ಬೆರಳುಗಳ ಮೇಲಿನ ಮಚ್ಚೆಗಳು. ಬಲಗೈ ಹೆಬ್ಬೆರಳಿನ ಮೇಲೆ ಮಚ್ಚೆಗಳಿರುವವರು ಗಂಭೀರ ಸ್ವಭಾವವುಳ್ಳವರು. ಇವರೊಂದಿಗೆ ವಾದ ಮಾಡಿ ಗೆಲ್ಲುವುದು ಕಷ್ಟ. ತಾವು ಆಡಿದ ಮಾತೇ ಸರಿ ಎಂದು ವಾದಿಸಿಯಾರು. ತೋರು ಬೆರಳಿನ ಮೇಲೆ ಮಚ್ಚೆ ಉಳ್ಳವರು ಒಳ್ಳೆಯ ಸ್ವಭಾವವುಳ್ಳವರಲ್ಲ. ಇವರಿಗೆ ಪರಸ್ತ್ರೀಯರಲ್ಲಿ ಆಸಕ್ತಿ: ತಪ್ಪು ಮಾಡಿ ಸಿಕ್ಕಿಹಾಕಿಕೊಂಡು ಶಿಕ್ಷೆಯನ್ನೂ ಅನುಭವಿಸುವರು.
ಮಧ್ಯದ ಬೆರಳಿನ ಮೇಲೆ ಮಚ್ಚೆಯಿದ್ದರೆ, ಇವರು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಸಾಧಾರಣ ಜೀವನ ನಡೆಸುತ್ತಾರೆ. ಇವರ ಬಗ್ಗೆ ಜನರ ಅಭಿಪ್ರಾಯ ಚೆನ್ನಾಗಿರುತ್ತದೆ.ಉಂಗುರದ ಬೆರಳಿನ ಮೇಲೆ ಇರುವ ಮಚ್ಚಿ ಶುಭಸೂಚಕ. ಇಂತಹ ವ್ಯಕ್ತಿಗಳು ಕೀರ್ತಿಯಲ್ಲಿ ಆಸಕ್ತಿಯುಳ್ಳವರು. ಬಟ್ಟೆಬರೆಗಳಲ್ಲಿ ತುಂಬ ಆಸಕ್ತಿ ಇವರಿಗಿದ್ದಿತು. ಜೀವನ ಸೌಲಭ್ಯಗಳನ್ನು ಹೇಗೊ ಸಂಪಾದಿಸಿಕೊಂಡು ಸುಖ ಜೀವನ ನಡೆಸಬಲ್ಲರು. ಇವರಿಗೆ ಜನಮನ್ನಣೆ ದೊರೆಯುತ್ತದೆ.
ಕಿರುಬೆರಳಿನ ಮೇಲೆ ಮಚ್ಚೆಯಿದ್ದವರು ಸದಾ ಶುಚಿಯಾಗಿದ್ದು ನೋಡಿದವರು ಮೆಚ್ಚುವಂತೆ ನಡೆದುಕೊಳ್ಳುವರು. ಬೆನ್ನು ಭುಜ ಹಸ್ತದಲ್ಲಿರುವ ಮಚ್ಚೆಗಳು : ಬೆನ್ನಿನ ಮೇಲೆ ಮಚ್ಚೆಯಿರುವುದು ಧೈರ್ಯ ಸಾಹಸದ ಕುರುಹು. ಇವರು ಸದ್ಗುಣವಂತರೂ, ಕೀರ್ತಿವಂತರೂ ಆಗಿರುತ್ತಾರೆ. ಬೆನ್ನಿನ
ಮಧ್ಯಭಾಗದ ಮಚ್ಚೆ ಅತ್ಯಂತ ಒಳ್ಳೆಯ ಲಕ್ಷಣ. ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಈ ಮಚ್ಚೆಯುಳ್ಳ ವ್ಯಕ್ತಿಗಳು ಮುಂದಾಳುಗಳಾಗಿ ಕಾರ್ಯನಿರ್ವಹಿಸಿ ಜಯಸಾಧಿಸಿ ಕೀರ್ತಿಗಳಿಸುವರು.
