ಪುರುಷರಿಗೆ ಪ್ರವೇಶವಿಲ್ಲದ ಭಾರತದ 7 ದೇವಸ್ಥಾನಗಳು ಇವೇ.

0
4630

ಪುರುಷರಿಗೆ ಪ್ರವೇಶವಿಲ್ಲದ ಭಾರತದ 7 ದೇವಸ್ಥಾನಗಳು ಯಾವುವು ಎಂದು ಇಂದು ನೋಡೋಣ ಬನ್ನಿ. 1. ಚಕ್ಕುಲತುಕವು ಮಂದಿರ 2. ಕೊಟ್ಟಂಕುಲಂರ ದೇವಿ 3.ಮಾತಾ ಮಂದಿರ 4. ಕಾಮಾಖ್ಯ ದೇವಾಲಯ 5. ಸಾವಿತ್ರಿ ದೇವಾಲಯ 6. ಭಗತಿ ಮಾ ಮಂದಿರ 7. ಅಟ್ಟುಕಲ್ ಮಂದಿರ.

1. ಚಕ್ಕುಲತುಕವು ಮಂದಿರ : ಕೇರಳದಲ್ಲಿರುವ ಭಗವತಿ ದೇವಿಯ ದೇವಾಲಯ. ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು, ಡಿಸೆಂಬರ್ ಮೊದಲ ವಾರದ ಶುಕ್ರವಾರದಿಂದ 10 ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದ ತೊಳೆಯುವರು.

2. ಕೊಟ್ಟಂಕುಲಂರ ದೇವಿ, ಕೇರಳ: ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಪುರುಷರು ಮಹಿಳೆಯರ ವೇಷ ಧರಿಸಿ ಬಂದು ಮಹಿಳೆಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ.

3.ಮಾತಾ ಮಂದಿರ: ಬಿಹಾರದ ಮುಝಫ್ಫರಪುರದಲ್ಲಿರುವ ಈ ಮಂದಿರಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಂದಿರದ ಒಳಗೆ ಪುರುಷ ಅರ್ಚಕರಿಗೂ ಪ್ರವೇಶವಿಲ್ಲ. ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ.

4. ಕಾಮಾಖ್ಯ ದೇವಾಲಯ, ಆಂಧ್ರ: ಗುಹವಾತಿಯಲ್ಲಿರುವ ಕಾಮಾಖ್ಯ ದೇವಾಲಯದ ರೀತಿಯಲ್ಲೇ ಇದು ಸಹ ಇದೆ. ತಿಂಗಳಿನ ಕೆಲ ದಿನ ಇಲ್ಲಿ
ಪುರುಷರಿಗೆ ಪ್ರವೇಶ ನಿಷಿದ್ಧ. ದೇವಿ ತನ್ನ ನಿಸರ್ಗದ ಕ್ರಿಯೆಯಲ್ಲಿ ಇರುತ್ತಾಳೆ ಎಂಬ ನಂಬಿಕೆ ಇದ್ದು ಆ ಸಂದರ್ಭ ಪುರುಷರಿಗೆ ಪ್ರವೇಶ ಇಲ್ಲ.

5. ಸಾವಿತ್ರಿ ದೇವಾಲಯ, ರಾಜಸ್ಥಾನ: ರಾಜಸ್ಥಾನದ ಪುಷ್ಕರ್ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞವೊಂದನ್ನು ಆಯೋಜಿಸುವರು. ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು. ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆಯಾಗುವರು ಮತ್ತು ವಿಧಿವಿಧಾನಗಳನ್ನು ಪೂರೈಸುವರು.

ಇದರಿಂದ ಕೋಪಿತರಾದ ಸರಸ್ವತಿ ದೇವಿಯು ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶಿಸಬಾರದು ಮತ್ತು ಹಾಗೊಂದು ವೇಳೆ ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಶಾಪ ನೀಡಿದ್ದಾಳೆ ಎಂದು ಪುರಾಣ ಹೇಳುತ್ತದೆ.

6. ಭಗವತಿ ಮಾ ಮಂದಿರ, ಕೇರಳ: ಈ ಮಂದಿರವು ಕನ್ಯಾಕುಮಾರಿಯಲ್ಲಿದೆ. ಕನ್ಯಾ ಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿಯು ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರದ ಆವರಣದ ತನಕ ಮಾತ್ರ ಪ್ರವೇಶವಿದೆ. ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ.

7. ಅಟ್ಟುಕಲ್ ಮಂದಿರ: ಕೇರಳದ ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ಮ ಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಬರೆದಿದ್ದಾರೆ. ಹಬ್ಬದ ವೇಳೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here