ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸುಲಭ ಉಪಾಯ!

0
1714

ಯಾವುದೇ ದೈಹಿಕ ರೋಗ ಲಕ್ಷಣವಿದ್ದರೂ ನಾವು ರೋಗ ಒಂದರ ಗುಣ ಲಕ್ಷಣಗಳನ್ನು ಹೋಲುವ ತೊಂದರೆಯನ್ನು ಅನುಭವಿಸುತ್ತಿದ್ದೇವೆ, ಎಂಬ ರೋಗ ಭ್ರಾಂತಿಯು ಕೆಲವರನ್ನು ಕಾಡುತ್ತದೆ ಹೈಪೋಕಾಂಡ್ರಿಯೋಸಿನ್ ಎಂಬುದೇ ಆ ರೋಗ ಬ್ರಾಂತಿ ಕಾಯಿಲೆ ಅವಳನ್ನು ಸುತ್ತಿಕೊಂಡಿರುತ್ತದೆ.

ಅಂತಹ ವ್ಯಕ್ತಿಗಳು ಹೆಚ್ಚು ದೈಹಿಕ ಆರೋಗ್ಯದ ಬಗ್ಗೆ ತಮ್ಮ ದೇಹದ ಮತ್ತು ಮನಸ್ಸಿನ ಕಾರ್ಯಕ್ರಿಯೆಗಳ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ ರೋಗ ಭ್ರಾಂತಿಯ ತೊಂದರೆ ಮದ್ಯ ಮನಸ್ಸಿನಲ್ಲಿ ಗೋಚರಿಸುತ್ತದೆ ಒಳ್ಳೆಯ ಆರೋಗ್ಯ ಹೊಂದಿದ್ದರು ಅನೇಕ ಬಗೆಯ ರೋಗ ಲಕ್ಷಣಗಳನ್ನು ತಾವು ಹೊಂದಿರುವ ಭಾವನೆ ಅವರಿಗಾಗಿರುತ್ತದೆ ಭಯ, ಭೀತಿ, ಕಾಳಜಿ, ಖಿನ್ನತೆ ಅವರನ್ನು ಆವರಿಸಿರುತ್ತದೆ.

ರೋಗ ಬ್ರಾಂತಿ ಹೊಂದಿರುವವರು ಇಂದಿನ ಅನೇಕ ಬಗೆಯ ವಿಷಯಗಳ ಬಗ್ಗೆ ವಿನಾಕಾರಣವಾಗಿ ಕಿರಿಕಿರಿಯನ್ನುಂಟು ಮಾಡುತ್ತಾರೆ ಬರಲಿರುವುದರ ಬಗ್ಗೆ ವಿನಾಕಾರಣ ಕಾತರತೆ ವ್ಯಕ್ತಪಡಿಸುತ್ತಾರೆ ಇದೆಲ್ಲವೂ ಅವರ ಸ್ವಯಂ ಸೃಷ್ಟಿಯಾಗಿದೆ ಆರೋಗ್ಯದ ಬಗ್ಗೆ ತುಂಬಾ ಆರೈಕೆ ಮಾಡುವುದಕ್ಕಿಂತ ಭೀಕರವಾದ ತೊಂದರೆಯಿಲ್ಲ.

ಚಿಕ್ಕ ವಯಸ್ಸಿನಲ್ಲಿ ನಿರಾಸೆ ಅನುಭವಿಸುವ ತೊಂದರೆಗಳು ತಮ್ಮೊಳಗೆ ಒಡಮೂಡಿದ ಕೀಳರಿಮೆ ತಪ್ಪು ಭಾವನೆ ಈ ಬಗೆಯ ತೊಂದರೆಗಳಿಗೆ ಎಡೆಮಾಡಿ ಕೊಡಬಹುದು ಎಂಬುದು ಒಂದು ಊಹೆಯಾಗಿದೆ.