ಇವರ ಮಾತಿಗೆ ಬದಲಿಲ್ಲದೆ ಎಲ್ಲರೂ ಇವರು ಹೇಳಿದಂತೆಯೇ ನಡೆಯುತ್ತಾರೆ. ಬೆನ್ನಿನ ಬಲಭಾಗದಲ್ಲಿನ ಮಚ್ಚೆ ಶರೀರ ಬಲದ ಸೂಚಕವಾಗಿದೆ.
ಹಣೆಯ ಮೇಲಿನ ಬೊಟ್ಟಿನಂತೆ ದೃಢವಾದ ಮಚ್ಚೆಯು ಬೆನ್ನು ಹಾಗೂ ಅದರ ಮಧ್ಯಭಾಗದಲ್ಲಿ ಮೂಡಿದ್ದರೆ ಅವರಿಗೆ ಆಧ್ಯಾತ್ಮ ಸಿದ್ದಿ, ಯೋಗವಿದ್ಯೆ ಪ್ರಾಪ್ತವಾಗುತ್ತದೆ. ಇವರು ದೈವಭಕ್ತರೂ, ಬಂಧು ಜನಪ್ರಿಯರೂ, ಸುಖ ಭೋಜನ ಪ್ರಿಯರೂ, ಸುಭಾಷಣಕಾರರೂ ಆಗಿರುತ್ತಾರೆ. ಎಣ್ಣೆಗೆಂಪು ಬಣ್ಣದ ಈ ಮಚ್ಚೆಯಿಂದ ಮಧ್ಯಮ ಫಲ ಮಾತ್ರ ದೊರಕುತ್ತದೆ.
ಬಲಭುಜದ ಮೇಲೆ ಮಚ್ಚೆ ಹೊಂದಿರುವವರು ವಿಚಾರಶೀಲರು, ಯಾವುದನ್ನೂ ಯೋಚಿಸಿ ತೀರ್ಮಾನ ಕೈಗೊಳ್ಳುವರು. ಇವರಿಗೆ ಆತ್ಮ ಗೌರವವೇ ಪ್ರಧಾನ.ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳದೆ ನಾಜೂಕಾಗಿ ವರ್ತಿಸಬಲ್ಲರು. ಲೋಕ ನೀತಿಯನ್ನು ಚೆನ್ನಾಗಿ ತಿಳಿದರೂ ದೈವೀಕ ವಿಷಯಗಳ ಕಡೆ ಮನವೊಲಿದು ತಟಸ್ಥಭಾವ ತಾಳಿ, ಜಾಗರೂಕತೆಯಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಲ್ಲರು. ಇವರಲ್ಲಿ ಅನಾವಶ್ಯಕ ಉದ್ವೇಗ, ಆವೇಶ ಕಂಡುಬರುವುದಿಲ್ಲ.
ಕಣ್ಣಿನ ಭಾಗದ ಮಚ್ಚೆಗಳ ಫಲ : ಕಣ್ಣಿನ ಗುಡ್ಡೆಯ ಮೇಲೆ ರೆಪ್ಪೆಯ ಬಳಿ ಮಚ್ಚೆಯಿದ್ದರೆ, ಅಂತಹ ವ್ಯಕ್ತಿಗೆ ದೈವಬಲ, ಮಂತ್ರಸಿದ್ದಿ, ಉಪಾಸನಾ ಶಕ್ತಿಗಳು ಕೈಗೂಡುತ್ತವೆ. ಇವರಲ್ಲಿ ದೇವರ ಪೂಜೆ, ದಾನ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಸಾಮಾನ್ಯವಾಗಿ ಕಂಡುಬರುತ್ತದೆ. ರೆಪ್ಪೆ ಮೇಲಿನ
ಮಚ್ಚೆಗಳು ವಿಲಾಸ ಜೀವನದ ಕುರುಹು ಆಗಿದೆ. ಕಣ್ಣಿನ ಎಡಭಾಗದಲ್ಲಿ ಪುರುಷರಿಗೆ ಮಚ್ಚೆಗಳಿದ್ದರೆ ಅಲ್ಪ ಸುಖ, ಬಡತನ ಸಂಭವ. ಎಡಗಣ್ಣಿನ ಭಾಗದಲ್ಲಿ ಉದ್ದ ಮಚ್ಚೆಯಿದ್ದರೆ ಅಂತಹವರು ಮಾನಸಿಕ ರೋಗಿಗಳಾಗಿ ವ್ಯಾಕುಲಚಿತ್ತರಾಗುತ್ತಾರೆ.
