ಹಾಗಲಕಾಯಿ ಎಂದಾಕ್ಷಣ ಮುಖ ಕಿವುಚಿಕೊಳ್ಳೋರು ಒಮ್ಮೆ ಇಲ್ಲಿ ಓದಿ..!!

0
1315

ಹಾಗಲಕಾಯಿ ಬಲು ಕಹಿಯಾಗಿರುತ್ತದೆ ಆದರೆ ಆರೋಗ್ಯವನ್ನು ನೀಡುತ್ತದೆ, ಕೆಲವು ಪದಾರ್ಥಗಳು ಬಾಯಿಗೆ ಸಿಹಿ ಯಾಗಿಯೇ ಇರುತ್ತದೆ ಆದರೆ ದೇಹಕ್ಕೆ ಹೆಚ್ಚಿನ ಅನಾರೋಗ್ಯವನ್ನು ನೀಡುತ್ತದೆ, ಹಾಗಲಕಾಯಿ ಎಷ್ಟು ಕಹಿ ಇದ್ದರೂ ಹಾಗಲಕಾಯಿ ಗೊಜ್ಜು ಎಂದಾಕ್ಷಣ ಬಾಯಲ್ಲಿ ನೀರು ಬರುವುದು ಖಂಡಿತ.

ಹಾಗಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಶರ್ಕರಪಿಷ್ಟ ಪ್ರೊಟೀನ್, ವಿಟಮಿನ್ ಇ ಮತ್ತು ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣದ ಅಂಶ, ಕೆರೋಟಿನ್, ಬ್ಲೂ ಕೋ ಸೈಡ್, ಇತ್ಯಾದಿ ಅಂಶಗಳು ಹೇರಳವಾಗಿರುತ್ತದೆ, ಯುರ್ವೇದದಲ್ಲೂ ಹಾಗಲಕಾಯಿಯ ಬಳಕೆಯ ಕುರಿತು ಹೆಚ್ಚಾಗಿಯೇ ಹೇಳಲಾಗಿದ್ದು ಇದು ಹಲವು ರೀತಿಯ ರೋಗನಾಶಕ ಅಥವಾ ರೋಗಗಳಿಗೆ ರಾಮಬಾಣ ವಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ.