ಅವರು ತಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ಚಿಂತಿಸುತ್ತಿರುತ್ತಾರೆ, ಅದರ ಬಗ್ಗೆ ತೋರಿಸುವ ಅತ್ಯಾಸಕ್ತಿ ದೇಹದ ಕೆಲವು ಅಂಗಗಳ ಕಾರ್ಯದ ಮೇಲೆ ಪ್ರಭಾವ ಬೀರಿ ಅವುಗಳ ವ್ಯತ್ಯಯಕ್ಕೆಡೆಮಾಡಬಹುದು, ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಅವರ ಗಮನವೆಲ್ಲ ತಮ್ಮ ದೈಹಿಕ ತೊಂದರೆಗಳಲ್ಲಿಯೇ ಅವರ ಗಮನ ಕೇಂದ್ರೀಕರಣವಾಗಿರುತ್ತದೆ ಅದು ಅವರಿಗೆ ಬೃಹದಾಕಾರವಾಗಿ ತೋರಿಬರುತ್ತದೆ ಇತರ ಯಾವುದೇ ವಿಷಯಗಳತ್ತ ಅವರ ಗಮನ ಹರಿಯುವುದಿಲ್ಲ.

ಅವರು ತೋರ್ಪಡಿಸುವ ಗುಣ ಲಕ್ಷಣಗಳು ಹಲವು ಬಗೆಯಾಗಿರುತ್ತದೆ, ಅವುಗಳನ್ನು ಅವರು ಅನುಭವಿಸುತ್ತಾರೆ ಅದರ ಬಗ್ಗೆ ವಿವರವಾಗಿ ಹೇಳ ಬಯಸುತ್ತಾರೆ ಎಲ್ಲಿಯಾದರೂ ಮರೆತು ಹೋಗಬಹುದೆಂದು ಅವುಗಳ ಪಟ್ಟಿ ಮಾಡಿಕೊಂಡು ವೈದ್ಯರ ಬಳಿ ಬರುತ್ತಾರೆ ನೋವಿಗೆ ಎಂದು ದೇಹದ ನಾನಾ ಭಾಗಗಳನ್ನು ಸೂಚಿಸುತ್ತಾರೆ ಹಸಿವೆ ಆಗುವುದಿಲ್ಲವೆಂದು ಹೇಳುತ್ತಾರೆ ಮನಸ್ಸಿಗೆ ಸಮಾಧಾನ ವಿಲ್ಲವೆಂದು ಹೇಳುತ್ತಾರೆ.

ಆದ್ದರಿಂದ ಪ್ರತಿಯೊಬ್ಬ ರೋಗಿಯು ತನಗೆ ರೋಗ ವಿದೆಯೋ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಅವುಗಳಿಂದ ಏನಾಗಬಹುದು ಎಂಬುದನ್ನು ತಿಳಿದುಕೊಳ್ಳದೆ ಆಕರವಾಗಿ ಅವರ ಬಗ್ಗೆ ಕಾತರಗೊಳ್ಳುವುದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಅವರಲ್ಲಿ ವೈದ್ಯರನ್ನು ಭೇಟಿಕೊಳ್ಳಬೇಕಾದ ಮಟ್ಟದ ರೋಗ ಇರುವುದಿಲ್ಲ ಅದೊಂದು ಕೇವಲ ಬ್ರಾಂತಿ ಯಾಗಿರುತ್ತದೆ ಹೀಗಾಗಿ ಅವರ ಚಿಕಿತ್ಸೆ ಕ್ಲಿಷ್ಟಕರಯಗಿರುತ್ತದೆ ಆದ್ದರಿಂದ ಇಂಥವರಿಗೆ ಸರಿಯಾದ ತಿಳುವಳಿಕೆ ಮಾರ್ಗದರ್ಶನವನ್ನು ನೀಡಿ ಅವರಿಗೆ ಪ್ರೋತ್ಸಾಹ ಬೆಂಬಲ ಕೊಟ್ಟು ಈ ರೋಗದ ಗೀಳನ್ನು ದೂರ ಮಾಡಬೇಕು ತಮ್ಮ ದೇಹವನ್ನು ಮರೆತು ಬೇರೆಯವರ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಿ ಎಂಬ ತಿಳುವಳಿಕೆಯನ್ನು ಕೊಡಬೇಕು ತಮ್ಮ ಮನಸ್ಸಿನಲ್ಲಿ ಇದ್ದದ್ದನ್ನು ಒಳಗೆ ಇಟ್ಟುಕೊಳ್ಳಬಾರದು ಅವರು ತಮ್ಮ ದುಗುಡವನ್ನು ತಮ್ಮ ಮಿತ್ರರ ಮುಂದೆ ತೋಡಿಕೊಂಡರೆ ಮನಸ್ಸು ಆಗುತ್ತದೆ.

LEAVE A REPLY

Please enter your comment!
Please enter your name here