ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಅದಕ್ಕೆ ಹುಣಸೆ ಮರವನ್ನು ಮನೆಗಳ ಮುಂದೆ ನೆಡಲೇಬಾರದು. ಅಸಲಿಗೆ ಇದಕ್ಕೆ ಕಾರಣ ಏನು ಒಮ್ಮೆ ಓದಿ ನೋಡಿ.

0
9409

ಕೇಳಿ ಇಲ್ಲಿ ಹುಣಸೆ ಮರದಲ್ಲಿ ದೆವ್ವ ಇರುತ್ತದೆ ಅದಕ್ಕೆ ಹುಣಸೆ ಮರವನ್ನು ಮನೆಗಳ ಮುಂದೆ ನೆಡಲೇ ಬಾರದು. ಹುಣಸೆ ತೋಪಿನಲ್ಲಂತೂ ಒಬ್ಬರೇ ಹೋಗಿ ತಿರುಗಾಡ ಬಾರದು ಮೋಹಿನಿ ಬರುತ್ತಾಳಷ್ಟೆ. ಬಾಲ್ಯದಿಂದಲೂ ನಮ್ಮ ಪೂರ್ವಿಕರು ಹೇಳುತ್ತಿದ್ದ ಮಾತು ಬಹುಷಃ ಎಲ್ಲರಿಗೂ ಅನುಭವವಾಗಿರುತ್ತದೆ.‌

ನೋಡಿ ನಮ್ಮ ಪೂರ್ವಿಕರು ಯಾವ ಸೈನ್ಟಿಸ್ಟ್ ಗಳಿಗಿಂತಲೂ ಕಡಿಮೆ ಇಲ್ಲ. ಪೂರ್ವದಲ್ಲಿಯೇ ಹುಣಸೆ ಮರದ ಬಳಿ ಹೋಗಬಾರದು ಅನ್ನುವ ಪರಿಕಲ್ಪನೆ ಅವರಲ್ಲಿತ್ತು ಅಂದರೆ ಅದೆಷ್ಟು ಬುದ್ದಿವಂತರಿರಬೇಕು ನಮ್ಮ ಪೂರ್ವಿಕರು ಅಲ್ವಾ. ನೋಡ್ರಪ್ಪಾ ಹುಣಸೆ ಮರ ದೇಹಕ್ಕೆ ಆಕ್ಸಿಜನ್ ಕೊಡಲ್ಲ ಎಲ್ಲ ಅದೇ ಹೀರಿಕೊಳ್ಳುತ್ತದೆ ಅದರ ಕೆಳಗೆ ಹೋಗಬೇಡಿ ಮನೆಗಳ ಮುಂದೆ ಹಾಕಬೇಡಿ ಅಂದರೆ ಯಾರೂ ಕೇಳಲ್ಲ .

ಯಾಕೆಂದರೆ ನಮ್ಮ ಜನ ಜ್ಞಾನ ಇದ್ದರೂ ಅದರ ಅರಿವಿಲ್ಲದವರು ಆಕ್ಸಿಜನ್ ಇರಲ್ಲ ಒಳ್ಳೆಯ ಗಾಳಿ ಬರಲ್ಲ ಅಂತ ಅಂದರೆ ಕೇಳುವವರಲ್ಲ ಹಾಕೆ ಹಾಕುವರು ಮರವನ್ನು. ಅದಕ್ಕೆ ಪೂರ್ವಿಕರು ತಲೆ ಉಪಯೋಗಿಸಿ ದೆವ್ವ ಇರುತ್ತೆ ಹುಣಸೆ ಮರದಲ್ಲಿ. ಹುಣಸೆ ತೋಪಲ್ಲಿ ಮೋಹಿನಿ ಓಡಾಡುತ್ತಾ ಇರುತ್ತಾಳೆ ಅನ್ನುವ ಮೂಡನಂಬಿಕೆಯ ಬಲೆ ಹೆಣೆದಾಗ ಜನ ನಂಬಿದರು . ಯಾಕೆಂದರೆ ದೆವ್ವ ಭೂತ ಅಂದರೆ ಜನರಿಗೆ ಭಯ ಯಾರೂ ಹತ್ತಿರ ಹೋಗಲ್ಲ.

