ಪಂಚಮುಖಿ ಆಂಜನೇಯ ಸ್ವಾಮಿಯ 5 ಅವತಾರಗಳ ಪವಾಡಗಳ ಬಗ್ಗೆ ತಿಳಿದು ಸಕಲ ಕಷ್ಟಗಳನ್ನು ನೀಗಿಸಿಕೊಳ್ಳಿ.

0
2428

ರಾಮನ ಭಕ್ತ ಹನುಮನನ್ನು ನಾವು ಹಲವು ರೀತಿಯಲ್ಲಿ ಅಥವಾ ಹಲವು ರೂಪದಲ್ಲಿ ಪೂಜೆ ಮಾಡುವ ಪದ್ಧತಿಯನ್ನು ಪ್ರಪಂಚಾದ್ಯಂತ ಹೊಂದಿದ್ದೇವೆ, ಕೇವಲ ಹಿಂದೂ ಧರ್ಮ ಮಾತ್ರವಲ್ಲದೆ ಇನ್ನೂ ಹಲವು ಧರ್ಮಗಳನ್ನು ಹನುಮಂತನ ಅವತಾರಕ್ಕೆ ಪೂಜೆ ನಡೆಯುತ್ತದೆ ಎಂದರೆ ನಿಮಗೆ ಒಂದು ಕ್ಷಣ ಅಚ್ಚರಿ ಮೂಡಬಹುದು, ಕಾರ್ಯಸಿದ್ದಿ ಹನುಮಾನ್, ವೀರಾಂಜನೇಯ ಸ್ವಾಮಿ, ಸಂಕಟ ವಿಮೋಚನ ಹನುಮಾನ, ಮಹಾವೀರ ಹನುಮಾನ್, ಕಷ್ಟ ನೀಗಿಸುವ ಹನುಮಾನ್ ಹೀಗೆ ಹತ್ತು ಹಲವು ಅವತಾರಗಳಿಗೆ ನಾವು ನಮಿಸಿ ಧನ್ಯರಾಗುತ್ತಾವೆ, ಇದರ ಜೊತೆಯಲ್ಲಿ ಪ್ರಮುಖವಾಗಿ ಬರುವುದು ಪಂಚಮುಖಿ ಆಂಜನೇಯನ ಅವತಾರ, ಪಂಚಮುಖಿ ಆಂಜನೇಯನ ಅವತಾರದ ಬಗ್ಗೆ ಹಾಗೂ 5 ಅವತಾರಗಳ ಪವಾಡಗಳ ಬಗ್ಗೆ ವಿವರವಾಗಿ ತಿಳಿಯೋಣ.

ಮೊದಲನೇ ಅವತಾರ ಹನುಮಂತ : ಮೂರ್ತಿಯಲ್ಲಿ ಹನುಮಂತನ ಮುಖ ಪೂರ್ವದ ಕಡೆ ಇರುತ್ತದೆ, ಪೂರ್ವದಲ್ಲಿರುವ ಹನುಮಂತನ ಮುಖದ ಅರ್ಥ ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಾಣ ಮಾಡುವುದರ ಜೊತೆಯಲ್ಲಿ ಯಶಸ್ಸು ನೀಡಿ ಹರಿಸುವುದೇ ಈ ಮುಖದ ಕಾರ್ಯವಾಗಿದೆ.

ಎರಡನೆಯ ಅವತಾರ ನರಸಿಂಹ : ಮೂರ್ತಿಯಲ್ಲಿ ನರಸಿಂಹಸ್ವಾಮಿಯ ಮುಖ ದಕ್ಷಿಣದತ್ತ ಇರುತ್ತದೆ, ಇದು ನಿರ್ಭಯತೆ ಮತ್ತು ಸಂಕಟವನ್ನು ಎದುರಿಸುವ ಶಕ್ತಿಯನ್ನು ನೀಡುತ್ತದೆ, ಭೂತ ಪ್ರೇತ ಸಂಬಂಧಿಸಿದ ಯಾವುದೇ ಮನೆಗಳಿದ್ದರೂ ಮತ್ತು ಶತೃ ಕಾಟವಿದ್ದರೂ ಅವುಗಳನ್ನು ನಿವಾರಿಸುವ ಶಕ್ತಿ ನರಸಿಂಹಸ್ವಾಮಿಯ ಅವತಾರದಲ್ಲಿ ಇದೆ.

ಮೂರನೇ ಅವತಾರ ಗರುಡ : ಗರುಡನ ಮುಖವಾಡ ವಿಗ್ರಹದ ಪಶ್ಚಿಮ ದಿಕ್ಕಿನಲ್ಲಿ ಇದೆ, ಜಾದು, ಮಾಟ, ಮಂತ್ರಗಳ ಕೈವಾ ಡದಲ್ಲಿ ಸಿಲುಕಿದ್ದರೆ, ಅಥವಾ ಪಿಶಾಚ ಬಾದೇ, ವಿಷಬಾಧೆ ಭೂತ ಬಾದೇ ಇವುಗಳಿಂದ ಸಂರಕ್ಷಣೆ ನೀಡುತ್ತದೆ, ಕೋಟಿಸೂರ್ಯ ಗಳ ತೇಜದಂತೆ ಈ ಮುಖದ ತೇಜವಿದೆ.

ನಾಲ್ಕನೇ ಅವತಾರ ವರಹ : ವಿಗ್ರಹದ ಉತ್ತರ ದಿಕ್ಕಿನಲ್ಲಿ ಇರುವ ಈ ನಾಲ್ಕನೇ ಅವತಾರದ ಮುಖವಾಡ ಜೀವನದಲ್ಲಿ ಪ್ರಗತಿ, ಧನಸಂಪತ್ತು ಮತ್ತು ಸುಖಭೋಗಗಳನ್ನು ನೀಡುವ ಕಾರ್ಯ ಮಾಡುತ್ತದೆ, ನಿಮಗೆ ನೆನಪಿರಬಹುದು ಲಕ್ಷ್ಮಣನಿಗೆ ಶಕ್ತಿ ಬೇಕಿದ್ದಾಗ ಈ ಮುಖವು ಅವನಿಗೆ ಜೀವನದ ನೀಡಿತು ಮತ್ತು ಲಂಕೆಯನ್ನು ದಹಿಸುವಂತೆ ಮಾಡಿತು.

ಕೊನೆಯ ಅಥವಾ ಐದನೇ ಅವತಾರ ಹಯಗ್ರೀವ : ಆಕಾಶದ ಕಡೆ ಈ ಮುಖವು ನೋಡುತ್ತಿರುತ್ತದೆ, ಹಾಗೂ ಈ ಮುಖವು ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಹನುಮಂತನ ಐದನೇ ಅವತಾರ ಇದಾಗಿದೆ, ಈ ಮುಖಮಾಡಲು ಜ್ಞಾನ ಹಾಗೂ ಸಂತತಿ ಈ ಎರಡು ಸಂಗತಿಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತದೆ.

ಐದು ದೀಪಗಳಲ್ಲಿ ಐದನೇ ಅಸುರ ರಾಸುರ ರಾಕ್ಷಸ ಪಂಚಮುಖಿ ಮಾರುತಿಯ ಪಾದದ ಕೆಳಗಡೆ ಯಲ್ಲಿರುವ ರಾಕ್ಷಸ ನಾಗಿದ್ದಾನೆ, ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮನವಿ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನಗಳಾಗಿವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಚಾರವೇ.

LEAVE A REPLY

Please enter your comment!
Please enter your name here