ಕನ್ನಡದಲ್ಲಿ ಮೂಡಿಬರುತ್ತಿರುವ ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಬಹುಕೋಟಿ ವೆಚ್ಚದ ಸಿನೆಮಾ ಹಾಗೂ ಸಿನಿರಸಿಕರ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ, ಬಿಡುಗಡೆಯಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಚಿತ್ರದ ಪ್ರಮುಖ ಪಾತ್ರಧಾರಿಯಾದ ನಿಖಿಲ್ ಕುಮಾರಸ್ವಾಮಿ ಅದೇಕೋ ಸಿನಿಮಾ ಪ್ರಚಾರದಿಂದ ಬಹಳ ದೂರ ಉಳಿದುಬಿಟ್ಟಿದ್ದಾರೆ, ಆದರೆ ಈ ಬಗ್ಗೆ ಅಭಿಮಾನಿಗಳಲ್ಲಿ ಬಿಸಿಬಿಸಿ ಚರ್ಚೆ ಯಾಗುತ್ತಿದೆ ಇದು ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಕುರುಕ್ಷೇತ್ರ ಸಿನಿಮಾ ನಿರ್ಮಾಪಕರಾದ ಮುನಿರತ್ನ ಬಹಳ ವಿಜೃಂಭಣೆಯಿಂದ ಬಿಡುಗಡೆ ಮಾಡಲು ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಕುರುಕ್ಷೇತ್ರ ಒಟ್ಟು ಐದು ಭಾಷೆಗಳಲ್ಲಿ ತೆರೆಕಾಣಲು ಸಜ್ಜಾಗಿದೆ, ಕನ್ನಡ ಜೊತೆ ತೆಲುಗು, ತಮಿಳು, ಮಳೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕುರುಕ್ಷೇತ್ರ ತೆರೆಕಾಣಲಿದೆ, ಈ ಚಿತ್ರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಕಲಾವಿದರೂ ಚಿತ್ರದ ಪ್ರಮೋಷನ್ ಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಅದೇಕೋ ಈ ಚಿತ್ರದ ಪ್ರಮೋಷನ್ ನಿಂದ ದೂರವೇ ಆಗಿಬಿಟ್ಟಿದ್ದಾರೆ, ನಾವು ಈ ಬಗ್ಗೆ ಮಾತನಾಡಲು ಮುಖ್ಯ ಕಾರಣ ನೆನ್ನೆ ಇದ್ದ ಸಿನಿಮಾ ಪ್ರೆಸ್ ಮೀಟ್ ನಲ್ಲು ನಿಖಿಲ್ ಕುಮಾರಸ್ವಾಮಿ ಕಾಣಿಸಲಿಲ್ಲ.
ಕುರುಕ್ಷೇತ್ರ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ನಿಖಿಲ್ ಬರಲಿಲ್ಲ, ಸಿನಿಮಾ ಪ್ರಚಾರದಿಂದ ದೂರ ಉಳಿದಿದ್ದಾರೆ, ಹಾಗು ಸಿನಿಮಾ ಪ್ರೆಸ್ ಮೀಟ್ ನಲ್ಲಿ ಗೈರಾಗಿದ್ದಾರೆ, ಇಡೀ ಚಿತ್ರತಂಡ ತಮ್ಮ ಚಿತ್ರದ ರೋಚಕ ಅನುಭವಗಳ ಬಗ್ಗೆ ಹಾಗೂ ತಮ್ಮ ಪಾತ್ರಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರೆ ನಿಖಿಲ್ ಕುಮಾರಸ್ವಾಮಿ ಅವರ ಗೈರು ಎಲ್ಲರಿಗೂ ಎದ್ದು ಕಾಣುತ್ತಿತ್ತು, ಇವರ ಈ ನಡುವಳಿಕೆ ಸದ್ಯ ನಿಗೂಢವಾಗಿದ್ದು ಎಲ್ಲರಲ್ಲೂ ಪ್ರಶ್ನೆ ಮೂಡಿದೆ.
ಅದೇನೇ ಇರಲಿ ಕನ್ನಡ ಚಿತ್ರರಂಗದ ಅತ್ಯುತ್ತಮ ಹಾಗೂ ದೊಡ್ಡ ಬಜೆಟ್ ಸಿನಿಮಾ ಕುರುಕ್ಷೇತ್ರ ನಮ್ಮೆಲ್ಲರ ಹೆಮ್ಮೆ, ವೈಯಕ್ತಿಕ ಮನಸ್ತಾಪಗಳು ಸಾವಿರ ಇದ್ದರೂ ಸಿನಿಮಾಗಾಗಿ ಎಲ್ಲರೂ ಒಂದುಗೂಡಿ ಕನ್ನಡಿಗರ ಒಗ್ಗಟ್ಟನ್ನು ದೇಶಕ್ಕೆ ಸಾರುವ ಸಮಯ ಇದಾಗಿದೆ, ನಿಖಿಲ್ ಕುಮಾರಸ್ವಾಮಿ ಅವರು ಕುರುಕ್ಷೇತ್ರ ತಂಡವನ್ನು ಆದಷ್ಟು ಬೇಗ ಸೇರಲಿ ಎಂದು ಅಭಿಮಾನಿಗಳ ಕೋರಿಕೆ.