ಇಲ್ಲಿ ದೆವ್ವ ಇದೆ ಅದು ಮೂಡನಂಬಿಕೆ ಆದರೆ ಅಂತಹ ಮೂಡನಂಬಿಕೆ ಯಿಂದ ಜನರಿಗೆ ಆಗುವ ತೊಂದರೆ ತಪ್ಪಿದರೆ ಮೂಡನಂಬಿಕೆ ಒಳ್ಳೆಯದೇ. ಹುಣಸೆ ಮರದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇರುತ್ತದೆ ಅಂತ ಅದು ಹೇಗೆ ತಿಳಿದರೋ ಪೂರ್ವಿಕರು ಅದಂತೂ ಗೊತ್ತಿಲ್ಲ.‌ ನಿಜಕ್ಕೂ ಹುಣಸೆ ಮರ ವಾತಾವರಣದಲ್ಲಿರುವ ಎಲ್ಲಾ ಆಕ್ಸಿಜನ್ ಅನ್ನೂ ತಾನೇ ಹೀರಿ ಕೊಂಡು ಪ್ರಾಣ ವಾಯುವನ್ನು ಗುಳುಂ ಸ್ವಾಹ ಮಾಡಿದಾಗ ಮನುಷ್ಯರಿಗೆ ಬದುಕಲು ಮುಖ್ಯವಾಗಿ ಬೇಕಾಗಿರುಬ ಆಕ್ಸಿಜನ್ ಹುಣಸೆ ಮರವೇ ಹೀರಿ ಬಿಟ್ಟರೆ ಪ್ರಾಣಕ್ಕೆ ಅಪಾಯ ಇರುತ್ತದೆ.

ಆಗ ಉಸಿರು ಕಟ್ಟಿದಂತಾದಾಗ ಯಾರೋ ಕತ್ತನ್ನು ಹಿಸುಕುತಿದ್ದಾರೆ ಉಸಿರಾಡಲು ಆಗುತ್ತಿಲ್ಲ ಅಂತ ಜನ ತಿಳಿದು ಹೌದು ದೆವ್ವದ ಕೆಲಸ ಇದು ಎಂದು ಆಗಿನಿಂದ ಹುಣಸೆ ಮರದ ಬಳಿ ಹೋಗಬಾರದು ದೆವ್ವ ನೇತಾಡುತ್ತಾ ಇರುತ್ತದೆ ಹೋದರೆ ಕತ್ತು ಹಿಸುಕಿ ಉಸಿರಾಡದಂತೆ ಮಾಡುತ್ತದೆ ಅನ್ನುವ ಭ್ರಮಾಲೋಕದಲ್ಲೇ ಬರುತಿದ್ದೇವೆ.

ಅದಕ್ಕೆ ಊರೊಳಗಡೆ ಹುಣಸೆ ಮರ ಹಾಕಲ್ಲ. ಹೊರಗೆ ಅದಕ್ಕಂತಲೇ ತೋಪಿರುತ್ತದೆ. ಎಷ್ಟು ಬುದ್ದಿ ವಂತರಲ್ವಾ ನಮ್ಮ ಪೂರ್ವಿಕರು. ಅರಳಿ ಮರ ದಿನದ ಇಪ್ಪತ್ತು ನಾಲ್ಕು ತಾಸು ಆಕ್ಸಿಜನ್ ಕೊಡುತ್ತದೆ. ಆಲದ ಮರ ದಿನದ ಇಪ್ಪತ್ತು ಗಂಟೆ ಆಕ್ಸಿಜನ್ ಕೊಡುತ್ತದೆ. ಬೇವಿನ ಮರ ದಿನದಲ್ಲಿ ಹದಿನೆಂಟು ಗಂಟೆ ಆಕ್ಸಿಜನ್ ಕೊಡುತ್ತದೆ ವಾತಾವರಣಕ್ಕೆ ಹೊಂಗೆ ಮರವೂ ಅಷ್ಟೆ.‌

ಹೀಗಿರುವಾಗ ಹುಣಸೆ ಮರ ಇರೋ ಬರೋ ಎಲ್ಲ ಆಕ್ಸಿಜನ್ ಅನ್ನೂ ಹೀರಿ ಕೊಂಡರೆ. ಹೇಗೋ ದೆವ್ವ ಭೂತ ಮೋಹಿನಿ ನೆಪದಲ್ಲಿ ಹುಣಸೆ ಮರದಿಂದ ದೂರ ಇರುವಂತೆ ಮಾಡಿದರು ನಮ್ಮ ಹಿರಿಯರು. ಹಿರಿಯರು ಹೇಳುತ್ತಾರೆ ಸೂರ್ಯ ಮುಳುಗಿದ ನಂತರ ಕಸ ಆಚೆ ಹಾಕಬಾರದು ಅಂತ, ಇಲ್ಲಿ ಸೂರ್ಯ ಮುಳುಗುವುದಾಗಿರುವುದಲ್ಲ ಸೂರ್ಯ ಮುಳುಗಿದಾಗ ಕತ್ತಲು ಬರುತ್ತದೆ ಕತ್ತಲಲ್ಲಿ ಕಸ ಹೊರಗೆ ಹಾಕಿದರೆ ಏನಾದರು ಹಣ ಒಡವೆ ವಸ್ತು ಇದ್ದರೆ ಅದೂ ಹೊರಗೆ ಹೋಗುತ್ತದೆ ಅನ್ನುವ ಕಲ್ಪನೆ ಮಾತ್ರ ಇತ್ತು.

