ಹೆಂಡತಿಗಿಂತ ಗಂಡನ ವಯಸ್ಸು ಕಡಿಮೆ ಇರ ಬಾರದು ಏಕೆ ?

0
3846

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಗುರು ಹಿರಿಯರು ನಿಶ್ಚಯಿಸಿ ಮಾಡುವ ಮದುವೆಯಲ್ಲಿ ಗಂಡಸಿನ ವಯಸ್ಸು ಹುಡುಗಿಯ ವಯಸ್ಸಿಗಿಂತ ಮೂರರಿಂದ ಏಳು ವರುಷಗಳು ಹೆಚ್ಚಿರುತ್ತದೆ, ಈಗಲೂ ಸಹ ಅರೆಂಜ್ ಮ್ಯಾರೇಜ್ ಆದರೆ ಹುಡುಗ ಹುಡುಗಿಯ ವಯಸ್ಸಿನ ಅಂತರ ಹೀಗೆ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಲವ್ ಮ್ಯಾರೇಜ್ ಬಹಳ ಜನಪ್ರಿಯ ಗೊಳ್ಳುತ್ತಿದೆ, ಪ್ರೀತಿಯಲ್ಲಿ ಯಾವುದೇ ವಯಸ್ಸಿನ ಅಂತರ ಇರುವುದಿಲ್ಲ ಎಂಬುದು ಪ್ರೇಮಿಗಳ ವಾದ, ಆದ್ದರಿಂದಲೇ ಪ್ರೇಮಿಗಳು ವಯಸ್ಸಿನ ಅಂತರವನ್ನು ಲೆಕ್ಕಿಸದೆ ಹುಡುಗನ ವಯಸ್ಸು ಚಿಕ್ಕದಾದರೂ ದೊಡ್ಡ ವಯಸ್ಸಿನ ಹುಡುಗಿಯರನ್ನು ಮದುವೆ ಆಗುತ್ತಾರೆ, ಇದರಿಂದ ಯಾವುದಾದರೂ ಸಮಸ್ಯೆಗಳು ಇರಬಹುದಾ ಇದರ ಬಗ್ಗೆ ಒಂದು ಸಣ್ಣ ಚರ್ಚೆ ನಡೆಸೋಣ.

ಮೊದಲೆನೆಯದಾಗಿ ಸಹಜವಾಗಿಯೇ ಹೆಣ್ಣು ಮಕ್ಕಳು ಅತಿಯಾಗಿ ಯೋಜನೆಯನ್ನು ಮಾಡುತ್ತಾರೆ ಮತ್ತು ತಿಳುವಳಿಕೆಯನ್ನು ಹೊಂದಿರುತ್ತಾರೆ, ಹೆಂಗಸರು ಯಾವಾಗಲೂ ಮೂರರಿಂದ ಐದು ವರ್ಷಗಳ ದೂರದೃಷ್ಟಿಯನ್ನು ಹೊಂದಿರುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳಿವೆ, ಆದುದರಿಂದ ಅವರಿಗಿಂತಲೂ ಹೆಚ್ಚು ವಯಸ್ಸಿನವರೊಂದಿಗೆ ಮದುವೆಯಾದರೆ ಮಾತ್ರ ತಿಳುವಳಿಕೆಯ ವಿಷಯದಲ್ಲಿ ಸಮತೋಲನ ಇರುತ್ತದೆ.

ಗಂಡನಿಗಿಂತ ಹೆಂಡತಿಯ ವಯಸ್ಸು ಕಡಿಮೆ ಇರುವುದು ಒಳ್ಳೆಯದು ಎಂಬುದು ಕೆಲವರ ವಾದ, ಕಾರಣ ವಯಸ್ಸಾದ ಮೇಲೆ ಹೆಂಡತಿಯ ವಯಸ್ಸು ಇನ್ನು ಚಿಕ್ಕದಾಗಿ ಇರುವುದರಿಂದ ಗಂಡನಿಗೇ ವೃದ್ಧಾಪ್ಯದಲ್ಲಿ ಸೇವೆ ಮಾಡಬಹುದು, ಇಬ್ಬರ ವಯಸ್ಸು ಒಂದೇ ಇದ್ದರೆ ಇವರಿಬ್ಬರ ಸೇವೆ ಮಾಡಲು ಬೇರೊಬ್ಬರು ಬೇಕಾಗುತ್ತಾರೆ.

