ಕಾಲರಾ, ಮೂಲವ್ಯಾದಿ ಹಾಗು ಆಮಶಂಕೆ ಸೇರಿ ಈ 12 ರೋಗಗಳನ್ನು ವಾಸಿ ಮಾಡುವ ನಿಂಬೆ..!!

0
1950

ಚತುರ್ಥಕ ಜ್ವರ : ನಾಲ್ಕು ದಿನಗಳಿಗೊಮ್ಮೆ ಬರುವ ನಿಯತಕಾಲಿಕ ಚಳಿ ಜ್ವರಕ್ಕೆ ಚತುರ್ಥಕ ಜ್ವರ ಎಂದು ಹೆಸರು, ಇದನ್ನೇ ಗ್ರಾಮೀಣ ಭಾಗದಲ್ಲಿ ನಾಲ್ಕರ ಚಳಿ ಎಂದು ಹೇಳುತ್ತಾರೆ, ಇದಕ್ಕೆ ನಿಂಬೆಹಣ್ಣನ್ನು ಇಬ್ಬಾಗ ಮಾಡಿ ಬೀಗ ತೆಗೆದು ಅದಕ್ಕೆ ತುಂಬೆಯ ರಸ ಮತ್ತು ನಯವಾದ ಜೀರಿಗೆ ಪುಡಿ ತುಂಬಿ ಕೊಂಡದ ಮೇಲಿಟ್ಟು ಕಾಯಿಸಿ ಆರಿದ ನಂತರ ಚೀಪಿ ತಿನ್ನುವುದರಿಂದ ನಾಕರ ಚಳಿ ಗುಣವಾಗುತ್ತದೆ ಈ ರೀತಿ ನಾಲ್ಕಾರು ದಿನ ಮಾಡಬೇಕ.

ಅತಿಸಾರ : ಇದು ಮಲವಿಸರ್ಜನೆಗೆ ಸಂಬಂಧಿಸಿದ ರೋಗ, ವಾತ, ಪಿತ್ತ ಮತ್ತು ಕಪ ಗಳಿಗೆ ಸಂಬಂಧಿಸಿದ ಎಲ್ಲಾ ಅತಿಸಾರವು ಗುಲಗಂಜಿ, ತೂಕದಷ್ಟು ಅರ್ಕ ಲವಣವನ್ನು ನಿಂಬೆ ರಸದಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಪರಿಹಾರವಾಗುತ್ತದೆ.

ವಾಂತಿ ಭೇದಿ : ಅಕ್ಕಿಯನ್ನು ಹುರಿದು ರವೆ ಮಾಡಿ ಮೊಸರಿನಲ್ಲಿ ನೆನೆಸಿ ಒಣಗಿಸಿ ನಿನಗೆ ನಿಂಬೆ ರಸದಲ್ಲಿ ಸೇವಿಸಿದರೆ ವಾಂತಿ ಭೇದಿ ನಿವಾರಣೆಯಾಗುತ್ತದೆ.

ರಕ್ತ ಮಲ : ಜೊತೆಯಲ್ಲಿ ರಕ್ತ ಹೋಗುತ್ತಿದ್ದರೆ 18ರಿಂದ 22 ನಿಂಬೆ ರಸದೊಂದಿಗೆ 4 ಗ್ರಾಂ ಸಕ್ಕರೆ ಸೇರಿಸಿ ನಿತ್ಯ ಎರಡು ವೇಳೆ ಕುಡಿಯುವುದರಿಂದ ಇದು ನಿವಾರಣೆಯಾಗುತ್ತದೆ.

ಆಮಶಂಕೆ : ಮಲದ ಜೊತೆಗೆ ಅಮು ಹೋಗುತ್ತಿದ್ದರೆ ಅದನ್ನು ಆಮಶಂಕೆ ಎನ್ನಲಾಗುತ್ತದೆ, ಇದಕ್ಕೆ ಅಳಲೆ ಕಾಯಿ ಸಿಪ್ಪೆ, ಶುಂಠಿ, ಬೆಲ್ಲ ಮತ್ತು ನಿಂಬೆ ಇವೆಲ್ಲವನ್ನೂ ಸಮಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ ಅರೆದು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ನೀರಿನಲ್ಲಿ ಒಂದು ಮಾತ್ರೆ ಸೇವಿಸಬೇಕು ಇದರಿಂದ ಆಮಶಂಕೆ ನಿಯಂತ್ರಣಕ್ಕೆ ಬರುತ್ತದೆ.

ಕಾಲರ : ಚಕ್ರಾಣಿಕೆ ಯ ಬೇರನ್ನು ನಿಂಬೆ ಹಣ್ಣಿನ ರಸದಲ್ಲಿ ಅರೆದು ಪ್ರತಿ ಅರ್ಧ ಗಂಟೆಗೊಮ್ಮೆ ಕೊಡುವುದರಿಂದ ಕಾಲರ ಗುಣವಾಗುತ್ತದೆ.

