ಭಗವದ್ಗೀತೆ ಏಕೆ ಓದಬೇಕು ಎಂಬ ಪ್ರಶ್ನೆಗೆ ಮೊಮ್ಮಗನಿಗೆ ತಾತ ಕೊಟ್ಟ ಉತ್ತರ ಏನೆಂದು ನೋಡಿ.

0
3302

ಭಗವದ್ಗೀತೆ ಯಾಕೆ ಓದಬೇಕು? ಮೊಮ್ಮಗನಿಗೆ ತಾತ ಕೊಟ್ಟ ಉತ್ತರ. ಎಷ್ಟೇ ಓದಿದರೂ ಈ ಭಗವದ್ಗೀತೆ ಅರ್ಥವಾಗುತ್ತಿಲ್ಲ. ಆದರೂ ಈ ಭಗವದ್ಗೀತೆಯನ್ನು ಯಾಕೆ ಓದಬೇಕು? ಎಂದು ತಾತನನ್ನು ಪ್ರಶ್ನಿಸಿದ ಮೊಮ್ಮಗ. ಸಮಯ ಬಂದಾಗ ಕ್ಲಿಯರ್ ಆಗಿ ಹೇಳುತ್ತೇನೆ ಬಿಡೋ ಎಂದ.

ಆ ದಿನ ಬಂದೇ ಬಂತು. ಒಂದು ದಿನ ಮೊಮ್ಮಗನನ್ನು ಕರೆದುಕೊಂಡು ಹೊರಗೆ ಹೋದ ತಾತ ಅಲ್ಲಿ ಒಂದು ಇದ್ದಿಲಿನ ಬಟ್ಟಿ ಇತ್ತು ಕಟ್ಟಿಗೆ ಸುಟ್ಟು ಇದ್ದಿಲಾಗಿ ಬದಲಾದ ಮೇಲೆ ಒಂದು ತಟ್ಟೆಯಲ್ಲಿ ಇದ್ದಿಲನ್ನು ಮೊದಲೇ ಕ್ಲೀನ್ ಮಾಡಿದ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಕೂಲಿಗಳು. ಲಂಚ್ ಟೈಮ್ ಆದಕಾರಣ ಅವರೆಲ್ಲಾ ಹತ್ತಿರದಲ್ಲಿದ್ದ ಮರದ ಬಳಿ ಕುಳಿತು ಊಟ ಮಾಡುತ್ತಿದ್ದರು.

ಆಗ ಅಲ್ಲೇ ಇದ್ದ ಇದ್ದಿಲಿನ ಮಸಿ ಅಂಟಿಕೊಂಡಿದ್ದ ತಟ್ಟೆಯನ್ನು ಮೊಮ್ಮಗನಿಗೆ ಕೊಟ್ಟು ಅಗೋ ಅಲ್ಲಿ ಕಾಣಿಸುತ್ತಿರುವ ನದಿಯಿಂದ ನೀರು ತೆಗೆದುಕೊಂಡು ಬಾ ಎಂದು ಹೇಳಿದ. ಅದೇಗೆ ಸಾಧ್ಯ ತಾತ ರಂಧ್ರಗಳುಳ್ಳ ಈ ತಟ್ಟೆಯನ್ನು ನೀರನ್ನು ಹೇಗೆ ತರಲಿ? ಎಂದ ಮೊಮ್ಮಗ, ಪರ್ವಾಗಿಲ್ಲ ವೇಗವಾಗಿ ಬಾ ಎಂದು ಹೇಳಿದ ತಾತ.

ಮೊದಲ ಸಲ 10 ನಿಮಿಷಗಳಲ್ಲಿ ಬಂದ. ಪ್ರತಿಫಲ: ತಾತನ ಬಳಿ ಬರುವ ವೇಳೆಗೆ ತಟ್ಟೆಯಲ್ಲಿನ ನೀರು ಖಾಲಿ. (ಪರ್ವಾಗಿಲ್ಲ ಈ ಸಲ ಇನ್ನಷ್ಟು ವೆಗವಾಗಿ ಬಾ ಎಂದ ತಾತ.

