ಈ ಬಾರಿಯ ಬಿಗ್ ಬಾಸ್ 7 ಯಶಸ್ವಿಯಾಗಿ ಪೂರೈಸಲು ಶೈನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಅವರ ಗೆಳೆತನವು ಒಂದು ಕಾರಣ ಎಂದರೆ ತಪ್ಪಾಗಲಾರದು, ಕಾರಣ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಸಂದರ್ಭದಲ್ಲಿ ಗೆಲುವಿಗಾಗಿ ಎಷ್ಟೇ ಜಗಳವಾಡಿದರು ಟಾಸ್ಕ್ ಮುಗಿದ ನಂತರ ಎಲ್ಲವನ್ನೂ ಮರೆತು ಮತ್ತೆ ಸ್ನೇಹಿತರಾಗಿ ಒಟ್ಟಿಗೆ ಕೂತು ಕಾಲಕಳೆಯಲು ಶುರುಮಾಡುತ್ತಿದ್ದರು ಇದು ನಿಜವಾಗಿಯೂ ಬಿಗ್ಬಾಸ್ ನೋಡಿದರಲ್ಲಿ ಖುಷಿಯನ್ನು ತಂದಿದ್ದು, ಇನ್ನು ವಾಸುಕಿ ವೈಭವ್ ಮನೆಯಲ್ಲಿದ್ದ ಅಷ್ಟೂ ದಿನ ಶೆಟ್ಟಿ ನನ್ನ ನಿಜವಾದ ಸ್ನೇಹಿತ ಎಂದು ಹೇಳಿಕೆ ನೀಡುತ್ತಿದ್ದರು, ಇದೀಗ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಮುಗಿದಿದೆ ಶೆಟ್ಟಿಯವರು ವಿಜೇತರಾಗಿದ್ದಾರೆ, ಮನೆಯ ಅಭ್ಯರ್ಥಿಗಳು ಹೊರಬಂದು ಮಾಧ್ಯಮಗಳೊಂದಿಗೆ ಸಂದರ್ಶನ ನೀಡಲು ಬಿಜಿಯಾಗಿದ್ದಾರೆ.
ವಾಸುಕಿ ವೈಭವ್ ಅವರು ಕೂಡ ತಮ್ಮ ಸೋಲು ಹಾಗೂ ತಮ್ಮ ಗೆಳೆಯನ ಗೆಲುವಿನ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು, ನನಗೆ ಮೊದಲೇ ಗೊತ್ತಿತ್ತು ಶೈನ್ ಶೆಟ್ಟಿ ಅಥವಾ ನಾನು ಇಬ್ಬರು ನನ್ನ ಅಭ್ಯರ್ಥಿಗಳು, ಆದರೆ ಬಿಗ್ ಬಾಸ್ ಸ್ಪರ್ಧೆಯನ್ನು ಒಬ್ಬರೇ ಗೆಲ್ಲಬೇಕು, ಫೈನಲ್ನಲ್ಲಿ ಮೂವರು ಇರಲು ಸಾಧ್ಯವಿಲ್ಲ ಇಬ್ಬರು ಇರಬೇಕು, ಆದ್ದರಿಂದ ನನಗೆ ಗೆಲುವು ಸಿಗುತ್ತಿದೆ ಖುಷಿಯಿಂದ ಪಡೆಯುತ್ತಿದ್ದೆ ಇಲ್ಲವಾದರೆ ಮನೆಗೆ ಸುಮ್ಮನೆ ಹಿಂತಿರುಗುತ್ತೇನೆ ಎಂಬ ಯೋಚನೆಗಳನ್ನು ಮೊದಲೇ ಮಾಡಿಕೊಂಡಿದ್ದೇನೆ, ಶೈನ್ ಶೆಟ್ಟಿ ಅಥವಾ ನಾನು ನಮ್ಮ ಜೀವನದಲ್ಲಿ ಬಹಳಷ್ಟು ಕಷ್ಟವನ್ನು ನೋಡಿದ್ದೇವೆ ಇಬ್ಬರಲ್ಲಿ ಯಾರು ಗೆದ್ದರು ಇಬ್ಬರಿಗೂ ಸಂತೋಷವಾಗುತ್ತಿತ್ತು.
ಅದರಲ್ಲೂ ನನ್ನ ಹಾಗೂ ಶೈನ್ ಶೆಟ್ಟಿಯ ನಡುವೆ ಸ್ನೇಹ ಹುಟ್ಟಿಕೊಳ್ಳಲು ಪ್ರಮುಖ ಕಾರಣ ನಾವಿಬ್ಬರೂ ನಮ್ಮ ಜೀವನದಲ್ಲಿ ಪಟ್ಟಿರುವ ಕಷ್ಟಗಳು, ನಾನು ಯಾವ ರೀತಿ ಜೀವನದಲ್ಲಿ ಗೆಲ್ಲಲು ಕಷ್ಟಪಟ್ಟಿದ್ದೇನೆ ಅವರು ಕೂಡ ಅದೇ ರೀತಿ ಕಷ್ಟಪಟ್ಟಿದ್ದಾರೆ ಅವರು ಪಟ್ಟಿರುವ ಶ್ರಮ ನನಗೆ ಮೊದಲೇ ಗೊತ್ತು ನನ್ನ ಶ್ರಮ ಕೂಡ ಅವರಿಗೂ ಗೊತ್ತು, ಯಾರ ಮೇಲೆ ಯಾರೂ ಕೂಡ ಪೊಸೆಸಿವ್ ಆಗಿರಲಿಲ್ಲ ಇದೇ ಕಾರಣಕ್ಕೆ ನಮ್ಮ ಸ್ನೇಹ ಮತ್ತು ಇಬ್ಬರು ಹುಡುಗಿನ ಅಭಿಮಾನ ಸ್ನೇಹವಾಗಿ ರೂಪಗೊಂಡು ವ್ಯಕ್ತಿಯಾಗಿ ಉಳಿದುಕೊಂಡಿದೆ ಎಂದರು.