೆ ಕಾಣಿಸುವ ಚಂದ್ರನು, ‘ಚಂದ್ರಮ’ನಂತೆಯೇ ಶೀತಲ ಹಾಗೂ ಆಹ್ಲಾದದಾಯಕವಾಗಿದ್ದಾನೆ. ಸಾಧಕರು ಚಂದ್ರನ ಶೀತಲತೆಯನ್ನು ಈಶ್ವರನ ಅವತಾರಗಳಿಂದ ಅನುಭವಿಸಬಲ್ಲರು.

ಆದುದರಿಂದಲೇ ರಾಮಚಂದ್ರ, ಕೃಷ್ಣಚಂದ್ರ ಎನ್ನುವ ಹೆಸರುಗಳನ್ನು ರಾಮ-ಕೃಷ್ಣರಿಗೆ ಕೊಡಲಾಗಿದೆ. ಚಂದ್ರನ ಈ ಗುಣದಿಂದಲೇ ‘ನಕ್ಷತ್ರಾಣಾಮಹಂ ಶಶಿ’ ಅಂದರೆ ‘ನಕ್ಷತ್ರಗಳಲ್ಲಿ ನಾನು ಚಂದ್ರನಾಗಿದ್ದೇನೆ’ ಎಂದು ಭಗವಾನ ಶ್ರೀಕೃಷ್ಣನು ಶ್ರೀಮದ್‌ಭಗವದ್ಗೀತೆ ಯಲ್ಲಿ (೧೦:೨೧) ಹೇಳಿದ್ದಾನೆ. ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ.

ಉತ್ಸವವನ್ನು ಆಚರಿಸುವ ಪದ್ಧತಿ : ಈ ದಿನ ನವಾನ್ನ (ಹೊಸತಾಗಿ ಬೆಳೆದ ಧಾನ್ಯದಿಂದ) ಊಟವನ್ನು ಮಾಡುತ್ತಾರೆ. ಶ್ರೀ ಲಕ್ಷ್ಮೀ ಮತ್ತು ಐರಾವತದ ಮೇಲೆ ಕುಳಿತ ಇಂದ್ರನ ಪೂಜೆಯನ್ನು ಮಾಡುತ್ತಾರೆ. ಪೂಜೆಯಾದ ಮೇಲೆ ಅವಲಕ್ಕಿ ಮತ್ತು ಎಳನೀರನ್ನು ದೇವರಿಗೆ ಮತ್ತು ಪಿತೃಗಳಿಗೆ ಸಮರ್ಪಿಸಿ ನಂತರ ನೈವೇದ್ಯವೆಂದು ಸೇವಿಸುತ್ತಾರೆ. ಮತ್ತು ತಮ್ಮ ಕಡೆಗೆ ಬಂದವರಿಗೆಲ್ಲರಿಗೂ ಪ್ರಸಾದವೆಂದು ಕೊಡುತ್ತಾರೆ. ಶರದ ಋತುವಿನ ಪೂರ್ಣಿಮೆಯ ಸ್ವಚ್ಛ ಬೆಳದಿಂಗಳಿನಲ್ಲಿ ಚಂದ್ರನಿಗೆ ಕುದಿಸಿ ಗಟ್ಟಿ ಮಾಡಿದ ಹಾಲಿನ ನೈವೇದ್ಯವನ್ನು ಮಾಡುತ್ತಾರೆ, ಆಮೇಲೆ ನೈವೇದ್ಯವೆಂದು ಆ ಹಾಲನ್ನು ಸೇವಿಸುತ್ತಾರೆ.

ಚಂದ್ರನ ಪ್ರಕಾಶದಲ್ಲಿ ಒಂದು ವಿಧದ ಆಯುರ್ವೇದಿಯ ಶಕ್ತಿಯಿದೆ. ಆದ್ದರಿಂದಾಗಿ ಈ ಹಾಲು ಆರೋಗ್ಯದಾಯಕವಾಗಿದೆ. ಈ ರಾತ್ರಿ ಜಾಗರಣೆ ಮಾಡುತ್ತಾರೆ. ಮನೋರಂಜನೆಗಾಗಿ ಕುಳಿತು ಆಡುವ ವಿವಿಧ ಆಟಗಳನ್ನು ಆಡುತ್ತಾರೆ. ಮರುದಿನ ಬೆಳಗ್ಗೆ ಪೂಜೆಯ ಪಾರಣೆ(ಉಪವಾಸವನ್ನು ಬಿಡುವುದು)ಯನ್ನು ಮಾಡುತ್ತಾರೆ. ಭಾವಾರ್ಥ : ಕೋಜಾಗರಿಯ ರಾತ್ರಿ ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿರುತ್ತಾರೆಯೋ, ಅವರಿಗೆ ಮಾತ್ರ ಅಮೃತಪ್ರಾಶನದ ಲಾಭವು ದೊರೆಯುತ್ತದೆ.

ಕೋಜಾಗರ = ಕೋ + ಓಜ + ಆಗರ. ಈ ದಿನದಂದು ಎಲ್ಲರಿಗೂ ಚಂದ್ರನ ಕಿರಣಗಳಿಂದ ಆತ್ಮಶಕ್ತಿರೂಪೀ (ತೇಜಸ್ಸು) ಆನಂದ, ಆತ್ಮಾನಂದ, ಬ್ರಹ್ಮಾನಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಆದರೆ ಈ ಅಮೃತಪ್ರಾಶನ ಮಾಡಲು ‘ಕೋ ಜಾಗ್ರತಿ’, ಅಂದರೆ ‘ಯಾರು ಜಾಗೃತರಾಗಿದ್ದಾರೆ ಯಾರು ಎಚ್ಚರಿಕೆಯಿಂದ ಇದ್ದಾರೆ, ಯಾರು ಇದರ ಮಹತ್ವವನ್ನು ಅರಿತಿದ್ದಾರೆ, ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿದ್ದಾರೆಯೋ ಮತ್ತು ಯಾರಿಗೆ ಇದರ ಮಹಾತ್ಮೆಯು ತಿಳಿದಿದೆಯೋ, ಅವರಿಗೆ ಮಾತ್ರ ಈ ಅಮೃತಪ್ರಾಶನದ ಲಾಭ ದೊರೆಯುತ್ತದೆ ಎಂದು ಋಷಿಗಳು ಹೇಳುತ್ತಾರೆ.’

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ. ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ. ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಕರೆ ಮಾಡಿ 95350 04448.
ಮದುವೆ ವಿಳಂಬ, ದಾಂಪತ್ಯದಲ್ಲಿ ಕಲಹ, ಆರೋಗ್ಯ, ಸ್ತ್ರೀ ಪುರುಷಾ ಪ್ರೇಮ ವಿಚಾರ, ಡೈವರ್ಸ್ ಪ್ರಾಬ್ಲಮ್, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿಯಲ್ಲಿ ನಂಬಿ ಮೋಸ, ಶತ್ರು ಕಾಟ, ಮಾ’ಟ ಮಂತ್ರದಂತಹ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ

LEAVE A REPLY

Please enter your comment!
Please enter your name here