ಎರಡನೇ ಸಲ 8 ನಿಮಿಷಗಳಲ್ಲಿ ಬಂದ. ಪ್ರತಿಫಲ: ತಾತನ ಬಳಿ ಬರುವ ವೇಳೆಗೆ ತಟ್ಟೆಯಲ್ಲಿ ನೀರು ಖಾಲಿ (ಪರ್ವಾಗಿಲ್ಲ. ಈ ಸಲ ಇನ್ನಷ್ಟು ವೇಗವಾಗಿ ಬಾ ಎಂದ ತಾತ. ಮೂರನೇ ಸಲ 5 ನಿಮಿಷಗಳಲ್ಲೇ ಬಂದ. ಪ್ರತಿಫಲ: ನೀರು ಖಾಲಿ

ಈ ರೀತಿ 5 ಸಲ ಮಾಡಿದ. ಬೇಸರದಿಂದ ಇನ್ನು ನಾನು ತರಲ್ಲ ತಾತ ಎಷ್ಟೇ ತಂದರೂ ಎಷ್ಟೇ ಪ್ರಯತ್ನಿಸಿದರೂ ವೇಸ್ಟ್. ಇಲ್ಲಿಗೆ ಬರುವವರೆಗೂ ಆ ನೀರು ಉಳಿಯುತ್ತಿಲ್ಲ ಎಂದ ಮೊಮ್ಮಗ. ಆಗ ತಾತ ಆ ತಟ್ಟೆಯನ್ನು ನೋಡು? ಎಂದ… ನೋಡಿದ. ಏನು ಅರ್ಥವಾಯಿತು ಎಂದ ತಾತ. ಏನೂ ಅರ್ಥವಾಗಲಿಲ್ಲ ಎಂಬಂತೆ ತಲೆ ಆಡಿಸಿದ ಮೊಮ್ಮಗ.

ಆಗ ತಾತ… ಮೊದಲು ಈ ತಟ್ಟೆ ಇದ್ದಿಲಿನ ಮಸಿಯಿಂದ ಕಪ್ಪಗಿತ್ತು, ನೀನು ಈ ತಟ್ಟೆಯಲ್ಲಿ ನೀರು ತೆಗೆದುಕೊಂಡು ಬಂದ ಮೇಲೆ. ನಿಧಾನಕ್ಕೆ ಮಸಿಯೆಲ್ಲಾ ಹೋಗಿ. ಈಗ ನೋಡು ಹೊಸ ತಟ್ಟೆಯಂತೆ ಎಷ್ಟು ಸ್ವಚ್ಛವಾಗಿದೆ. ಅದೇ ರೀತಿ ಭಗವದ್ಗೀತೆ ಓದಿದರೆ ನಮಗೂ ಹಾಗೆಯೇ ಆಗುತ್ತದೆ ಅರ್ಥ ಆಗಲಿ ಆಗದಿರಲಿ, ನೆನಪಿರಲಿ, ಇಲ್ಲದಿರಲಿ ಭಗದ್ಗೀತೆ ಓದಿದರೆ ಕ್ರಮವಾಗಿ ನಮ್ಮ ಆಲೋಚನೆಗಳಲ್ಲಿ, ನಮ್ಮ ಯೋಚನೆಯಲ್ಲಿ ನಮಗೆ ಗೊತ್ತಿಲ್ಲದಂತೆ ಒಂದು ಒಳ್ಳೆಯ ಬದಲಾವಣೆ ಬರುತ್ತದೆ.

ಇದು ಕೂಡಲೆ ಗೊತ್ತಾಗಲ್ಲ ಸಂದರ್ಭ ಬಂದಾಗ ಹೊರಬೀಳುತ್ತದೆ. ನಮಗೆ ಒಳಿತಾಗುತ್ತದೆ. ಬಂಧುಗಳೇ ದಯವಿಟ್ಟು ಪವಿತ್ರ ಗ್ರಂಥವನ್ನು ಓದಿ. ತಮ್ಮ ಮಕ್ಕಳನ್ನೂ ಓದಿಸಿ. ಅಡಿಗಡಿಗೆ ಮಲಿನಗೊಳ್ಳುತ್ತಲೇ ಇರುವ ಇದ್ದಿಲಿನ ತಟ್ಟೆಯಂಥ ನಮ್ಮ ಮನಸ್ಸನ್ನು ಶುಚಿಗೊಳಿಸುವ ಅಮೃತ ಗಂಗೆಯದು.

LEAVE A REPLY

Please enter your comment!
Please enter your name here