ಮೂಲವ್ಯಾಧಿ : ಮೂಲವ್ಯಾಧಿ ಯಿಂದಾಗಿ ಅಥವಾ ಇತರೆ ಕಾರಣದಿಂದ ಗುದದ್ವಾರದಲ್ಲಿ ರಕ್ತ ಸ್ರಾವವಾಗುತ್ತಿದ್ದರೆ, ಊಟವಾದ ಕೂಡಲೇ ಇಡೀ ನಿಂಬೆಹಣ್ಣನ್ನು ಹಾಗೆಯೇ ಹಲ್ಲಿನಿಂದ ಕಚ್ಚಿ ಪೂರ್ಣ ರಸವನ್ನು ಹೀರಬೇಕು, ಇದರಿಂದ ಮೂಲವ್ಯಾಧಿ ನಿವಾರಣೆಯಾಗುವುದಲ್ಲದೆ ರಕ್ತಪಿತ್ತ ಕೂಡ ಪರಿಹಾರವಾಗುತ್ತದೆ, ಹೀಗೆ ಎರಡು ವಾರದಿಂದ ಮೂರು ವಾರಗಳ ಕಾಲ ಮಾಡಬೇಕು.

ಜೀರ್ಣ ಶಕ್ತಿ ಹೆಚ್ಚಾಗಲು : ಎರಡು ಚಮಚ ನಿಂಬೆರಸ, 1 ಚಮಚ ಶುಂಠಿ ರಸ, ಸೈಂಧವ ಲವಣ 2 ಗ್ರಾಂ, ಒಂದು ಚಮಚ ಜೇನು ಇವುಗಳೆಲ್ಲ ಸೇರಿಸಿ ಬೆಳಗ್ಗೆ ಒಂದು ವಾರ ಸೇವಿಸಬೇಕು, ಇದನ್ನು ಸೇವಿಸಿದ 1 ಗಂಟೆಯವರೆಗೆ ಯಾವುದೇ ಆಹಾರ ತೆಗೆದುಕೊಳ್ಳಬಾರದು.

ಜಂತು ಹುಳು : ಪ್ರತಿದಿನ ಬೆಳಗ್ಗೆ ಒಂದು ನಿಂಬೆ ಹಣ್ಣಿನ ರಸದಲ್ಲಿ 1 ಗುಲಗಂಜಿಯಷ್ಟು ಉರಿದ ಹಿಂಗನ್ನು ಮಿಶ್ರಮಾಡಿ ಕುಡಿಯಬೇಕು, ಹೀಗೆ ಆರು ದಿನ ಆದಮೇಲೆ ಏಳನೇ ದಿನ ಹುಳುಗಳೆಲ್ಲ ಬಿದ್ದು ಹೋಗುತ್ತವೆ.

ಕಾಮಾಲೆ : 1 ಚಮಚ ನಿಂಬೆರಸ, ಎರಡು ಚಮಚ ಜೇನುತುಪ್ಪ, ಒಂದು ಗಂಜಿ ಸೈಂಧವ ಲವಣ ಸೇರಿಸಿ ಕುಡಿದ ಮೇಲೆ ಅರ್ಧ ಲೋಟ ಬಿಸಿ ಹಾಲನ್ನು ಕುಡಿಯಬೇಕು, ಇದನ್ನು ರಾತ್ರಿ ವೇಳೆ ಮಾಡಬೇಕು.

ನಿತ್ಯ ಬೆಳಗ್ಗೆ 4 ಚಮಚ ನಿಂಬೆ ರಸಕ್ಕೆ 2 1 ಚಮಚ ಜೇನು ಸೇರಿಸಿ ಎರಡರಿಂದ ಮೂರು ವಾರ ಕುಡಿಯಬೇಕು.

ಹೃದ್ರೋಗ ನಿಯಂತ್ರಣಕ್ಕೆ : ನಿಂಬೆರಸದಲ್ಲಿ ಒಂದೆರಡು ಮುತ್ತುಗದ ಬೀಜವನ್ನು ತೆಗೆದು ಗಜ್ಜುಗದ ಗಾತ್ರದ ಮಾತ್ರೆ ಮಾಡಿ ಎರಡು ದಿನ ಬೆಳಗ್ಗೆ ಸೇವಿಸಬೇಕು, ನಿಂಬೆಹಣ್ಣಿನ ಶರಬತ್ತನ್ನು ಪ್ರತಿದಿನ ಬೆಳಗ್ಗೆ ಸೇವಿಸಬೇಕು.

LEAVE A REPLY

Please enter your comment!
Please enter your name here