ಬಡವರ ಹಸಿವು ನೀಗಿಸಲು 1 ರುಪಾಯಿಗೆ ಇಡ್ಲಿ ಮಾರುತ್ತಿರುವ 80 ವರ್ಷದ ವೃದ್ದೆ.

0
3585

ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡಲು ಸರ್ಕಾರ ಇಂದಿರಾ ಕ್ಯಾಂಟೀನ್ ರೂಪದಲ್ಲಿ ಹತ್ತು ರೂಪಾಯಿಗೆ ಊಟ ನೀಡುತ್ತದೆ, ಆದರೆ ಚೆನ್ನೈ ಮೂಲದ ವಾಡಿವೇಳನ್ ಪಾಲ್ಯಂ ಗ್ರಾಮದಲ್ಲಿರುವ 80 ವರ್ಷದ ಅಜ್ಜಿ ಮಾತ್ರ ಬಡವರ ಹಸಿವು ನೀಗಿಸಲು 30ವರ್ಷಗಳಿಂದ 1ರುಪಾಯಿಗೆ ಇಡ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಈ ವಿಷಯ ನಿಮಗೆ ಅಚ್ಚರಿ ಎನಿಸಬಹುದು, ಆದರೂ ನಿಜ ಮತ್ತೊಂದು ಅಚ್ಚರಿ ಮೂಡಿಸುವ ವಿಷಯವೇನೆಂದರೆ ಇಡ್ಲಿಗೆ ಒಂದು ರೂಪಾಯಿ ನಿಗದಿ ಮಾಡಿರುವುದು ಇತ್ತೀಚಿಗಷ್ಟೇ ಈ ಮೊದಲು ಒಂದು ಇಟಲಿಗೆ ಇದ್ದ ಬೆಲೆ 50 ಪೈಸೆ, ಅಭಿವೃದ್ಧಿಆಹಾರ ಪಾದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಇಡ್ಲಿ ಬೆಲೆ ಒಂದು ರುಪಾಯಿಗೆ ಏರಿಕೆ ಮಾಡಲಾಗಿದೆ, ಪ್ರತಿದಿನ ತನ್ನ ಅಂಗಡಿ ಬಾಗಿಲನ್ನು ತೆರೆದು ಅದೆಷ್ಟೋ ಬಡವರ ಹೊಟ್ಟೆಯನ್ನು ತುಂಬಿಸಲು ತಮ್ಮ ಕೈಯಾರೆ ಸ್ವಾದಿಷ್ಟ ಹಾಗೂ ರುಚಿಕರವಾದ ಸಾಂಬಾರ್ ಹಾಗೂ ಚಟ್ನಿ ತಯಾರಿಸಿ ಇಡ್ಲಿ ಮಾರಾಟ ಮಾಡುತ್ತಾರೆ.

ಮೂವತ್ತು ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿರುವ ಅಜ್ಜಿ, ಪ್ರತಿದಿನ ಇಡ್ಲಿ ತಯಾರಿಸಲು ಹಿಟ್ಟನ್ನು ತಮ್ಮ ಕೈಯಾರೆ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಅರೆದು ಅದರಲ್ಲಿ ತಾಜಾ ಇಡ್ಲಿ ತಯಾರಿಸುತ್ತಾರೆ, ಸಾವಿರಕ್ಕೂ ಹೆಚ್ಚು ಇಡ್ಲಿ ಮಾರಾಟ ಮಾಡಿಕೊಂಡು ಈ ಅಜ್ಜಿ ಜೀವನ ಸಾಗಿಸುತ್ತಿದ್ದಾರೆ.

ನೀವೇನಾದರೂ ಈ ಅಜ್ಜಿಯ ಬಳಿ ಹೋಗಿ, ಅಜ್ಜಿ ನಿಮ್ಮ ಹೋಟೆಲ್ ಹಾಗೂ ನೀವು ಮಾಡುವ ಇಡ್ಲಿ ಇಷ್ಟೊಂದು ಫೇಮಸ್ ಆಗಿದೆ ನೀವೇಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಕೇಳಿದರೆ ಎಂಬತ್ತು ವರ್ಷದ ಈ ಅಜ್ಜಿ ಹೇಳುವ ಮಾತು 20 ಅಥವಾ 30 ರೂಪಾಯಿಗಳಿಗೆ ನನ್ನ ಇಡ್ಲಿಯ ಬೆಲೆಯನ್ನು ಏರಿಸಿ ಬಿಟ್ಟರೆ ಪಾಪ ಬಡವರು ಏನು ಮಾಡುತ್ತಾರೆ, ನಾನು ದುಡ್ಡಿಗಾಗಿ ಈ ವೃತ್ತಿ ಮಾಡುತ್ತಿಲ್ಲ, ಬಡವರ ಹಸಿವು ನೀಗಿಸಲು ಈ ವೃತ್ತಿ ಮಾಡುತ್ತಿರುವೆ ಎನ್ನುತ್ತಾರೆ.

ಅದೇನೇ ಇರಲಿ ಇಷ್ಟು ಹಿರಿಯ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಲು ಬೇರೊಬ್ಬರು ಬೇಕು, ಆದರೆ ಯಾರದೇ ಆಶ್ರಯ ಇಲ್ಲದೆ ತನ್ನ ಸ್ವಂತ ಕಾಲಿನ ಮೇಲೆ ಇಂದಿಗೂ ನಿಂತುಕೊಂಡು ಸಾಲದಕ್ಕೆ ಸಾವಿರಾರು ಬಡವರ ಹೊಟ್ಟೆ ಹಸಿವನ್ನು ನೀಗಿಸುತ್ತಿರುವ ಈ ಅಜ್ಜಿಯ ಕೆಲಸಕ್ಕೆ ಮೆಚ್ಚುಗೆಯನ್ನು ನೀಡಲೇಬೇಕು.

LEAVE A REPLY

Please enter your comment!
Please enter your name here