ಹಿಂದೆ ಈಗಿನ ತರಹ ವಿದ್ಯುತ್ ಇರಲಿಲ್ಲ ಅಲ್ವಾ. ಆದರೆ ಕಸ ಹಾಕಬೇಡಿ ಅಂದರೆ ಜನ ಪಾಲಿಸಲ್ಲ. ಅಲ್ಲೂ ಲಕ್ಷ್ಮೀ ಕಸದ ಜೊತೆ ಹೊರಗೆ ಹೋಗುತ್ತಾಳೆ ಅನ್ನುವ ಸಣ್ಣ ಮೂಡನಂಬಿಕೆ ಕೆಲಸ ಮಾಡಿತು. ಎಲ್ಲಿ ಲಕ್ಷ್ಮೀ ಕಸದ ಜೊತೆ ಸಂಜೆ ಹೋಗುವಳೋ ಎಂದು ಭಯಪಟ್ಟ ಜನ ಸೂರ್ಯ ಮುಳುಗಿದ ನಂತರ ಕಸವನ್ನೂ ಗುಡಿಸಲ್ಲ ಕಸ ಹೊರಗೂ ಹಾಕಲ್ಲ.

ಇದೂ ನಮಗೆ ಒಳ್ಳೆಯ ದೇ ಅಲ್ವಾ. ಮನೆಯಲ್ಲಿ ಎಲ್ಲೆಂದರಲ್ಲಿ ಕೂದಲು ಬಿದ್ದಿದ್ದರೆ ಲಕ್ಷ್ಮೀ ಕೋಪಿಸಿ ಕೊಂಡು ಹೋಗುತ್ತಾಳೆ ಅದಕ್ಕೆ ಮನೆಯಲ್ಲಿ ಒಂದು ಕೂದಲೂ ಬೀಳಿಸ ಬೇಡಿ ಅನ್ನುವ ದೇವರ ಭಯ ಹೇಳಿದ್ದಕ್ಕೆ ಯಾರೂ ಕೂದಲನ್ನ ಹೇಗಂದರಾಗೆ ಹರಡಲ್ಲ . ಒಂದು ಕಡೆ ಬಾಚಿ ಒಂದು ಕಡೆ ಇಡುತ್ತಾರೆ.

ವಾಸ್ತವದಲ್ಲಿ‌ಕೂದಲು ತಿನ್ನುವ ಆಹಾರಕ್ಕೆ ಬಿದ್ದರೆ ಗಮನಿಸದೆ ತಿಂದರೆ ಪ್ರಾಣಕ್ಕೆ ಕುತ್ತು ತರುತ್ತದೆ ಊಟದಲ್ಲಿ ಕೂದಲು ಸಿಗಬಾರದು ಅಂದರೆ ಯಾರೂ ಕೇಳಲ್ಲ ಅದಕ್ಕೆ ಇಲ್ಲಿ ಲಕ್ಷ್ಮಿದೇವಿಯ ಭಯ ಹುಟ್ಟಿಸಿದರು. ಹಣದ ದೇವತೆ ಅಂದರೆ ಪ್ರೀತಿ ಹಣ ಯಾರಿಗೆ ಬೇಡ ಅದಕ್ಕೆ ಕೂದಲನ್ನು ಯಾರೂ ಎಲ್ಲೆಂದರಲ್ಲಿ ಹಾಕಲ್ಲ ಹಾಗೆ ಕೂದಲು ಉದುರುತ್ತದೆ ಲಕ್ಷ್ಮಿಗೆ ಕೂದಲನ್ನು ಹರಡಿಕೊಂಡಿರಬಾರದು ಅಂತಲೇ ಗಂಟಾಕಿ ಅನ್ನುವರು.

ಈ ಮೂಡನಂಬಿಕೆಯೂ ಇರಲಿ ಬಿಡಿ. ಹೀಗೆ ಇನ್ನು ಹಲವಾರು ವಿಷಯಗಳು ಇವೆ ಜನ ಪಾಲಿಸಲ್ಲ ವೈಜ್ಞಾನಿಕ ಕಾರಣ ಕೊಟ್ಟರೆ ಹೀಗೆ ದೇವರು , ದೆವ್ವ , ಭೂತಗಳ ಭಯ ಮೂಡ ನಂಬಿಕೆ ಮೂಡಿಸಿದರೆ ಹೌದು ಅನ್ನುವರು ಅದಕ್ಕೆ ಇಂತಹ ಮೂಡನಂಬಿಕೆ ಸಾಗುತ್ತಾ ಬಂದಿತು.

ಮನುಷ್ಯರಿಗೆ ಒಳಿತು ಮಾಡಲು ತಂದ ಕೆಲವು ಮೂಡನಂಬಿಕೆ ಹಾಗೆ ಇರಲಿ ಬಿಡಿ.‌ ಹಾಗಂತ ದೇವರ ಹೆಸರಲ್ಲಿ‌ಪ್ರಾಣಿ ಬಲಿ ಅಂತಹುದಕ್ಕೆ ನಮ್ಮ ಸಮ್ಮತಿ ಇಲ್ಲ.‌ ಅಂದ ಹಾಗೆ ಯಾರೂ ಹುಣಸೆ ಮರದತ್ತಿರ ಹೋಗಬೇಡಿ ದೆವ್ವ ನೇತಾಡುತ್ತಾ ಇರುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here