ಇನ್ನು ಕೆಲವು ಅಧ್ಯಯನಗಳ ಪ್ರಕಾರ ಗಂಡ ಹೆಂಡತಿಯರ ನಡುವೆ ಜಗಳ ಮೂಡಲು ಅವರಿಬ್ಬರ ಮಧ್ಯೆ ಇರುವ ಅಹಂಕಾರವೇ ಮುಖ್ಯ ಕಾರಣ ಎಂದು ಹೇಳಲಾಗಿದೆ, ಪ್ರತಿವರ್ಷ ಇದೇ ಕಾರಣಕ್ಕಾಗಿ ಶೇಕಡ 20ರಷ್ಟು ದಂಪತಿಗಳು ವಿಚ್ಛೇದನವನ್ನು ಪಡೆಯುತ್ತಿದ್ದಾರೆ, ಇನ್ನು ಹಿರಿಯರು ಹೇಳುವ ಪ್ರಕಾರ ಗಂಡನ ವಯಸ್ಸು ಹೆಂಡತಿಗೆ ವಯಸ್ಸಿಗಿಂತಲೂ ಹೆಚ್ಚಿಗೆ ಇರುವುದರಿಂದ ಇಬ್ಬರ ಮಧ್ಯೆ ಹೊಂದಾಣಿಕೆ ಹೆಚ್ಚಿರುತ್ತದೆ ಎಂದು ಹಾಗೂ ಸಮವಯಸ್ಕರಾದರೆ ಅಹಂಕಾರ ಪ್ರದರ್ಶನದ ಸಮಸ್ಯೆಯು ಕಾಡುತ್ತದೆಯಂತೆ.

ಇನ್ನು ಮಕ್ಕಳನ್ನು ಪಡೆಯುವ ವಿಚಾರವಾಗಿ ಮಾತಾಡುವುದಾದರೆ ಗಂಡಸಿನ ವಯಸ್ಸಿಗಿಂತ ಹೆಂಡತಿಗೆ ವಯಸ್ಸು ಎರಡು ರಿಂದ ಮೂರು ವರ್ಷಕ್ಕಿಂತ ಕಡಿಮೆ ಇರಬೇಕಂತೆ, ಅದಕ್ಕಿಂತ ಹೆಚ್ಚಿದ್ದರೆ ಸಮಸ್ಯೆಗಳೇ, ಅಧ್ಯಯನಗಳು ಹೇಳುವಂತೆ ಸ್ತ್ರೀಯರಿಗೆ 30 ವರ್ಷ ವಯಸ್ಸಿನ ನಂತರ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಹಾಗೂ ಪುರುಷರಿಗೆ 35ವರ್ಷ ವಯಸ್ಸಿನ ನಂತರ ಹೆಚ್ಚುತ್ತದೆ, ಇದಕ್ಕೆ ಅನುಗುಣವಾಗಿಯೇ ಗಂಡ ಹೆಂಡತಿಯರ ವಯಸ್ಸು ಇದ್ದರೆ ಅವರ ದಾಂಪತ್ಯ ಜೀವನ ತೃಪ್ತಿಕರವಾಗಿ ಸಾಗುತ್ತದೆ, ಇನ್ನು ಲೈಂಗಿಕ ಅಸಂತೃಪ್ತಿಯ ಇಂದಲೇ ಶೇಕಡಾ 30 ನಷ್ಟ ದಂಪತಿಗಳು ಜಗಳವಾಡುತ್ತಾರೆ.

ಹೆಂಗಸರಿಗೆ ಹೋಲಿಸಿದರೆ ಗಂಡಸರ ಮನಸ್ಥಿತಿ ತುಂಬಾ ಮೃದುವಾಗಿರುತ್ತದೆ, ವೃದ್ಧಾಪ್ಯದಲ್ಲಿ ಮೊದಲು ಗಂಡ ಮರಣಿಸಿದರೆ ಗಂಡನ ನೆನಪಿನಲ್ಲಿ ಹೆಂಡತಿ ಹೇಗೋ ತನ್ನ ಉಳಿದ ಜೀವನವನ್ನು ಕಳೆಯುತ್ತಾರೆ, ಆದರೆ ಹೆಂಡತಿ ಮೊದಲು ಮರಣ ಹೊಂದಿದರೆ ಗಂಡ ಅದನ್ನು ತಡೆಯಲಾರದೆ ಅತಿ ಬೇಗ ಮರಣವನ್ನು ಜೀರ್ಣಿಸಿಕೊಳ್ಳಲಾರ ಮಾನಸಿಕ ಒತ್ತಡಗಳಿಗೆ ಸಿಲುಕಿ ಬಲವಂತವಾಗಿ ಸಾಯುವ ಪ್ರಯತ್ನವನ್ನು ಮಾಡುತ್ತಾನೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here