ಮಧುಮೇಹ ರೋಗಿಗಳಿಗೆ ಹಾಗಲಕಾಯಿ ಸೇವನೆಯಿಂದ ಉತ್ತಮ ಪರಿಣಾಮ ಗಳು ಸಿಗುತ್ತವೆ, ಹಾಗಲಕಾಯಿ ದೇಹದಲ್ಲಿನ ಮೇದೋಜೀರಕ ಗ್ರಂಥಿ ಗಳನ್ನು ಉತ್ತೇಜಿಸಿ ಇನ್ಸುಲಿನ್ ಉತ್ಪಾದನೆಗೆ ಪ್ರಚೋದಿಸುತ್ತದೆ, ಇನ್ನು ಹಾಗಲಕಾಯಿಯನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿಟ್ಟುಕೊಂಡು ಪ್ರತಿದಿನ ಸೇವಿಸುತ್ತಿದ್ದರೆ ಮಧುಮೇಹ ರೋಗಿಗಳಿಗೆ, ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನಮ್ಮ ರಕ್ತವನ್ನು ಶುದ್ದಿ ಮಾಡುವುದಕ್ಕೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಹಾಗಲಕಾಯಿಗೆ ನಿಂಬೆ ರಸದೊಂದಿಗೆ ಮಿಶ್ರ ಮಾಡಿ ಸೇವಿಸಬೇಕು, ಇದರಿಂದ ಯಕೃತ್ ಶುದ್ಧವಾಗುತ್ತದೆ ಜೀವಕೋಶಗಳ ಪುನರುತ್ಪಾದನೆಯಲ್ಲಿ ತೊಡಗುತ್ತವೆ, ಜೊತೆಯಲ್ಲಿ ಕಿಡ್ನಿಯನ್ನು ಶುದ್ಧಗೊಳಿಸುವ ಮತ್ತು ಮೂತ್ರ ಕೋಶದಲ್ಲಿ ಸಂಗ್ರಹವಾಗುವ ಸಣ್ಣಪುಟ್ಟ ಕಲ್ಲುಗಳನ್ನು ನಿವಾರಿಸುವಲ್ಲಿ ಹಾಗಲಕಾಯಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಸಾಮಾನ್ಯವಾಗಿ ಬಹಳ ಜನರಿಗೆ ಗ್ಯಾಸ್ಟಿಕ್ ಮತ್ತು ಹೊಟ್ಟೆಯ ಹುಣ್ಣು, ಹುಳಿ ತೇಗು ಇಂತಹ ತೊಂದರೆಗಳು ಇರುತ್ತವೆ ಅಂಥವರು ಹಾಗಲಕಾಯಿಯ ರಸವನ್ನು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿಯು ಉತ್ತಮಗೊಂಡು ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ, ಹಾಗಲಕಾಯಿಯ ಬೀಜದಲ್ಲಿ ವಿರೇಚಕ ತೈಲ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ, ಹಾಗಾಗಿ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಇದು ಕಡಿಮೆ ಕ್ಯಾಲೋರಿ ತರಕಾರಿಯಾಗಿದ್ದು ಬೊಜ್ಜನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಚರ್ಮದ ತುರಿಕೆ, ಹುಳು ಕಡ್ಡಿ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಶ್ವಾಸಕೋಶಗಳಲ್ಲಿ ನ ಸಮಸ್ಯೆ, ಅಸ್ತಮಾ ಹಾಗೂ ಉಸಿರಾಟದ ತೊಂದರೆಗಳು ಇದ್ದವರು ನಿಯಮಿತವಾಗಿ ಹಾಗಲಕಾಯಿಯನ್ನು ಬಳಸುವುದರಿಂದ ಶ್ವಾಸನಾಳಗಳ ಒಳಪೊರೆಯ ಉರಿಯೂತವನ್ನು ನಿಯಂತ್ರಣ ಮಾಡುವುದಲ್ಲದೆ ಹೊಟ್ಟೆ ಹುಳುವಿನ ಸಮಸ್ಯೆಯನ್ನು ಸಹ ಹಾಗಲಕಾಯಿ ರಸ ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಮಾಡುತ್ತದೆ.

ಹಲವು ಕೂದಲಿನ ಸಮಸ್ಯೆ ಗಳನ್ನು ಸಹ ಹಾಗಲಕಾಯಿಯನ್ನು ಬಳಸಿ ಪರಿಹಾರವನ್ನು ಕಂಡುಕೊಳ್ಳಬಹುದು ತಲೆ ಕೂದಲ ಹೊಳಪಿಗಾಗಿ ಹಾಗಲ ಕಾಯಿ ರಸಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ತಲೆಗೆ ಹಚ್ಚುವುದರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ, ತಲೆ ಕೂದಲು ಗಳು ಕಪ್ಪಾಗಿ ಕೂದಲು ಸೀಳುವಿಕೆ ಯ ಸಮಸ್ಯೆ ಕೂಡ ನಿಯಂತ್ರಣಕ್ಕೆ ಬರುತ್ತದೆ ಬಾಲ ನೆರೆ ತಪ್ಪುತ್ತದೆ ಇನ್ನು ಹಾಗಲಕಾಯಿ ಜೊತೆ ಜೀರಿಗೆ ಸೇರಿಸಿ ರುಬ್ಬಿ ತಲೆಗೆ ಹಚ್ಚಿಕೊಂಡರೆ ಕೂದಲ ಹೊಟ್ಟಿನ ಸಮಸ್ಯೆಯು ಪರಿಹಾರವಾಗುತ್ತದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here