ಕರೋನ ಬಗ್ಗೆ ಅಣ್ಣಪ್ಪನ ಮುಂದೆ ಧರ್ಮಾಧಿಕಾರಿಗಳ ದೈವಪ್ರಶ್ನೆ! ಉತ್ತರ ಅಚ್ಚರಿ ಮೂಡಿಸುತ್ತದೆ!

0
2986

ಕರೋನವೈರಸ್ ಇನ್ನು ಎಷ್ಟು ಮಾನವಕುಲವನ್ನು ಕಾಡುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಹುಟ್ಟಿರುತ್ತದೆ, ಹಲವು ಸ್ವಾಮೀಜಿಗಳು, ಇದೇ ವಿಚಾರದ ಬಗ್ಗೆ ಭವಿಷ್ಯವನ್ನು ನುಡಿಯುತ್ತಾರೆ, ಹಲವು ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ ಕುಕ್ಕೆ ಸುಬ್ರಮಣ್ಯ, ಮಲೆ ಮಹದೇಶ್ವರ, ನಂಜನಗೂಡು, ಶೃಂಗೇರಿ ಶಾರದೆ, ಹೊರನಾಡು, ಕಟೀಲು ಈ ರೀತಿಯ ಕ್ಷೇತ್ರಗಳಲ್ಲಿ ಭಕ್ತಾದಿಗಳಿಗೆ ನಿಷೇಧ ಹೇರಲಾಗಿದೆ, ಆದರೂ ದೇವರಿಗೆ ಪೂಜಾ ಕಾರ್ಯಗಳು ನಿಂತಿಲ್ಲ, ಆ ದೇವಸ್ಥಾನದ ಅರ್ಚಕರು ಎಂದಿನಂತೆ ಪೂಜಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಅಣ್ಣಪ್ಪನ ಮುಂದೆ ದೈವಪ್ರಶ್ನೆ ಮಾಡಿರುವ ಬಗ್ಗೆ ಪ್ರಕಟಣೆ ಯೊಂದನ್ನು ಮಾಡಿದ್ದಾರೆ, ಈ ಪ್ರಶ್ನೆಯು ಇಂದಿನ ಭಾರತದ ಸ್ಥಿತಿಯ ಬಗ್ಗೆ ಆಗಿದ್ದು ಅಷ್ಟೇ ಅಲ್ಲದೆ ಈ ಸಮಯದಲ್ಲಿ ಧರ್ಮಸ್ಥಳದಲ್ಲಿ ವಿಶು ಜಾತ್ರೆ, ನೇಮ ಕೋಲ ಮತ್ತು ರಥೋತ್ಸವ ಗಳನ್ನು ಮಾಡಬೇಕಿತ್ತು, ಆದರೆ ಪರಿಸ್ಥಿತಿ ಬದಲಾದ ಕಾರಣ ಈ ಉತ್ಸವಗಳನ್ನು ಹೇಗೆ ಮಾಡುವುದು ಎಂಬುವ ಪ್ರಶ್ನೆಯನ್ನು ಧರ್ಮಾಧಿಕಾರಿಗಳು ಅಣ್ಣಪ್ಪ ದೇವರ ಮುಂದೆ ಇಟ್ಟಿದ್ದಾರೆ.

ನಂತರ ಧರ್ಮಾಧಿಕಾರಿಗಳು ನಡೆಯಬೇಕಿದ್ದ ಎಲ್ಲಾ ಧಾರ್ಮಿಕ ಕಾರ್ಯಗಳಾದ ರಥೋತ್ಸವ ನೇಮ ಕೋಲ, ಹಾಗೂ ವಿಶ್ವ ಜಾತ್ರೆಯನ್ನು ರದ್ದು ಮಾಡಿದ್ದಾರೆ ಹಾಗೂ ಈ ಬಗ್ಗೆ ಸ್ವತಃ ವೀರೇಂದ್ರ ಹೆಗಡೆ ಅವರೇ ಪ್ರಕಟನೆ ಮಾಡಿ ತಿಳಿಸಿದ್ದಾರೆ ಪ್ರಕಟನೆಯಲ್ಲಿ ಮುಂದಿನ ಸೂಚನೆಯ ವರೆಗೂ ದೇವಸ್ಥಾನಕ್ಕೆ ಭಕ್ತರ ಪ್ರವೇಶ ಹಾಗೂ ದರ್ಶನ ರದ್ದು ಮಾಡಲಾಗಿದೆ, ಎಲ್ಲಾ ಕಾರ್ಯವನ್ನು ದೈವಪ್ರಶ್ನೆ ಮೂಲಕ ಸ್ವಾಮಿಯ ಒಪ್ಪಿಗೆ ಪಡೆದು ನಂತರವೇ ಪರಿವರ್ತನೆ ಮಾಡಲಾಗಿದೆ, ಭಕ್ತರು ಸಂಕೋಚ ಪಡುವ ಅಗತ್ಯವಿಲ್ಲ, ದೈವ ಮತ್ತು ದೇವರು ಈ ಪರಿವರ್ತನೆಗೆ ಒಪ್ಪಿಗೆ ನೀಡಿದ್ದಾರೆ, ಹಾಗಾಗಿ ಸರ್ಕಾರ ಆದೇಶದಂತೆ ಅವರ ಸೂಚನೆಗಳನ್ನು ಪಾಲಿಸಿ ಸೋಂಕು ಮುಕ್ತರಾಗಿ ಇರೋಣ, ಎಂದು ಧರ್ಮಾಧಿಕಾರಿಗಳು ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here