ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುವ ಹಾಸನದ ಶ್ರೀ ಪುರದಮ್ಮ ದೇವಿ ಮಹಾತ್ಮೆ ಬಗ್ಗೆ ನಿಮಗೆ ಗೊತ್ತಾ ?

0
2252

ಶ್ರೀ ಪುರದಮ್ಮ ದೇವಿ, ಹಾಸನ ಪುರದಮ್ಮ ಎಂದಾಕ್ಷಣ ನೆನಪಿಗೆ ಬರೋದು ಎಂಥಾ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸುತ್ತಾಳೆ ಎನ್ನುವ ಬಲವಾದ ನಂಬಿಕೆ, ಇದೆ ನಂಬಿಕೆ ಮೇಲೆ ಜೀವನ ನಿಂತಿದೆ ಆದರೂ ಅದರಂತೆ ದೇವರ ಅನುಗ್ರಹ ಸಹ ಅಗತ್ಯವಾಗಿರುತ್ತದೆ ಅಲ್ಲವೇ, ಇನ್ನು ಹಾಸನದ ಪುರದಮ್ಮ ದೇವಿಯ ಮಹಿಮೆ ಸಹ ಅಪಾರ ಭಕ್ತರ ಎಂತಹ ಕಷ್ಟಗಳಿದ್ದರೂ, ಈ ದೇವಿ ಪರಿಹರಿಸುತ್ತಾಳೆ ಅನ್ನೋ ಅಪಾರವಾದ ನಂಬಿಕೆಯಿಂದ ಜಿಲ್ಲೆ ಮಾತ್ರವಲ್ಲದೆ ನಾಡಿನ ನಾನಾ ಕಡೆಗಳಿಂದ ಬರುವ ಭಕ್ತರದು ಅದೇ ಕಾರಣಕ್ಕೆ ಅಪಾರ ಭಕ್ತರು ಶಕ್ತಿ ದೇವತೆಯ ದರ್ಶನಕ್ಕೆ ಮತ್ತು ಪೂಜಾ ಕಾರ್ಯಗಳಿಗಾಗಿ ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಾರೆ.

ತಾಲೂಕಿನ ಸೊಪ್ಪಿನಹಳ್ಳಿ ಬಳಿ ಇರುವ ಪುರದಮ್ಮ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ, ಭಕ್ತರ ಕೋರಿಕೆಯನ್ನು ಶೀಘ್ರ ಈಡೇರಿಸುವ ದೇವಿ ಎಂಬ ನಂಬಿಕೆ ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಬೇಡಿದ ವರ ನೀಡಿದ ಅಮ್ಮನಿಗೆ ಹರಕೆ ತೀರಿಸಲು ದೇವಾಲಯ ಬಳಿಯೇ ಮಾಂಸದೂಟ ತಯಾರಿಸಿ ಎಡೆ ಇಡುವುದು ಮತ್ತು ಬಂಧು ಬಳಗವನ್ನು ಕರೆದು ಊಟ ಹಾಕುವುದು ಇಲ್ಲಿನ ಪ್ರತೀತಿ, ಈ ಸಂಪ್ರದಾಯ ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ.

ಇಷ್ಟಾರ್ಥಗಳನ್ನು ಕರುಣಿಸುವ ಈ ದೇವಾಲಯಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕೋಳಿ, ಕುರಿ ಮತ್ತು ಹಂದಿಯನ್ನು ದೇವಿಗೆ ಬಲಿ ಕೊಟ್ಟು ಹರಕೆ ತೀರಿಸುತ್ತಾರೆ, ಕೆಲವರು ಈ ದೇವಿಗೆ ಎರಡು ತಿಂಗಳಿಗೊಮ್ಮೆ ಪೂಜೆ ನೆರವೇರಿಸಿದರೆ ಮತ್ತೆ ಕೆಲವರು ಪ್ರತಿ ತಿಂಗಳು ಪೂಜೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗುತ್ತಾರೆ.

ಮತ್ತೊಂದು ವಿಶೇಷ ಎಂದರೆ ಈ ದೇವಿಗೆ ಪೂಜಾರಿಯೇ ಇಲ್ಲ, ಭಕ್ತರೇ ಪೂಜೆ ನೆರವೇರಿಸಿಕೊಂಡು ಬರುವುದುಂಟು, ಪುರದಮ್ಮನಿಗೆ ಮಾಂಸದೂಟ ಎಡೆ ಇಡಲಾಗುತ್ತದೆಯಾದರೂ, ಸಸ್ಯಹಾರಿಗಳು ಕೂಡ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಹರಕೆ ಕಟ್ಟಿಕೊಳ್ಳುತ್ತಾರೆ, ಅಪಾರ ನಂಬಿಕೆ ಹೊಂದಿರುವ ಪುರದಮ್ಮ ದೇವಾಲಯ ನೀವು ಸಹ ಒಮ್ಮೆ ಭೇಟಿ ನೀಡಿ ನಿಮ್ಮ ಸಕಲ ಕಷ್ಟಗಳನ್ನು ನಿವಾರಿಸಿಕೊಳ್ಳಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here