ಇದೇನ್ರೀ ಹೊಸ ವಿಚಾರ ಭೂತಗಳಿಗೂ ಇಷ್ಟವಾಗುವ ಆಹಾರ ಇದೆಯಾ, ಸುಮ್ಮನೆ ಏನೇನೋ ಹೇಳಬೇಡಿ ಎಂಬುವ ಮಾತು ನಿಮ್ಮದಾದರೆ ಒಮ್ಮೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೀವು ಓದಲೇಬೇಕು, ದೇವರಿಗೆ ಇಷ್ಟ ಎಂದು ನೈವೈದ್ಯ ಮಾಡುತ್ತೀವಲ್ಲ ಇದು ಸಹ ಹಾಗೆ ಪ್ರತಿಯೊಂದು ಆಹಾರಕ್ಕೂ ನಕಾರಾತ್ಮಕ ಮತ್ತು ಸಕಾರಾತ್ಮಕ ಶಕ್ತಿ ಇರುತ್ತೆ.
ದೇವರಾಗಲಿ ಭೂತಗಳಲ್ಲಿ ಇದು ಯಾವುದು ಇಂದು ನಾವು ಸೃಷ್ಟಿ ಮಾಡಿದ್ದಲ್ಲ ಶತಮಾನಗಳಿಂದಲೂ ನಮ್ಮ ನಂಬಿಕೆ ಹಾಗೂ ಆಚರಣೆಯಲ್ಲಿ ಮೂಡಿಬಂದಿರುವುದು, ಭೂತಗಳು ಎಂದರೆ ನಮ್ಮ ಈಗಿನ ಸಿನಿಮಾಗಳಲ್ಲಿ ತೋರಿಸುತ್ತಾ ರಲ್ಲ ಆಗಲ್ಲ, ಭೂತಗಳಿಗೆ ಬೇರೆಯದೇ ಅರ್ಥವಿದೆ, ಸಾಮಾನ್ಯವಾಗಿ ಮನುಷ್ಯನಿಗೆ ಕಾಟ ಕೊಡುವ ಅಥವಾ ನೆಗೆಟಿವ್ ಶಕ್ತಿಯನ್ನು ಭೂತಗಳು ಎನ್ನಬಹುದು.
ದೈವ ಶಕ್ತಿಯನ್ನು ಒಲಿಸಲೂ ಹಲವು ರೀತಿಯ ಪೂಜೆ-ಪುನಸ್ಕಾರಗಳನ್ನು ಮನೆಯಲ್ಲಿ ಮಾಡುವ ನಾವು, ಅದೇ ರೀತಿ ದುಷ್ಟಶಕ್ತಿಗಳನ್ನು ನಿಮ್ಮ ಮನೆಯಲ್ಲಿ ಆಕರ್ಷಣೆ ಮಾಡುವ ಕೆಲಸಗಳನ್ನು ನಿಮಗೆ ಗೊತ್ತಿಲ್ಲದೇ ನೀವು ಮಾಡುತ್ತಿರುತ್ತೀರಿ, ಅದರಲ್ಲಿ ಒಂದು ದುಷ್ಟಶಕ್ತಿಗಳಿಗೆ ಇಷ್ಟ ಆಗುವ ಅಡುಗೆಗಳನ್ನು ನಿಮ್ಮ ಮನೆಯಲ್ಲಿ ಮಾಡುವುದು ಅದು ಯಾವುದು ಎಂಬುದರ ಬಗ್ಗೆ ಈ ಕೆಳಗೆ ಓದಿ.
ಭೂತಗಳಿಗೆ ಇಷ್ಟವಾಗುವ ಆಹಾರಗಳು ಹಳಸಿದ ಪದಾರ್ಥಗಳು, ಅತಿ ತಣ್ಣಗೆ ಕೊರೆಯುವ ಆಹಾರ, ಅಪವಿತ್ರ ವಸ್ತುಗಳಿಂದ ತಯಾರಿಸಿರುವ ಅಡುಗೆ, ಇಂತಹ ಪದಾರ್ಥಗಳು ಭೂತಗಳಿಗೆ ಇಷ್ಟ, ಹೀಗೆ ತಾಮಸ ಗುಣಗಳನ್ನು ನಮ್ಮಲ್ಲಿ ಹುಟ್ಟುಹಾಕುವ ಪದಾರ್ಥಗಳು ಭೂತಗಳಿಗೆ ಇಷ್ಟವಾದ ಆಹಾರ ಎನ್ನುತ್ತಾರೆ, ನಾವು ಅಂತಹ ಬೂತಗಳು ಸೇವಿಸುವ ಆಹಾರ ಸೇವನೆ ಮಾಡುವುದರಿಂದ ಮನುಷ್ಯ ಕ್ರೂರಿ ಆಗುತ್ತಾನೆ, ಮನಸ್ಸು ವಿಕಾರಗಳಿಗೆ ಒಳಗಾಗುವುದರಿಂದ ಕ್ರೂರಿ ಯಾಗಬೇಕಾಗುತ್ತದೆ.