ಆಸೆಗಳನ್ನು ಪೂರೈಸಲು ಹೆಣಗಾಡಿ ಅಸಫಲರಾಗಿ, ಕೀಳರಿಮೆಯಿಂದ ಬಳಲುತ್ತಾರೆ. ಸಂಸಾರ ತಾಪತ್ರಯ, ಸಾಲ, ಕಷ್ಟ, ಅಲ್ಪಾದಾಯಗಳಿಂದ ಬಳಲಿ ಕುಂಟು ಬದುಕನ್ನು ಸಾಗಿಸುತ್ತಾರೆ. ಕಣ್ಣಿನ ಅಂಚಿನಲ್ಲಿ (ಎರಡೂ ಕಣ್ಣಂಚಿನಲ್ಲಿ) ಮಚ್ಚೆಯಿರುವ ವ್ಯಕ್ತಿ ಜ್ಞಾನದಾಹಿಯಾಗಿದ್ದು ಏನಾದರೊಂದು ಅಭ್ಯಾಸದಲ್ಲಿ ತೊಡಗಿಯೇ ಇರುತ್ತಾನೆ. ಇತರರಿಗೆ ಮಾರ್ಗದರ್ಶಕನಾಗಿ ಸದಾಕಾಲ ಪರೋಪಕಾರ, ಭಗವದ್ಭಕ್ತಿ, ಲೋಕೋಪಕಾರ ಮೊದಲಾದ ಶ್ರೇಷ್ಠ ಕಾರ್ಯಗಳಲ್ಲಿ ತೊಡಗಿರುತ್ತಾರೆ.
ಯೋಗ ಮಾರ್ಗವೂ ಇವರಿಗೆ ಒಲಿಯುತ್ತದೆ. ಕಣ್ಣು ಕೆಳ ರೆಪ್ಪೆಯಲ್ಲಿನ ಮಚ್ಚೆಗಳು ಅಷ್ಟೇನೂ ಶುಭ ಸೂಚಕವಲ್ಲ. ಆಕಸ್ಮಿಕ, ಶತೃಭಯ, ಅಲೆದಾಟ, ವಿಶ್ರಾಂತಿಹೀನ ಉದ್ಯೋಗ ಇದರ ಲಕ್ಷಣ. ಇವರು ಎಲ್ಲರ ಪ್ರೀತಿಯಿಂದ ವಂಚಿತರಾಗಿದ್ದು, ಎಲ್ಲರ ದ್ವೇಷ ಕಟ್ಟಿಕೊಳ್ಳಬೇಕಾದೀತು. ಎರಡೂ ಕಣ್ಣುಗಳ ಕೆಳ ರೆಪ್ಪೆಯಲ್ಲಿ ಮಚ್ಚೆ ಮೂಡಿದ್ದರೆ ಅಂತಹವರ ಬಳಿ ಹಣ ನಿಲ್ಲುವುದಿಲ್ಲ. ಬಂದ ಹಣ ತಿಳಿಯದ ಹಾಗೆ ಜಾರಿ ಹೋದೀತು. ಬಂಧು ವಿರೋಧ, ವ್ಯಂಗ್ಯಮಾತಿನ ಮೊನಚು, ತಾವೇ ಮಾಡಿಕೊಂಡ ದ್ವೇಷ, ಇವು ಇವರ ಪಾಲಿನ ಆಪತ್ತುಗಳು.
ಕಣ್ಣಿನ ಭಾಗದಲ್ಲಿನ ಮಚ್ಚೆಗಳು ಜೇನು ಹಳದಿ ಬಣ್ಣವಾಗಿದ್ದರೆ ಶುಭಫಲಗಳು ದೊರೆಯುತ್ತವೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.